ಶಿಷ್ಟ ರಕ್ಷಕಿ
ಕವನ
ಹೇಗೆ ಬಣ್ಣಿಸಲಮ್ಮ ನಾನಿದಕೆ ಅಸಮರ್ಥ
ಬಾಗಿ ನಮಿಸುವೆ ತಾಯೆ ಚರಣದಲ್ಲಿ
ಸಿಂಹವಾಹಿನಿ ತಾಯೆ ದಶಕರದಿ ಶಸ್ತಾಸ್ತ್ರ
ದುಷ್ಟರನು ಸದೆಬಡಿವೆ ನಿಮಿಷದಲ್ಲಿ
ರಕ್ತ ಕೆಂಪಿನ ಉಡುಗೆ ನಗುವ ಸೂಸುವ ವದನ
ಅಭಯ ಹಸ್ತವ ತೋರಿ ಭಯವ ನೀಗಿ
ಚಂದ್ರಘಂಟಾ ತಾಯೆ ಪೊರೆಯೆ ಈ ಜಗವನ್ನ
ಕರಜೋಡಿ ನಿಂತಿರುವೆ ಶಿರವ ಬಾಗಿ
ನಾನೆಂತು ಬಣ್ಣಿಪೆನು ಜಗದ ತಾಯಿಯೆ ನಿನ್ನ
ಪದಗಳನು ನಾನೀಗ ಅರಸುತಿರುವೆ
ಶಿಷ್ಟ ರಕ್ಷಕಿ ನೀನು ಕಾಪಾಡು ಭಕ್ತರನ
ಚರಣದಲಿ ನಾ ಬಂದು ಮಣಿಯುತಿರುವೆ ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್