ಶಾಂತಿ ದೂತರು

ಶಾಂತಿ ದೂತರು

ಕವನ

ಪಿಸುಮಾತಿನ ಒಳದನಿಯ ವೈಖರಿಯ

ಅರಿಯುವೆನು ಸಖಿ||

ನಸುನಗುತ ಕಾನನದಿ ಸುತ್ತುತ

ತಿಳಿಯುವೆನು ಸಖಿ||

 

ಜಗದ ಜಂಜಡಗಳ ಮರೆತು

ಲೋಕದಲಿ ಸಾಗೋಣ|

ಸೊಗಸಿನ ನಲ್ನುಡಿನ ಇಂದು

ಆಲಿಸುವೆನು ಸಹಿ||

 

ಶಿಖರದ ಶೃಂಗದಲಿ ಪ್ರೀತಿಯಲಿ

ಅಪ್ಪಿ ಮುದ್ದಾಡೋಣ|

ಪ್ರಖರದ ಛಾಯೆಯ ನೋಟದು

ಬದುಕುವೆನು ಸಖಿ||

 

ಗಗನದಲಿ ಸಂಚರಿಸಿ ಬಾನಿನ

ಬಣ್ಣವ ತಿದ್ದೋಣ

ನಗುತ್ತಲಿ ಮನದ ಸಂತಸವನು

ಅರುಹುವೆನು ಸಖಿ||

 

ಶಾಂತಿಯ ದೂತರಾಗಿ ಬಾನಿನ

ಅಂಗಳದಿ ಹಾರಾಡೋಣ||

ಕ್ರಾಂತಿಕವಿ ಅಭಿನವನ ಕಾವ್ಯದಲಿ

ನಲಿಯುವೆನು ಸಖಿ||

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್