ಶಿರ್ಡಿಗೆ ಹೋಗಲಿಕ್ಕುಂಟಾ ? ರೈಲಿನಲ್ಲಿ ಹೋಗಿ. (೧, ಮಾರ್ಚ್, ೨೦೦೯) ರವಿವಾರ, ಸುರು ಆಗ್ತದೆ !

ಶಿರ್ಡಿಗೆ ಹೋಗಲಿಕ್ಕುಂಟಾ ? ರೈಲಿನಲ್ಲಿ ಹೋಗಿ. (೧, ಮಾರ್ಚ್, ೨೦೦೯) ರವಿವಾರ, ಸುರು ಆಗ್ತದೆ !

ಬರಹ

ಇವತ್ತು ರೈಲು ಸೇವೆ ಮಧ್ಯಾನ್ಹ ೩ ಗಂಟೆಗೆ ಸುರು ಆಗಿದೆ. ನೋಡಿ. ಓದಿ.

ಓಹ್ ! ವಿವರಗಳು ನಿಮಗೆ ಬೇಕೇನೋ. ಸರಿ, ಇಲ್ಲಿದೆ ನೋಡಿ.

** ೧. ಮುಂಬೈ ನ CST ರೈಲ್ವೆ ನಿಲ್ದಾಣದಿಂದ ಶಿರ್ಡಿಗೆ-[೧೨ ಘಂಟೆ ಪ್ರಯಾಣ]

CST ೧೦-೫೫ PM ಶಿರ್ಡಿಯನ್ನು ಮುಟ್ಟುವುದು ಮರುದಿನ, ೧೦-೩೦ AM.

** ೨. ವಾಪಸ್ ಬರಲು, ಶಿರ್ಡಿಯಿಂದ ೪-೪೦ PM, ಮುಂಬೈ ನ CST ಗೆ ಮರುದಿನ, ೪-೨೫ AM.

ಈ ೪೫೭ ಕಿ. ಮೀ ಪ್ರಯಾಣಕ್ಕೆ ೧೨ ಗಂಟೆ ತಗುಲುತ್ತದೆ. ಒಟ್ಟು ದಾರಿಯಲ್ಲಿ ೨೨ ನಿಲ್ದಾಣಗಳಿವೆ. ತಗಲುವ ಕ್ರಯ : ೧೩೦/-ರೂಪಾಯಿಗಳು.

* ೧ AC ೩ ಟೈರ್ ಹಾಗೂ ೨, ೩ ಟೈರ್ AC ಇಲ್ಲದ ಡಬ್ಬಿಗಳಿವೆ. ೨ ಜನರಲ್ ಕುಳಿತು ಪ್ರಯಾಣಿಸುವ ಕಂಪಾರ್ಟ್ಮೆಂಟ್ ಗಳಿವೆ. ಮತ್ತೊಂದು ಲಗೇಜ್/ಕುಳಿತುಪ್ರಯಾಣಿಸುವ ಕಂಪಾರ್ಟ್ಮೆಂಟ್, ಸ್ಟೇಷನ್ ನಿಂದ ಸಾಯಿಬಾಬಾ ಮಂದಿರಕ್ಕೆ ಹೋಗಲು ೧೦ ನಿಮಿಷ ಸಾಕು.

ಈ ರೈಲು ಶಿರ್ಡಿಗೆ ಹೋಗುವ ದಾರಿಯಲ್ಲಿ ಬರುವ ನಿಲ್ದಾಣಗಳು :

ದಾದರ್, ಥಾನೆ, ಕಲ್ಯಾನ್, ಪುಣೆ, ಧೋಂಡ್, ಅಹ್ಮೆದ್ ನಗರ್, ಪುಂತಂಬ, ಶಿರ್ಡಿ. ಶಿರ್ಡಿಗೆ ಹೋಗಿ ’ಸಾಯಿಬಾಬಾ ’ ರ ದರ್ಶನಾಕಾಂಕ್ಷಿಗಳಿಗೆ ತಾಜಾ ಸಮಾಚಾರ :

ರೈಲ್ವೆ ಸಚಿವ, ಶ್ರೀ ಲಾಲು ಪ್ರಸಾದರು ಶನಿವಾರ, ಇಂದು ೪ ಗಂಟೆಗೆಯಿಂದ ಶಿರ್ಡಿಗೆ ರೈಲುಸೇವೆ ಪ್ರಾರಂಭಿಸಿದರು. ರವಿವಾರದಿಂದ ಅಂದರೆ, ನಾಳೆಯಿಂದ ರೈಲು ಮುಂಬೈ ನ CST ಯಿಂದ ಹೊರಡುತ್ತದೆ..

ಸೌಕರ್ಯಗಳು :

ಶಿರ್ಡಿ ರೈಲ್ವೆ ಸ್ಟೇಷನ್ ನಲ್ಲಿ 2 Waiting Rooms, ಮತ್ತು Dormitory ಗಳಿವೆ. ೫೦೦ ಮೀ ಉದ್ದದ platform ೨೨ Coach Train ನಿಲ್ಲಬಹುದು. ಒಟ್ಟಾರೆ, ಈ project ಗೆ ತಗುಲಿದ ವೆಚ್ಚ : ೭೮ ಕೋಟಿ ರುಪಾಯಿಗಳು.

೨೦೦೦-೨೦೦೨ ರಲ್ಲಿ ಆಯೋಜಿಸಿದ ಈ ಪ್ರೊಜೆಕ್ಟ್ ಗೆ ಅಂದಾಜುಮಾಡಿದ ವೆಚ್ಚ, ೩೦.೨೨ ಕೋಟಿ ರೂ. ಆದರೆ, ರೈತರಿಂದ ಕಾನೂನುರೀತ್ಯ ಜಮೀನು ಸ್ವಾಧೀನಪಡಿಸಿಕೊಂಡು ಯೋಜನೆಯನ್ನು ಆರಂಭಿಸಲು, ರಾಜ್ಯಸರ್ಕಾರಕ್ಕೆ, ತಡವಾಯಿತು.

ಪುತಂಬ ರೈಲ್ವೆ ನಿಲ್ದಾಣ, ಸೆಂಟ್ರೆಲ್ ರೈಲ್ವೆಯ ಮನ್ಮಾಡ್ ಧೋಂಡ್ ಲೈನ್ ನಲ್ಲಿದೆ. (ಮನಮಾಡ್ ಗೆ ೭೦ ಕಿ.ಮೀ ಮತ್ತು ಶಿರ್ಡಿಗೆ ೨೦ ಕಿ. ಮೀದೂರದಲ್ಲಿದೆ)

--Source : 'Times of India News Paper', [Dt : 27th, Feb, 2009]