ಶಿಶು ಗೀತೆ - ಕಿತ್ತಳೆ ಹಣ್ಣು

ಶಿಶು ಗೀತೆ - ಕಿತ್ತಳೆ ಹಣ್ಣು

ಕವನ

ಕಿತ್ತಳೆ ಹಣ್ಣನು ಕೊಡಿಸಲು ಕೇಳಿದ

ಪುಟ್ಟುವು ಮೆಲ್ಲಗೆ ಅಮ್ಮನಲಿ

ತಾಜಾ ಹಣ್ಣನು ಮಾರುತಲಿದ್ದರು

ಅಲ್ಲಿಯೆ ರಸ್ತೆಯ ಬದಿಯಲ್ಲಿ

 

ಅಮ್ಮನು ಕೊಂಡಳು ಆರಿಸಿ ಹಣ್ಣನು

ನಡೆದರು ಜೊತೆಯಲಿ ಮನೆಯಕಡೆ

ಇತ್ತಿಹ ಹಣ್ಣನು ಪುಟ್ಟುವು ಮುಗಿಸಿದ

ಮತ್ತವ ನೋಡಿದ ಅಮ್ಮನೆಡೆ

 

ಪುಟ್ಟುವ ಅಣ್ಣನು ಹಿಡಿದನು ಹಣ್ಣನು

ಗೀರಲು ತೊಡಗಿದ ಚೂರಿಯಲಿ

ಮೆಲ್ಲನೆ ಹಣ್ಣನು ಬಿಡಿಸಲು ಕಂಡಿತು

ಚಿತ್ರವು ಮೂಡಿದೆ ಸಿಪ್ಪೆಯಲಿ

 

ಅಚ್ಚರಿಗೊಂಡನು ಸುಂದರ ಚಿತ್ರವು

ಮಾನವ ನಿಂತಿಹ ರೂಪದಲಿ

ಭಾರವ ಹೊಂದಿದ ದುಂಡನೆ ಹಣ್ಣನು

ಕರದಲಿ ಹಿಡಿದಿಹ ತರದಲ್ಲಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್