ಶೀತಲ ಸೇತುವೆ
ಬರಹ
ದೂರ ಹೋಗುವೆ.
ಮತ್ತೆಂದು ಬರುವೆ..?
ನಿನಗಾಗಿ ನಾ ಕಾದಿರುವೆ.
ಯಾರೊಡನೆ ಹೇಳಲಿ?
ಏನೆಂದು ತಿಳಿಸಲಿ?
ನೀನಿರದ ದಿನಗಳ
ಹೇಗೆ ದೂಡಲಿ..?
ಏಕಳುವೆ ಪ್ರಿಯೆ..,
ನಿನ್ನನಗಲಿ ನಾನೆಲ್ಲಿ ಹೋಗುವೆ
ಕಣ್ಣ ಮುಚ್ಚು ಕಾಣುವೆ
ಮನದಿ ನೆನೆ,ಮಾತನಾಡುವೆ
ಎಲ್ಲಿಯ ದೂರ?
ಯಾವ ಭಯ..?
ಅಗೋ ನೋಡಲ್ಲಿ...!!
ಬರುವನಲ್ಲಿಗೂ ಇಲ್ಲಿಯ ಚಂದಿರ.
ಪಕ್ಷಪಾತಿ,ನಿನ್ನಯ ಬಳಿಗೆ
ಮೊದಲು ಬರುವನಂತೆ..!
ಹೇಳಿ ಕಳುಹಿಸು....ನಿನ್ನಂತರಂಗವ
ಆ ಶೀತಲ ಕಿರಣದಿ ಪಸರಿಸು.
ನನ್ನೊಡಲ ನೋವು
ಬತ್ತದ ಒಲವು
ದಿನವೂ ವಟಗುಟ್ಟುವೆ...!
ಇಗೋ,ಪರದೆ ಸರಿಸಿ ನೋಡುತಿರುವೆ
ನಗುತ್ತಾನೆ ತುಂಟ...!!
"ನನ್ನನೇನು ಕೊಂಡುಕೊಂಡಿರಾ...???".
ಜಯಂತಬಾಬು.