ಶಾಕುಂತಳೆಯ ಸ್ವಗತಗಳು

ಶಾಕುಂತಳೆಯ ಸ್ವಗತಗಳು

ಬರಹ

ಎಲ್ಲ ಪ್ರಿಯತಮರು ಶಾಪಗ್ರಸ್ತರೇ!
ಕಡೆಪಕ್ಷ ಏನಿಲ್ಲವೆಂದರೂ
ತಂತಮ್ಮ ಪ್ರಿಯತಮೆಯನ್ನು
ಒಂದಷ್ಟು ದಿವಸ ಮರೆತು
ಹಾಯಾಗಿ ಇದ್ದುಬಿಡುವ ಶಾಪಗ್ರಸ್ತರು!
ಪಾಪ ಅವರು ತಾನೆ ಏನು ಮಾಡಿಯಾರು
ಅವರ ಪ್ರೀತಿ ಮರೆವಿನ ಹೊಳೆಗೆ ಸಿಕ್ಕು ಕೊಚ್ಚಿಹೋಗಿಬಿಟ್ಟರೆ?

ಎಲ್ಲ ಪ್ರಿಯತಮೆಯರು ಶಾಪಗ್ರಸ್ತರೇ!
ತನ್ನ ಪ್ರಿಯತಮನ ಸ್ಮರಣೆಯಿಂದಲೇ
ಮರೆತು ಹೋಗುವಷ್ಟು ಶಾಪಗ್ರಸ್ತರು!
ಅವರು ಕಾಯುತ್ತಲೇ ಇರಬೇಕು
ತಮ್ಮ ಗುಟ್ಟು ಅವನ ನೆನಪಿನ
ಬಲೆಯಲ್ಲಿ ಸಿಕ್ಕು ರಟ್ಟಾಗುವವರಿಗೂ!

ಪ್ರತಿ ಮಗುವೂ ಶಾಪಗ್ರಸ್ತನೇ!
ತಂದೆಯಿಲ್ಲದೆ ಬೆಳೆಯುವ
ಸದಾ ಸಿಂಹದ ಬಾಯಿಯಲ್ಲಿಯೇ ಕೈಯಿಟ್ಟುಕೊಂಡು
ಆಟವಾಡುವ ಶಾಪಗ್ರಸ್ತ!

ಮಲಯಾಳಂ ಮೂಲ: ಕೆ. ಸತ್ಚಿದಾನಂದ
ಇಂಗ್ಲೀಷಗೆ: ಕೆ. ಸತ್ಚಿದಾನಂದ
ಕನ್ನಡಕ್ಕೆ: ಉದಯ ಇಟಗಿ
ಚಿತ್ರಕೃಪೆ: ತೇಜಸ್ವಿನಿ ಹೆಗಡೆಯವರ "ಮಾನಸ" ಬ್ಲಾಗ್‍