ಶಾಲೆ !! ಅಕ್ಕಾ ನಿನ್ನ ಕ೦ದನ ಆಕ್ರ೦ದನವ ನೀ ಕೇಳೆ. !!

ಶಾಲೆ !! ಅಕ್ಕಾ ನಿನ್ನ ಕ೦ದನ ಆಕ್ರ೦ದನವ ನೀ ಕೇಳೆ. !!

ಬರಹ

ಶಾಲೆ

ಅಕ್ಕಾ ನಿನ್ನ ಕ೦ದನ ಆಕ್ರ೦ದನವ ನೀ ಕೇಳೆ.
ಶಾಲೆಗೆ ಸೇರಿ ನಶಿಸೈತೆ ಸ್ವ೦ತ ಪ್ರಜ್ನಯ ಜ್ವಾಲೆ.

ಕಳೆದು ಹೋದ ಕಾಲವ ಕೊಡುವರ್ಯಾರು ನಾಳೆ.
ಓದದ್ದೇ ಓದಿ ಪುಸ್ತಕದೊಳಗಿಲ್ಲವಾಯ್ತೊ೦ದೂ ಹಾಳೆ.

ತಲೆಯೊಳಗೆ ತು೦ಬೈತೆ ಮಣಮಣ ಒಣ ಪದಗಳ ಧೂಳೆ.
ತಾಯಿ ಮನೆಯೊಳಗೆ ಕಲಿಸುವ ವಿದ್ಯೆಯೇನು ಕೀಳೇ ?

ದಿನ ನಿತ್ಯ ವಾಗೈತೆ ನಾಲಗೆಯಿ೦ದ ಸತ್ಯದ ಕೊಲೆ.
ಎಷ್ಟು ಮ೦ದಿಯ ಬುದ್ದಿ ತಿದ್ದುವೆ ನೀ ಹೇಳು ಕೋಲೆ.

ಯಾಕೆ೦ದು ನೀ ಕೇಳೆಲು ಬೇಡ
ನಾ ಉತ್ತರವ ಹೇಳಲು ಬೇಡ.

ಅವಮಾನದಿ೦ದ ಅಳುತ್ತವಳೇ
ಹದಿನಾಲ್ಕು ವರುಷದ ಬಾಲೆ.

ಕುಣಿದಾಡುವ ದೇಹವಾಗೈತೆ ಎಲುಬಿನ ಮೂಳೆ.
ಕಣ್ಣ ಕಾಣದೆ ಕೂತು ಸೇರೈತೆ ಕತ್ತಲೆಯ ಮೂಲೆ.

ಸ೦ದು ನಿ೦ದು ಕು೦ದವನ ಕತ್ತಿಗೆ ಬಿದೈತ್ತೆ ಹೂವಿನ ಮಾಲೆ.
ನಿಲ್ಲದೆ ಕೂರದೆ ಕೇಳದವನ ಕತ್ತಿಗೆ ಬಿದೈತ್ತೆ ನೇಣು ಹಗ್ಗದ ನೂಲೆ.

ಬಲೇ ಬಲೇ ಬಲೇ
ಶಾಲೆಯಾಯ್ತು ಅಬಲರ ಹಿ೦ಸಿಸಿ ಬ೦ಧಿಸುವಾ ಬಲೆ.
ಕಲಿತು ಹರಿಸಿದ್ದಾಯ್ತು ಕಪ್ಪು ಕೊಳೆಯ ಹೊಳೆ.

ಶಾಲೆಯ ಬಿಟ್ಟೂ ಉ೦ಟೇನು ಕಲಿಕೆಗೆ ಬೇರೊ೦ದು ನೆಲೆ ??
ಹೇ ಕೃಷ್ಣ ! ಧ್ವ೦ಸವಾಗಲಿ ಕಲಿ ಕ೦ಸ ಲೀಲೆ.