ಶಿಶುಗೀತೆ- *ಪುಟ್ಟು ಬಾಬೆ*

ಶಿಶುಗೀತೆ- *ಪುಟ್ಟು ಬಾಬೆ*

ಕವನ

ಅಬ್ಬೆ ಆನು ಪುಟ್ಟು ಬಾಬೆ

ಜೋರು ಮಾಡೆಡ

ಹಸಿ ತೆಂಗಿನ ಗರಿಲಿ

ಬಡುದು ಬೇನೆ ಮಾಡೆಡ

 

ಮಣ್ಣು ಚೋರು ಕಾಲಿಲಿ

ರೆಜವೇ ಇಪ್ಪದುಸ

ಹೀಂಗೆ ಕಣ್ಣು ಹೊಡಚ್ಚಿರೆ

ಹೆದರಿಕೆ ಅಪ್ಪದು

 

ಬಡಿಗೆ ಕೋಲು ಬೇಡ

ಕೊಂಡಾಟ ಮಾಡು

ಎತ್ತಿಗೊಂಡು ಲಲ್ಲೆಗರೆದು

ಒಪ್ಪ ಮುತ್ತು ಕೊಡು

 

ದೋಸೆ ಜೇನು ತುಪ್ಪ

ಕಲೆಸಿ ತಿನುಸು ಬೇಗ

ಪುಟ್ಟು ಹೊಟ್ಟೆ ಹಶುವಿಲಿ

ಬೇನೆ ಆವುತ್ತು ಈಗ

 

ಬೇಡ ಬೇಡ ಲೂಟಿಮಾಡ್ತಿಲ್ಲೆ

ಚಾಮಿ ಕುಂಞಿ ಆವುತ್ತೆ

ಆನು ಪಾಪ ಅಲ್ಲದಾ

ನಿನ್ನ ಮುದ್ದು ಅಲ್ಲದಾ

 

-ರತ್ನಾ ಕೆ ಭಟ್, ತಲಂಜೇರಿ

 

ಚಿತ್ರ್