ಶಾಂತಿ

ಶಾಂತಿ

ಬರಹ

ಶಾಂತಿ (ನಾಮಪದ) [ಸಂಸ್ಕೃತಮೂಲ]
೧. ನೆಮ್ಮದಿ; ಚಿತ್ತಸ್ವಾಸ್ಥ್ಯ
೨. ತಾಳ್ಮೆ; ಸೈರಣೆ
೩. (ಭಾವೋದ್ರೇಕ ಮೊದಲಾದವನ್ನು) ಉಪಶಮನ ಮಾಡುವುದು; ಸಮಾಧಾನಪಡಿಸುವುದು
೪. ಅನಿಷ್ಟಪರಿಹಾರಕ್ಕಾಗಿ ಮಾಡುವ ಜಪ, ತಪ, ಹೋಮ ಮುಂತಾದ ವಿಧಿ (=ಶಾಂತಿಕ)
೫. ಒಳ್ಳೆಯ ಅದೃಷ್ಟ; ಸೌಭಾಗ್ಯ
೬. ಕೋಮಲತೆ; ಮೃದುತ್ವ
೭. ವಿರಾಮ; ವಿಶ್ರಾಂತಿ
೮. ಮೌನ; ನೀರವತೆ
೯. ಯುದ್ಧದ ಗಲಭೆಯಿಲ್ಲದ ಸ್ಥಿತಿ
೧೦. ದೇವಾಲಯದ ಅರ್ಚಕ, ಪೂಜಾರಿ
೧೧. [ಶೈವಧರ್ಮದಲ್ಲಿ] ನಿಯತಿ, ವಿದ್ಯಾ, ಪ್ರತಿಷ್ಠಾ, ಶಾಂತಿ ಮತ್ತು ಶಾಂತ್ಯತೀತ ಎಂಬ ಪರಶಿವನ ಐದು ಕಲೆಗಳಲ್ಲಿಒಂದು.
೧೨. [ಜೈನಧರ್ಮದಲ್ಲಿ] ಇಪ್ಪತ್ತುನಾಲ್ಕು ಜನ ತೀರ್ಥಂಕರರಲ್ಲಿ ಹದಿನಾರನೆಯವನು.

(ಶಾಂತಿಕೆ=ಸಮಚಿತ್ತ; ಶಾಂತಿಧನ=ನೆಮ್ಮದಿಯೇ ಸಂಪತ್ತಾಗಿ ಉಳ್ಳವನು; ಶಾಂತಿಪರ್ವ=ಸಮಾಧಾನದ ಉತ್ಸವ; ಶಾಂತಿಪಾಠ=೧.ಶಾಂತಿಮಂತ್ರಪಠನ, ೨.ಶಾಂತಿಯನ್ನು ಸಾರುವುದು; ಶಾಂತಿಪಾಲನೆ=ನೆಮ್ಮದಿಯನ್ನು ರಕ್ಷಿಸುವುದು; ಶಾಂತಿಭಂಗ=ನೆಮ್ಮದಿಯ ನಾಶ; ಶಾಂತಿಮಜ್ಜನ=ಅನಿಷ್ಟನಿವಾರಣಾರ್ಥವಾಗಿ ಮಂತ್ರಪೂತವಾದ ತೀರ್ಥೋದಕದ ಸ್ನಾನ; ಶಾಂತಿಮರ<ತುಳುವಿನ ಸಾಂತಿಮರ)

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet