ಶಿಶುಗೀತೆ - *ಲಾಲಿ ಪಾಪು*

ಶಿಶುಗೀತೆ - *ಲಾಲಿ ಪಾಪು*

ಕವನ

ಅಪ್ಪ ಅಪ್ಪ ನನಗೆ ಲಾಲಿ

ಪಾಪು ಬೇಕು ತಿನ್ನಲು

ದಪ್ಪ ದಪ್ಪ ಎರಡು ಲಾಲಿ ಪಾಪು ಬೇಕು ಸವಿಯಲು

 

ಕೆಂಪು ಹಸಿರು ಹಳದಿ ನೀಲಿ

ವಿವಿಧ ಬಣ್ಣದಲ್ಲಿವೆ

ತಂಪು ಮನಕೆ ಚೀಪಿ ತಿನ್ನೆ

ತೋಟದಲ್ಲಿ ಕುಣಿಯುವೆ

 

ಅಣ್ಣ ಎರಡು ನಂಗೆ ಎರಡು

ಬೇಗ ಕೊಡಿಸು ಈಗಲೆ

ಚಿಣ್ಣರೆಲ್ಲ ಕೂಡಿ ಕೊಂಡು

ಆಟದಲ್ಲಿ ತೇಲುವೆ

 

ಕಡ್ಡಿ ಹಿಡಿದು ಬಾಯಲಿಟ್ಟು

ಸವಿಯೆ ಸ್ವರ್ಗ ಸುಖವದು

ಚಡ್ಡಿ ಲಾಡಿ ಕಳಚಿ ಬಿದ್ರು

ನನಗೆ ಅರಿವೆ ಆಗದು||

 

ಲಾಲಿ ಪಾಪು ನಮ್ಮ ಪಾಪು

ಪುಟ್ಟ ಚೆಂದ ಕಂದನೆ

ಗೇಲಿ ಮಾಡಿ ನಮ್ಮ ನಗಿಸಿ

ಮನೆಯ ಬೆಳಗೊ ಚೆಂದ್ರನೆ||

-*ಶ್ರೀ ಈರಪ್ಪ ಬಿಜಲಿ*

ಚಿತ್ರ ಕೃಪೆ: ಗೂಗಲ್ 

 

ಚಿತ್ರ್