ಶಿಶುಗೀತೆ: *ಕಡಲೆ ಗಿಡ*

ಶಿಶುಗೀತೆ: *ಕಡಲೆ ಗಿಡ*

ಕವನ

ಅಪ್ಪ ತಂದನು ಸಂತೆಯಿಂದಲಿ

ಕಡಲೆ ಗಿಡವನು ತಿನ್ನಲು

ಸೊಪ್ಪು ಮಧ್ಯದಿ ಚೆಂದ ಕಡಲೆಯು

ರುಚಿಯು ಬಾಯಿಗೆ ಮೆಲ್ಲಲು||

 

ನನಗೆ ಹೆಚ್ಚಿಗೆ ಕೊಡಿರಿ ಎನ್ನುತ

ತಂಟೆ ತೆಗೆದನು ಪುಟ್ಟನು

ನನಗೆ ಯಾಕೆ ಕಡಿಮೆ ಎನ್ನುತ

ರಚ್ಚೆ ಹಿಡಿದಳು ಪುಟ್ಟಿಯು||

 

ಕಿರಿಯರಿಂದಲು ಹಿರಿಯವರೆಗೂ

ಕಡಲೆಯೆಂದರೆ ಪ್ರೀತಿಯು

ಹುರಿದು ಕಡಲೆಗೆ ಸವರಿ ಉಪ್ಪನು

ತಿಂದ್ರೆ ಬಾಯಿಗೆ ಸದೃಚಿಯು||

 

ಅಜ್ಜನೂರಲಿ ಎರೆಯ ಹೊಲದಲಿ

ಹಚ್ಚ ಹಸುರಿನ ಕಡಲೆಯು

ಅಜ್ಜ ಹೇರಳ ಕಡಲೆ ಕಾಯಿಯ

ಕಿತ್ತು ಕೊಡುವನು ಸವಿಯಲು||

 

ಬಿಡುವು ವೇಳೆಯ ದಿನವು ಬರುತಲಿ

ಅಜ್ಜನೂರಿಗೆ ಧಾವಿಸಿ

ಹಿಗ್ಗಿನಿಂದಲಿ ಪುಟ್ಟ ಪುಟ್ಟಿಯು

ಕಡಲೆ ತಿಂದರು ಹರ್ಷಿಸಿ||

-*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್