ಶಿಶು ಗೀತೆ - ಪ್ರಾಣಿ ಪಕ್ಷಿ ಉಳಿಯಲಿ

ಶಿಶು ಗೀತೆ - ಪ್ರಾಣಿ ಪಕ್ಷಿ ಉಳಿಯಲಿ

ಕವನ

ಜೀವಿಗಳಿಗೆ ಬದುಕಲಿರುವ

ಭೂಮಿಯೊಂದೆ ಇರುವುದು

ಜತನದಿಂದ ಉಳಿಸಬೇಕು

ಹೊಣೆಯು ಈಗ ನಮ್ಮದು

 

ಪ್ರಾಣಿ ಪಕ್ಷಿ ಜೊತೆಗೆ ನಾವು

ಕೂಡಿ ಬಾಳಬೇಕಿದೆ

ನಮ್ಮ ಹಾಗೆ ಭೂಮಿ ಮೇಲೆ

ಬಾಳೊ ಹಕ್ಕು ಅವಕಿವೆ

 

ಅವುಗಳನ್ನು ಪ್ರೀತಿಯಿಂದ

ನಮ್ಮ ಜೊತೆಗೆ ಬಾಳಲು

ದೇವನಿತ್ತ ಭೂಮಿ ಇದುವೆ

ಸಕಲರಿಗೂ ಮೀಸಲು

 

ಪಕ್ಷಿ ಕುಲವು ಕ್ಷೀಣಗೊಂಡು

ಅಳಿವಿನತ್ತ ಸಾಗಿದೆ

ಅವುಗಳನ್ನು ಅಳಿಯದಂತೆ

ನಾವು ಉಳಿಸಬೇಕಿದೆ

 

ಸರಿಗೆಯಲ್ಲಿ ಬೇಲಿ ಹೆಣೆದು

ಲೋಹ ಹಕ್ಕಿ ಇರಿಸಿದೆ

ಈಗಿನಂತೆ ಪಕ್ಷಿ ಅಳಿಯೆ

ಅದನೆ ನೋಡಬೇಕಿದೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್