ಶಿಶುಗೀತೆ - ನಮ್ಮ ಮನೆಯ ರಾಣಿ

ಶಿಶುಗೀತೆ - ನಮ್ಮ ಮನೆಯ ರಾಣಿ

ಕವನ

ನನ್ನ ಪುಟ್ಟ ತಂಗಿ

ತಂದೆನೊಂದ ಅಂಗಿ

ಅಂಗಿ ಹಾಕಿ ಗೆಜ್ಜೆ ತೊಟ್ಟು

ಕುಣಿದಳು ಹೆಜ್ಜೆ ಹಾಕಿ//

 

ಹತ್ತಿರ ಕರೆದರೆ ಬರುವಳು

ತುಂಟ ನಗೆಯ ಬೀರುವಳು

 ಅಮ್ಮ ಮುದ್ದು ಮಾಡುವಳು

ಮುತ್ತನೊಂದು ಕೊಡುವಳು//

 

ಆಟ ಆಡುವಳು ಜೊತೆಗೆ

ಕಿಲಕಿಲ ನಗುವಳು ಮೆಲ್ಲಗೆ

ಜೋಕಾಲಿ ಜೀಕುತ ಮಿಠಾಯಿ ಮೆಲ್ಲುತ

ನಮ್ಮ ಮನೆಯ ರಾಣಿಯು//

 

ಅಜ್ಜಿ ಯ ಮಡಿಲಲಿ ಮಲಗುವಳು

ಅಜ್ಜನ ನೋಡಿ ನಗುವಳು

ಹಾಲು ಹಣ್ಣು  ತಿನ್ನುವಳು

ಲಾಲಿ ಹಾಡ ಕೇಳುವಳು//

 

-ರತ್ನಾ ಭಟ್ ತಲಂಜೇರಿ

ಚಿತ್ರದಲ್ಲಿ - ಬೇಬಿ ಕಶ್ವಿ, ಬೋಂದೇಲ್ ಕಂಬ್ಳ

 

ಚಿತ್ರ್