ಶಿವ ಶಿವ
ಕವನ
ಶಿವ ಶಿವ
ಶಿವ ಶಿವ ಪಶ್ಚಿಮ ಘಟ್ಟದ ಚೆಲುವಿಗೆ
ಎಲ್ಲಿಹುದೋ ಇನ್ನಾಯುಷ್ಯ ?
ಕಿತ್ತು ಹರಿದು ತಿನ್ನುವ ನರಭಕ್ಷಕ
ರಾಕ್ಷಸ ಮಂದಿಯ ಅಧಿಪತ್ಯ ||
ಕಾಡಿನ ನಡು ಹೆಮ್ಮರಗಳು ಇಲ್ಲಿ
ಕೊಲೆಗಡುಕನ ಜೇಬಿನ ದುಡ್ಡು
ಸ್ವಾತಂತ್ರ್ಯೋತ್ತರ ಭಾರತದಲ್ಲಿ
ಈ ಕಾಯಿಲೆಗೆಲ್ಲಿದೆ ಮದ್ದು ?
ಬೆಂಬಲವಾಗಿದೆ ಜೀವಸಂಕುಲಕೆ
ತಂಪು ಸಿರಿಗೆ ಇದು ತವರುಮನೆ
ತುಂಬಿದ ಬೆಟ್ಟದ ಮರಗಳ ಕಡಿದು
ನೆಡುವರು ಬಹಳಂತಸ್ತು ಮನೆ ||
ನೆಲದೆದೆಯಲ್ಲಿ ಅಡಗಿದ ಖನಿಜವ
ಅಗೆದು ಬಗೆದು ಹೊರ ತೆಗೆದವರೇ
ಗಳಿಸಿದ ದುಡಿಮೆಯ ಹಣವೆಂದೆನ್ನುತ
ನೆಗೆದು ಜಿಗಿದು ಬಲು ಬೀಗುವರೆ ?
ಜೀವನದಿಗಳ ಅಸರಿನ ಮೂಲಕೆ
ಕರಗದ ಕಸ ವಿಷ ಹಾಕುವರೋ
ಹಸಿರು ಉಸಿರು ಬಸಿರೆನ್ನದೆ ನಾಡಿನ
ಸಂಪದಗಳ ಕಸಿದುಣ್ಣುವರೋ ||
: ಸದಾನಂದ
Comments
ಉ: ಶಿವ ಶಿವ
In reply to ಉ: ಶಿವ ಶಿವ by raghumuliya
ಉ: ಶಿವ ಶಿವ