ಶಾಕುಂತಳೆ

ಶಾಕುಂತಳೆ

ಕವನ

ಮೋಡಿ ಮಾಡಿದಳಂದು

ಎಲೆಯ ಮರೆಯಲಿ

ನಿಂತು ಅದೇನೋ

ಹೇಳಲು ತವಕಿಸಿದಂತೆ

ಪ್ರೇಮ ಕವಿಯ

ಸ್ಥಾಪಿಸಿದಂತೆ.....

 

ಒಲವ ಗುಡಿಯ

ಆ ನಯನಗಳು...

ಕದ್ದು ಕದ್ದು ನನ್ನನೇ ನೋಡಿದಂತೆ..

ಎದೆಯೊಳಗೆ ಬಿಟ್ಟ

ಇರುವೆಯಂತೆ...

ತೂಗುಯ್ಯಾಲೆಯಂತೆ...

 

ಮೋಹದ ದಾಹ..

ಪ್ರೀತಿಯ ಮಂತ್ರಕೆ

ಸುರಿಸಿದಳಾ ಹೂಮಳೆ....

ತಾಪಾಗ್ನಿಯಲಿ

ಬೆಂದ  ಪುತ್ಥಳಿಯ ಸಂಗಮ

               

ಕನಸೋ ನನಸೋ...

ವಿರಹದ 

ವಿಧಿಯ ಲೀಲೆಯ

ಶಾಪಕೆ ತಲೆಬಾಗಿ 

ಗುರಿಯಾದ ನಲ್ಲೆ

 

ನೆನಪಾಗುತ್ತಿದೆ..

ರಾಜಾರವಿವರ್ಮನ

ಕುಂಚದಲಿ ಅರಳಿದ

ಕಾಳಿದಾಸನ

ಶಾಕುಂತಳೆಯಂತೆ…

-ದೀಪಾ ಪಾವಂಜೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್