ಶಿಶುಗೀತೆ - *ಪಾನಿಪುರಿ ಉರಿ*
ಕವನ
ಪಾನಿಪೂರಿ ಬೇಕು ಎಂದು
ರಚ್ಚೆ ಹಿಡಿದ ಶಾಮನು
ಪಾನಿಪೂರಿ ತಿನ್ನುವಾಸೆ
ತಂದೆ ಮುಂದೆ ಉಲಿದನು||
ಮಗನ ಹಠಕೆ ಕಟ್ಟುಬಿದ್ದು
ಕರೆದು ಕೊಂಡು ಹೋದರು
ಗಗನ,ಜಾನಿ,ನಿಮ್ಮಿ ,ಪಮ್ಮಿ
ಜೊತೆಗೆ ಶಾಮ ಕರೆದನು||
ಬಯ್ಯಾ ಐದು ಪ್ಲೇಟು ಪಾನಿ
ಪೂರಿ ಕೊಡಿರಿ ಎಂದನು
ಅಪ್ಪ ಎಲ್ಲಾ ಹುಡುಗರಿಗೂ
ಪಾನಿಪೂರಿ ತಂದನು||
ಪಾನಿಪೂರಿ ಮೇಲೆ ಇತ್ತು
ಡಾಣಿ ಮೊಸರು ಬಟಾಣಿ
ಅದರ ಜೊತೆಗೆ ಉಳ್ಳಾಗಡ್ಡಿ
ಮೆಣಸಿಕಾಯಿ ಚಟ್ಟಣಿ||
ಪಾನಿ ಕುಡಿಯೆ ನೆತ್ತಿ ಗತ್ತಿ ಶಾಮ ಅತ್ತೆ ಬಿಟ್ಟನು
ಅಪ್ಪ ಒಡನೆ ನೆತ್ತಿ ಮೇಲೆ
ಬಡಿದೆ ಬಿಟ್ಟ ತಟ್ಟನೆ||
ಲೋಟದಲ್ಲಿ ಸ್ವೀಟು ಹಾಕಿ
ಕುಡಿಸೆ ಬಿಟ್ಟ ಅಪ್ಪನು
ಗಂಟಲುರಿಯು ಕಡಿಮೆ ಆಗಿ
ಶಾಮ ನಕ್ಕ ಗಪ್ಪನೆ||
-*ಶ್ರೀ ಈರಪ್ಪ ಬಿಜಲಿ*
*ಪೋಟೊ: ಗೂಗಲ್ ಕೃಪೆ*
ಚಿತ್ರ್