ಶಿಶುಗೀತೆ ಮತ್ತು ಒಂದಿಷ್ಟು ಹನಿಗಳು
ಕವನ
ಮಾಲಿನ್ಯ
ಬಿಸಿಲು ಜೋರು
ಮನೆಯ ಸೇರು
ಇಳಿಯುತಿದೆ ಬೆವರು
ಹುಡುಕುತಿಹೆ ನೀರು.
ಕಾಣೆಯಾಗಿದೆ ಹಸಿರು
ಕುಗ್ಗುತಿದೆ ಉಸಿರು
ಮರೆತ ಮರಗಳ ಹೆಸರು
ನೆರಳಿಲ್ಲದ ಊರು.
ಮಳೆಯ ಬರುವಿಲ್ಲ
ಬೆಂಕಿಯಾಗಿದೆ ಭುವಿಯೆಲ್ಲ
ಕೆಂಡದಿ ಸುಡುತಿದೆ ಕಾಯ
ಹಿನಿ ನೀರಿಗೆ ತೆರೆದೆ ಬಾಯ.
-ನಿರಂಜನ ಕೇಶವ ನಾಯಕ್,ಶಿಕ್ಷಕ, ಮಂಗಳೂರು.
***
ಹನಿಗಳು
ಕುಟುಕುವರು
ಇರುವಷ್ಟು ದಿನವೂ
ಕಟುಕರಯ್ಯಾ !
*
ಸಾಹಿತ್ಯದಲ್ಲಿ
ಒಗ್ಗರಣೆಯಿದ್ದರೇ
ಬೆಳವಣಿಗೆ!
*
ಇಂದು ,ನಾಳೆಗೇ
ಸಾಹಿತಿಯಾಗಲಾರ
ಶ್ರಮವು ಬೇಕು!
*
ದೂರದಿರು ನೀ
ಬರೆಯುವವರನು
ನೀನೂ ಲೇಖಕ !
*
ನೋವು ಕೊಡದೆ
ಯಾರಿಗೂ ಮಾತಾಡದೆ
ನೀ ಕವಿಯಾಗು !
*
ಸುಮ್ಮನಿರುವುದ ಕಲಿ
ಲೋಕದ ಬೆಳಕಿನಲಿ
ತಿರುಗುತಲಿ ಓದುತ
ಜ್ಞಾನಿಯಾಗು ಬುವಿಲಿ !
*
ಮತ್ತಿಹುದಯ್ಯ
ಮುತ್ತಿನಾ ಲೋಕದಲಿ
ಪ್ರೀತಿ ಜೊತೆಗೆ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್