ಶಿವಾ ಅಂತ ಹೋಗುತ್ತಿದ್ದೆ

ಶಿವಾ ಅಂತ ಹೋಗುತ್ತಿದ್ದೆ

ಬರಹ

ಜಾಕಿ ಚಿತ್ರದ ಶಿವಾ ಅಂತ ಹೋಗುತ್ತಿದ್ದೆ ಹಾಡಿಗೆ ಸಾಹಿತ್ಯ ಬದಲಾಯಿಸಿದ್ದೇನೆ..ಇದು ಕೇವಲ ಹಾಸ್ಯಕ್ಕಾಗಿ.


 


ಶಿವಾ ಅಂತ ಹೋಗುತ್ತಿದ್ದೆ ಸಿ.ಎಂ.ಆಗಿ


ಸಿಕ್ಕಾಪಟ್ಟೆ ಫೈಟು ಇತ್ತು ಸೀಟಿಗಾಗಿ...


ಅರ್ಧಂಬರ್ಧ ಸಪೋರ್ಟ್ ಇತ್ತು ಪಕ್ಷದಲಿ...


ನೀ ಹೋದೆ ಸೈಡಿನಲ್ಲಿ..


 


ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ..


ಕಂಬ್ಳಿ ಹುಳ ಬಿಟ್ಟಂಗಾಯ್ತು ಹಾಸ್ಗೆನಲಿ..


ಕಚಗುಳಿ ಇಟ್ಟಂಗಾಯ್ತು ಬೆನ್ನಿನಲಿ..


ನೀ ಬಂದಾಗ ಪಕ್ಷದಲಿ.. ಪಕ್ಷದಲಿ..ಪಕ್ಷದಲಿ..ಪಕ್ಷದಲಿ...


 


ಗೂಳಿಯನ್ನು ಬಿಡಂಗಿಲ್ಲ...ಶೋಭಾ ನನ್ನ ಬಿಡೋದಿಲ್ಲ..


ಗೂಳಿಯನ್ನು ಬಿಡಂಗಿಲ್ಲ...ಶೋಭಾ ನನ್ನ ಬಿಡೋದಿಲ್ಲ.


ಅಯ್ಯೋ ಪಾಪ ಹುಡುಗಿ ಜೀವ ಹೆದರುವುದು..


ಥೂ ನಂಗೆ ಯಾಕೆ ಹಿಂಗೆ ಎಲ್ಲ ಅನಿಸುವುದು...


ಯಾರ ಮಾತು ಕೇಳಲಿಲ್ಲ...ಯಾರ ಮಾತು ಕೇಳಲಿಲ್ಲ...


ಹಿಂದೆ ಮುಂದೆ ನೋಡಲಿಲ್ಲ...ಎಲ್ಲರನ್ನು ಪಕ್ಷದಿಂದ ಕಿತ್ತುಕೊಂಡು..ಕಲ್ಲು ಚಪ್ದಿಯನ್ನು ನಾನೇ ಎಳದುಕೊಂಡೆ..


ಹೂವಿನಂಥ ಹುಡುಗ ನಾನು ತುಂಬಾ ಮೃದು...ಹೂವಿನಂಥ ಹುಡುಗ ನಾನು ತುಂಬಾ ಮೃದು...


ಪ್ರತಿಪಕ್ಷದವ್ರೆ ಸ್ಟ್ರಾಂಗು ಗುರು..ಸ್ಟ್ರಾಂಗು ಗುರು..ರಾಂಗು ಗುರು ....ರಾಂಗು ಗುರು ...


 


ಶಿವಾ ಅಂತ ಹೋಗುತ್ತಿದ್ದೆ ಸಿ.ಎಂ.ಆಗಿ


ಸಿಕ್ಕಾಪಟ್ಟೆ ಫೈಟು ಇತ್ತು ಸೀಟಿಗಾಗಿ...


ಅರ್ಧಂಬರ್ಧ ಸಪೋರ್ಟ್ ಇತ್ತು ಪಕ್ಷದಲಿ...


ನೀ ಹೋದೆ ಸೈಡಿನಲ್ಲಿ//


 


ಕುಮಾರಣ್ಣ..ಸಿದ್ರಾಮಣ್ಣ...ಮಾಡಿದರೂ ಗಲಾಟೆನೇ..


ಕುಮಾರಣ್ಣ..ಸಿದ್ರಾಮಣ್ಣ...ಮಾಡಿದರೂ ಗಲಾಟೆನೇ


ಗೆದ್ದುಬಿಟ್ವಿ ನಾವು ಮತ್ತೆ ಓಟಿನಲ್ಲಿ..ಶುರುವಾಗಿದೆ ಆಪರೇಷನ್ ಮತ್ತೊಂದು ಸರ್ತಿ..


ಒಂದು ಸೀಟು ಎಷ್ಟು ರೇಟು...ಒಂದು ಸೀಟು ಎಷ್ಟು ರೇಟು...ಕೋಟಿ ಕೋಟಿ ಆಗಿ ಹೋಯ್ತು...


ಈಸಿಯಾಗಿ ಬದಲಾದ್ರು ಶಾಸಕರು...ಅದರಲ್ಲೂ ಮೊದಲನೇ ಭೇಟಿಯಲಿ..


ಶಾಸಕರು ಬೇಕೇ ಬೇಕು ಸೋಲಿಸಲು...ಶಾಸಕರು ಬೇಕೇ ಬೇಕು ಸೋಲಿಸಲು...


ರಾಜಕೀಯ ಬೇಕಾ ಗುರು...ಬೇಡ ಗುರು ಬೇಡ ಗುರು ಬೇಡ ಗುರು...


 


ಶಿವಾ ಅಂತ ಹೋಗುತ್ತಿದ್ದೆ ಸಿ.ಎಂ.ಆಗಿ


ಸಿಕ್ಕಾಪಟ್ಟೆ ಫೈಟು ಇತ್ತು ಸೀಟಿಗಾಗಿ...


ಅರ್ಧಂಬರ್ಧ ಸಪೋರ್ಟ್ ಇತ್ತು ಪಕ್ಷದಲಿ...


ನೀ ಹೋದೆ ಸೈಡಿನಲ್ಲಿ


ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ..


ಕಂಬ್ಳಿ ಹುಳ ಬಿಟ್ಟಂಗಾಯ್ತು ಹಾಸ್ಗೆನಲಿ..


ಕಚಗುಳಿ ಇಟ್ಟಂಗಾಯ್ತು ಬೆನ್ನಿನಲಿ..


ನೀ ಬಂದಾಗ ಪಕ್ಷದಲಿ.. ಪಕ್ಷದಲಿ..ಪಕ್ಷದಲಿ..ಪಕ್ಷದಲಿ