ಶಿವಮೂರ್ತಿ ಶರಣರು, ಚಂಪಾ ಹಾಗು ಬಿ.ಎಲ್.ವೇಣು ಚಪ್ಪಲಿ ಸಲಹೆ

ಶಿವಮೂರ್ತಿ ಶರಣರು, ಚಂಪಾ ಹಾಗು ಬಿ.ಎಲ್.ವೇಣು ಚಪ್ಪಲಿ ಸಲಹೆ

ಬರಹ

ಹಾರ ಹಾಕುವ ಬದಲು ಇನ್ನು ಸಭೆ, ಸಮಾರಂಭಗಳಲ್ಲಿ ಚಪ್ಪಲಿ ಹಾರ ಹಾಕಲು ಶಿವಮೂರ್ತಿ ಶರಣರು ಹೇಳಿದರಂತೆ- ಸುದ್ದಿ. ಮುಂದುವರೆದು ಚಂಪಾ, ಬಿ.ಎಲ್.ವೇಣು ಪತ್ರಿಕೆಗಳಲ್ಲಿ ಪರಸ್ಪರ ಅಕ್ಷರ ಪ್ರೌಢಿಮೆ ಮೆರೆಯುತ್ತ, ವೈಚಾರಿಕ ಎತ್ತರ! ಪ್ರದರ್ಶಿಸುತ್ತ ‘ಪತ್ರ ಸಮರ’ ಆರಂಭಿಸಿದ್ದಾರೆ. ಜಾತಿ ರಹಿತ, ಸಾಮರಸ್ಯದ ಮತ್ತು ಕಲ್ಯಾಣ ರಾಜ್ಯದ ಪರಿಕಲ್ಪನೆಯ ಸಮಾಜ ನಿರ್ಮಿಸಲು ಶ್ರಮಿಸಿದ ೧೨ನೇ ಶತಮಾನದ ಕ್ರಾಂತಿಕಾರ ಬಸವಣ್ಣನವರನ್ನು/ ಅವರ ನಡಾವಳಿಗಳನ್ನು ಸಹ ವಿವಾದದಲ್ಲಿ ಎಳೆದು ತಂದಿದ್ದಾರೆ.

ವಯುಕ್ತಿಕ ಅಭಿಪ್ರಾಯಗಳನ್ನು ಸಾರ್ವತ್ರಿಕ ಅಭಿಪ್ರಾಯ ಎಂಬಂತೆ ಹೇರುವುದು? ನಾವು ಹೇರಿಸಿಕೊಳ್ಳುವುದು!
ಇಂದು.. ಸಮಾಜದ ಸಾಮರಸ್ಯ ಕೆಡಿಸಲು (ಬೌದ್ಧಿಕ ಭ್ರಷ್ಟತೆ!) ಸಾಹಿತಿಗಳು ಆರಂಭಿಸುವುದಾದರೆ..ಸಧ್ಯದಲ್ಲೇ ಅದು ಬಹಿಷ್ಕೃತ ವಲಯ(ಸಾಹಿತಿ ಮತ್ತು ಅವರ ಸಾಹಿತ್ಯ)ಆಗುವ ದಿನಗಳು ದೂರವಿಲ್ಲ.

ಶರಣರು, ಹಾಗೆ ಏಕೆ ಹೇಳಿದರು? ಯಾವಾಗ ಹೇಳಿದರು? ಯಾರಿಗೆ ಹೇಳಿದರು? ಯಾರ ಮುಂದೆ ಹೇಳಿದರು? ಯಾತಕೋಸ್ಕರ ಹೇಳಿದರು? ಉದ್ದೇಶವೇನಿತ್ತು? ಹಾಗೆ ಮಾಡುವುದರಿಂದ/ ಮತ್ತು ಈಗ ಎದ್ದಿರುವ ವಿವಾದದಿಂದ ಸಮಾಜಕ್ಕೆ ಏನು ಲಾಭ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet