ಶಾಂತಿದೂತ

ಶಾಂತಿದೂತ

ಕವನ

ಹಾರು ಬಾನಾಡಿ ನೀನಾಗಸಕೆ ಮುಗಿಲನ್ನು

ಮೀರಿ,ಪರ್ವತ ಕೊಳ್ಳ ಸಾಗರಗಳ

ದಾಟಿ ದೇಶವಿದೇಶದೂರುಗಳ ನೋಡುತ್ತ

ನೋಡು ಲೋಕದ ವಿವಿಧ ಭಾಗಂಗಳ          [೧]

ನಿನ್ನ ಸುತ್ತಲ ನೆಲವು ಕರುಣೆಯಿಲ್ಲದ ಬರಡು

ಯಾರಿಗೂ ಚಿತ್ತ ನೆಮ್ಮದಿಯಲಿಲ್ಲ

ಎಲ್ಲರಿಗೂ ತಮ್ಮ ಜೀವನದ ಚಿಂತೆಯೇ ಇರಲು

ಮನುಕುಲವನಿಂದು ರಕ್ಷಿಸುವರಿಲ್ಲ               [೨]

ವಿದ್ರೋಹ,ದೌರ್ಜನ್ಯ,ಗದ್ದುಗೆಯ ಮೋಹಗಳು

ತುಂಬಿರುವ ರಾಜಕಾರಣದ ಕಡಲು

ದೇಶದೇಶದ ನಡುವೆ ದ್ವೇಷ ಭಾವನೆ ತುಂಬಿ

ಮನುಕುಲವ ನುಂಗಲಿಕೆ ಮುಂದೆ ಬರಲು       [೩]

ಎಚ್ಚರಿಸು ಮನುಜರನು ಉದಯ ರವಿ ನಾಡಿನಲಿ

ಆದ ದುಸ್ಥಿತಿ ಮರಳಿ ಬಾರದಂತೆ

ನಿನ್ನ ರೆಕ್ಕೆಯ ಸ್ನೇಹ ಬಾವುಟವ ಬೀಸುತ್ತ

ಬೋಧಿಸೈ ಜನರಿಂಗೆ ಶಾಂತಿ-ಸಮತೆ          [೪]

Comments