ಶಾಂತಿದೂತ
ಕವನ
ಹಾರು ಬಾನಾಡಿ ನೀನಾಗಸಕೆ ಮುಗಿಲನ್ನು
ಮೀರಿ,ಪರ್ವತ ಕೊಳ್ಳ ಸಾಗರಗಳ
ದಾಟಿ ದೇಶವಿದೇಶದೂರುಗಳ ನೋಡುತ್ತ
ನೋಡು ಲೋಕದ ವಿವಿಧ ಭಾಗಂಗಳ [೧]
ನಿನ್ನ ಸುತ್ತಲ ನೆಲವು ಕರುಣೆಯಿಲ್ಲದ ಬರಡು
ಯಾರಿಗೂ ಚಿತ್ತ ನೆಮ್ಮದಿಯಲಿಲ್ಲ
ಎಲ್ಲರಿಗೂ ತಮ್ಮ ಜೀವನದ ಚಿಂತೆಯೇ ಇರಲು
ಮನುಕುಲವನಿಂದು ರಕ್ಷಿಸುವರಿಲ್ಲ [೨]
ವಿದ್ರೋಹ,ದೌರ್ಜನ್ಯ,ಗದ್ದುಗೆಯ ಮೋಹಗಳು
ತುಂಬಿರುವ ರಾಜಕಾರಣದ ಕಡಲು
ದೇಶದೇಶದ ನಡುವೆ ದ್ವೇಷ ಭಾವನೆ ತುಂಬಿ
ಮನುಕುಲವ ನುಂಗಲಿಕೆ ಮುಂದೆ ಬರಲು [೩]
ಎಚ್ಚರಿಸು ಮನುಜರನು ಉದಯ ರವಿ ನಾಡಿನಲಿ
ಆದ ದುಸ್ಥಿತಿ ಮರಳಿ ಬಾರದಂತೆ
ನಿನ್ನ ರೆಕ್ಕೆಯ ಸ್ನೇಹ ಬಾವುಟವ ಬೀಸುತ್ತ
ಬೋಧಿಸೈ ಜನರಿಂಗೆ ಶಾಂತಿ-ಸಮತೆ [೪]
Comments
ಉ: ಶಾಂತಿದೂತ