ಶುಗರ್ ಫ್ರೀ ಸಿನಿಮಾ..!

ಶುಗರ್ ಫ್ರೀ ಸಿನಿಮಾ..!

ಸಕ್ಕರೆ ನೋಡಿದಾಕ್ಷಣ ಏನು ಅನಿಸುತ್ತದೆ. ಹೌದು..! ಸಕ್ಕರೆ ಸಹಿಯಾಗಿರುತ್ತದೆಂಬ ನಂಬಿಕೆ. ಆ ನಂಬಿಕೆಯನ್ನ ಸಕ್ಕರೆ ಸಿನಿಮಾಕ್ಕೂ ಇಡಬಹುದು. ಕಾರಣ, ಸಕ್ಕರೆ ಚಿತ್ರದ ಪ್ರತಿ ದೃಶ್ಯವನ್ನೂ ಮೊದಲೇ ಹೇಳಬಹುದು. ಸಕ್ಕರೆ ಸಿಹಿಯಾಗಿದೆ ಎಂದು ತಿನ್ನದೇ ಹೇಳೋವಂತೆ. ಯಾಕೆಂದ್ರೆ, ಚಿತ್ರದ ಕತೆ ಗೊತ್ತಿರೋದೇ. ಈ ಕತೆಯಲ್ಲಿ ಬರೋ ಕಥಾನಾಯಕನ ಹೆಸ್ರು ವಿನಯ್. ವಿನ್ನು ಅಂತ ಪ್ರೀತಿಯಿಂದ ಕರೀತಾರೆ ನೆರೆ ಹೊರೆಯವ್ರು. ಆದ್ರೆ, ಈ ವಿನಯ್ ತನ್ನನ್ನ ತಾನು ವಿನ್ನರ್..ದಿ ಬಾಜಿಗರ್ ಅಂತ ಕರೆದುಕೊಳ್ಳೊದೇ ಹೆಚ್ಚು. ಹೆಚ್ಚುಗಾರಿಯಲ್ಲಿ ಒಂದು ಅರ್ಥವೂ ಇದೆ. ಕೈಹಾಕಿದ ಕೆಲಸದಲ್ಲಿ ಈತ ಚಾಲಾಕಿ. ಮಾಡಿದ್ದನ್ನ ಮುಗಿಸಿಯೇ ತೀರುತ್ತಾನೆ.

ಆದರೂ, ಈತ ತುಂಟ. ಮಾತಿನ ಮಲ್ಲ. ಹೇಳೋ ಸುಳ್ಳು ಸತ್ಯದ ಮೇಲೆ ಹೊಡೆಯೋ ಹಾಗಿದೆ. ಹಾಗೆ ಹೇಳೋ ಈತನಿಗೂ ಒಮ್ಮೆ ಲವ್ ಆಗಿಬಿಡುತ್ತದೆ. ಆ ಹಡುಗಿನೋ...ಮೊದ್ಲೇ ಎರಡು ಲವ್ ಫೆಲ್ಯೂವರ್ ಆಗಿರೋ ಚೆಲುವೆ. ಹೆಸ್ರು ಸ್ನೇಹಾ. ಬೇಗ ನಂಬಿ ಬಿಡೋ ಮುಗ್ದೆ. ಮೊಗದಲ್ಲಿ ಆ ಮುಗ್ಗದೆ ಕಂಡ್ರೂ. ಸಿಟ್ಟಿ ಜಾಸ್ತಿ. ಆತ್ಮಹತ್ಯಾ ಪ್ರವೃತಿ ಹೆಚ್ಚು.ಅದೊಮ್ಮೆ ವಿನಯ್ ಕಣ್ಣಿಗೆ ಬೀಳ್ತಾಳೆ. ಅಲ್ಲಿಂದ ಶುರು ಲವ್ ಟ್ರ್ಯಾಕ್..

ವಿನಯ್ ದಿ ಬಾಜಿಗರ್...ವಿನಯ್ ದಿ ವಿನ್ನರ್ ಅಂತ ಸ್ನೇಹ ಹತ್ತಿರವಾಗ್ತಾನೆ ಮಿಸ್ಟರ್ ವಿನಯ್. ಈ ಸನಿಹವೇ ಆಕೆ ಹಳೆ ಲವ್ ಸ್ಟೋರಿಗಳನ್ನ ವಿನಯ್​ಗೆ ಹೇಳೋ ಥರ ಮಾಡುತ್ತದೆ.  ಆ ಎರಡೂ ಲವ್ ಸ್ಟೋರಿಯಲ್ಲಿ ನಾನು ಇದ್ದೇ. ನೀನು ನೋಡಲೇ ಇಲ್ಲ. ಹಿಂದಿರುಗಿ ನೋಡಿದ್ದರೇ. ನಿಜವಾದ ಪ್ರೀತಿ ನಿನಗೆ ಸಿಗುತ್ತಿತ್ತು ಎಂದು ಹೇಳ್ತಾನೆ ವಿನಯ್.ಇದನ್ನ ನಂಬೋ ಸ್ನೇಹಾ ಮೂರನೇ ಬಾರಿ ಪ್ರೀತಿಯಲ್ಲಿ ಬೀಳ್ತಾಳೆ. ಬಿದ್ದಾಗ ಮತ್ತೊಮ್ಮೆ ಸಿಹಿ-ಕಹಿ ಅನುಭವ. ಇಷ್ಟರಲ್ಲೇ ಚಿತ್ರದಲ್ಲಿ ಒಂದು ಟ್ವಿಸ್ಟ್ ಇದೆ. ಅದು ಏನೂ ಅಂತ ಥಿಯೇಟರ್​ಗೆ ಹೋಗಿ ನೋಡಿ ಅಂತ ಹೇಳೋದಿಲ್ಲ. ಅದು ಸಿಂಪಲ್ ಟ್ವಿಸ್ಟ್. ಆ ಟ್ವೀಸ್ಟ್ ಏನಪ್ಪ ಅಂದ್ರೆ, ಮೂರನೇ ಪ್ರೇಮಿ ವಿನಯ್ ಹೇಳಿದೆಲ್ಲ ಸುಳ್ಳು. ಈತ ತನ್ನ ಯಾವುದೇ ಲವ್ ಸ್ಟೋರಿಯಲ್ಲಿ ಇಲ್ಲವೇ ಇಲ್ಲ ಎಂಬುದು.

ಇದು ತಿಳಿದ ಮೇಲೆ ಆಗೋ ಅವಂತಾರ ಏನು ಹೇಳಿ..? ಯಸ್. ಹುಡುಗಿ ಸ್ನೇಹಾ, ಹುಡುಗ ವಿನಯ್ ಗೆ ಕೆನ್ನೆಗೊಂದು ಬಾರಿಸಿ ಸಿಟ್ಟು ಮಾಡಿಕೊಂಡು ಹೋಗಿ ಬಿಡ್ತಾಳೆ. ಅವಳ ಹಿಂದೆ ಅವಳದೇ ಮನೆಗೆ ಬರೋ ನಾಯಕನಿಗೆ ಅಲ್ಲಿ ಭಾವಿ ಮಾವನ ದರುಶನವೂ ಆಗುತ್ತದೆ. ಹೇಳಿದ ಸುಳ್ಳಿಗೆ ಮಂಗಳಾರತಿನೂ ಆಗುತ್ತದೆ. ಈ ಮಧ್ಯೆ ಆತ್ಮಹತ್ಯಾ ಪ್ರವೃತಿಯ ಸ್ನೇಹಾ ಮತ್ತೆ ಸಾಯೋ ಪ್ರಯತ್ನ ಮಾಡ್ತಾಳೆ. ಆದ್ರೆ, ಅದು ವಿಫಲ ವಾಗುತ್ತದೆ. ಕಾರಣ, ಸಾಯೋ ಕೊನೆ ಹಂತಕ್ಕೆ ಬಂದು ನಿಂತ ಸ್ನೇಹ ಮನಸಲ್ಲಿ, ವಿನಯ್ ಹೇಳಿದ ಮಾತುಗಳು ಕಾಡುತ್ತವೆ. ಬುದ್ದಿ ಹೇಳುತ್ತವೆ. ಅದಕ್ಕೆ ಸ್ನೇಹಾ ಸಾಯೋದಿಲ್ಲ. ಬದಲಿಗೆ
ಆ ಜಲಪಾದಿಂದ ಬರುತ್ತಾಳೆ. ಬರೋವಾಗ ಕಾಲು ಜಾರಿ ಬಿದ್ದು ಬಿಡ್ತಾಳೆ. ಮುಂದೇನಾಗುತ್ತದೆ. ಅದನ್ನ ಥಿಯೇಟರ್​ಗೆ ಹೋಗಿ ನೋಡಿ ಅಂತ ಇಲ್ಲೂ ಹೇಳೋದಿಲ್ಲ. ಕಾರಣ, ಇಷ್ಟೇ. ನಾಯಕ ಅಲ್ಲಿಗೆ ಬರ್ತಾನೆ. ನಾಯಕಿಯನ್ನ ನೋಡ್ತಾನೆ. ಆಕೆಯನ್ನ ಆಸ್ಪತ್ರೆಗೆ ದಾಖಲಿಸುತ್ತಾನೆ.

ಗೊತ್ತಲ್ಲ ಮುಂದೇನೂ ಅಂತ. ಸ್ನೇಹಾ ಹುಷಾರ ಆಗ್ತಾಳೆ. ವಿನಯ್ ಊರು ಬಿಡೋ ನಿರ್ಧಾರ ಮಾಡ್ತಾನೆ. ಜಲಪಾತದ ಬಳಿ ಚುರುಮುರು ಮಾರೋ ಹುಡುಗ, ಸ್ನೇಹಾ ಇರೋ ಆಸ್ಪತ್ರೆಗೆ ಬಂದು
ವಿನಯ್ ಊರು ಬಿಡೋ ಸತ್ಯ ಹೇಳ್ತಾನೆ. ಅದನ್ನ ಕೇಳಿದ ಸ್ನೇಹಾ ಅವನ ಹುಡುಕಿಕೊಂಡು ಹೋಗ್ತಾಳೆ. ಅಲ್ಲಿಗೆ ಇಬ್ಬರ ಮುಖಾ-ಮುಖಿ. ಎರಡು ಲವ್ ಫೆಲ್ಯೂವರ್ ಆದ ಸ್ನೇಹ ಮೂರನೇ ಲವ್ ಈ ರೀತಿ ಸೆಕ್ಸಸ್ ಆಗುತ್ತದೆ. ಸಕ್ಕರೆ ಚಿತ್ರಕ್ಕೆ ಹ್ಯಾಪಿ ಎಂಡಿ ಆಗುತ್ತದೆ..
ಹಳೇ ಬೇರೆ..ಹಳೇ ಲವ್​ನಿತ್ಯೋತ್ಸವ;
ಸಕ್ಕರೆಯಲ್ಲಿ ಅನಂತ್​ನಾಗ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಮೀಸೆ ಬಿಟ್ಟುಕೊಂಡು, ಆರ್ಮಿಯ ರಿಟೈಡ್ ಶೆಫ್ ಆಗಿ ಕಾಣಿಸಿಕೊಳ್ಳುತ್ತಾರೆ. ಕೈ ಹಿಡಿಯೋ ಸಮಯದಲ್ಲಿ ಸೌಟು ಹಿಡಿದು, ಮದುವೇನೆ ಮಾಡಿಕೊಳ್ಳದೇ, ಒಂಟಿಯಾಗಿರೋ ಈ ಹಿರಿಯ ಜೀವಿಗೆ ಪಕ್ಕದ ಮನೆಯಲ್ಲಿ ವಸುಂದರಾ ಎಂಬ ಅಂಟಿ ನೇಬರ್ ಆಗಿರ್ತಾರೆ. ಆದ್ರೆ, ಒಂದೇ ಒಂದು ದಿನವೂ ಮುಖ ನೋಡದ ಇವ್ರ, ನಿತ್ಯ ಜೀವನದ ಮೇಲೆ ಸ್ನೇಹಾ ನಿಗಾ ಇಟ್ಟಿರುತ್ತಾಳೆ. ಅವರಿಬ್ಬರೂ ಒಂದಾದ್ರೇ ಹೇಗೆ ಎಂಬ ಹುಚ್ಚು ಕಲ್ಪನೆನೂ ಇರುತ್ತದೆ. ಅದೇ ಕಲ್ಪನೆಯನ್ನ ಸಾಕಾರ ಗೊಳಿಸುತ್ತಾನೆ ನಾಯಕ ವಿನಯ್. ಆದ್ರೆ, ಇಲ್ಲಿ ಹೆಚ್ಚು ಗಮನ ಸೆಳೆಯೋದು ಇವ್ರ ಇಳಿವಯಸ್ಸಿನ ಪ್ರೀತಿ. ನಿತ್ಯೋತ್ಸವ ಧಾರವಾಹಿಯನ್ನ ನೆನಪಿಸೋ ಹಾಗಿದೆ ಇವ್ರ ಕೆಮೆಸ್ಟ್ರಿ...
ವಿ.ಹರಿಕೃಷ್ಣ ಸಂಗೀತ;
ಹರಿಕೃಷ್ಣರ ಸಂಗೀತ ಗುನುಗುವಂತಿವೆ. ಎಲ್ಲ ಹಾಡುಗಳೂ ಒಂದೊಂದು ರೀತಿ ಇಷ್ಟವಾಗುತ್ತವೆ. ‘ತುಂಬಾ ಹೇಳಬೇಕು ಫ್ರೀ ಇದ್ದಿರಾ’ ಅನ್ನೋ ಸಾಲುಗಳ ಗೀತೆ ಇಷ್ಟವಾಗುತ್ತದೆ. ಯಾಕಾರಾ ಸಿಗ್ತವಿ ಹೆಣ್ಮೆಕ್ಕಳಿಗೆ ಅನ್ನೋ ಇನ್ನೊಂದು ಹಾಡು ಬುದ್ದಿ ಹೇಳುತ್ತದೆ. ಹುಡುಗ ಹೃದಯದ ನೋವನ್ನೂ ತಿಳಿಸುತ್ತದೆ. ‘ಏನೇ ಆದ್ರೂ ಡೋಂಟುವರಿ’ ಅನ್ನೋ ಇನ್ನೂಂದು ಸಾಂಗು ಖುಷಿಕೊಡುತ್ತದೆ.
ನಿರ್ದೇಶಕ ಅಭಯ್ ಸಿಂಹ:
ಯುವ ನಿರ್ದೇಶಕ ಅಭಯ ಸಿಂಹ ಗೊತ್ತಿರೋ ಕತೇನೆ ಹೇಳಿದ್ದಾರೆ. ಎಲ್ಲರಿಗೂ ಮೊದ್ಲೇ ತಿಳಿಯಬಹುದಾದ ಕತೆಯಿದು. ಚಿತ್ರ ನೋಡ್ತಾ..ನೋಡ್ತಾ ಮುಂದಿನ ದೃಶ್ಯವನ್ನ ಕಂಡಿತ ಗೆಸ್ ಮಾಡಬಹುದು. ಹಾಗಿದೆ ಸಕ್ಕರೆ ಸಿನಿಮಾ. ಆದ್ರೂ, ಸಕ್ಕರೆ ಸಿಹಿಯಂತೆ ಒಮ್ಮೆ ನೋಡಿದ್ರೆ ಒಮ್ಮೆ ತಿಂದ್ರೆ, ಬೇಸರ ಆಗೋದಿಲ್ಲ.

-ರೇವನ್ ಪಿ.ಜೇವೂರ್