ಶಿಕ್ಷಕ ವೃತ್ತಿಯ ರಸನಿಮಿಷ!

ಶಿಕ್ಷಕ ವೃತ್ತಿಯ ರಸನಿಮಿಷ!

ನಾನೊಂದು ಗುಡ್ಡಗಾಡು ಪ್ರದೇಶದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ಮಾಡುವ ಸಂದರ್ಭ. ವಾರ್ಷಿಕೋತ್ಸವ ತಯಾರಿ ನಡೆಯುತ್ತಿತ್ತು, ಆಗೆಲ್ಲಾ ರಾತ್ರಿಯಿಂದ ಬೆಳಗಿನವರೆಗೆ ಹಳ್ಳಿ ಶಾಲೆಗಳಲ್ಲಿ ಮನೋರಂಜನೆ ಪ್ರದರ್ಶನವಿರುತಿತ್ತು. ನಮ್ಮ ಶಾಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು, ನಾನು ಇಬ್ಬರೇ. ವಾರ್ಷಿಕೋತ್ಸವದ ಮುನ್ನಾ ದಿನ ಶಾಲೆಯಿಂದ ಹೊರಡುವಾಗ ಸಂಜೆ ಏಳು ಗಂಟೆಯಾಗಿತ್ತು. ಸುಮಾರು ಇಪ್ಪತ್ತು ಹೆಜ್ಜೆಗಳಷ್ಟು ಶಾಲೆಯಿಂದ ದೂರ ನಾನು ಬಂದಿರಬಹುದು, ಅಷ್ಟಾಗುವಾಗ, ಟೀಚರ್, ಟೀಚರ್ ಅಂತ ಜೋರಾಗಿ ಕರೆಯುವುದು (ಕೂಗುವುದು) ಕೇಳಿಸಿತು. ಅಂಗನವಾಡಿ ಶಿಕ್ಷಕಿ ಲೀಲಾ ಎನ್ನುವವರು ‘ಟೀಚರ್, ನಾಳೆ ಬರುವಾಗ ಹಗ್ಗ ತೆಕ್ಕೊಳಿ’ ಅಂತ ಜೋರಾಗಿ ಹೇಳುತ್ತಿದ್ದರು. ಆಯಿತು ಅಂತ ಹೇಳಿ ಮನೆಕಡೆ ಹೊರಟೆ. ಅಲ್ಲೇ ಇದ್ದ ಮನೆಯ ಸದಸ್ಯರೊಬ್ಬರು, *ಟೀಚರ್ ಹಗ್ಗ ತೆಕ್ಕೊಂಡರೆ ನಾಳೆ ಸ್ಕೂಲ್ಡೆ ಹೇಗಾಗುವುದು* ಅಂತ ಹೇಳಿ, ಮನೆಯ ಸದಸ್ಯರೆಲ್ಲರೂ (ಅವಿಭಕ್ತ ಕುಟುಂಬದ ಸುಮಾರು ೨೫ ಜನರು) ಜೋರಾಗಿ ನಗಾಡಿದ್ದೆ ನಗಾಡಿದ್ದು. ಎಷ್ಟೋ ಸಲ ಈ ಘಟನೆಯನ್ನು ಹೇಳಿಕೊಂಡು ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದು ಇದೆ.(೧೯೯೫--೯೬)ರಲ್ಲಿ ನಡೆದ ಘಟನೆ.

-ರತ್ನಾ ಭಟ್ ತಲಂಜೇರಿ (ನಿವೃತ್ತ ಮುಖ್ಯೋಪಾಧ್ಯಾಯಿನಿ)