ಶುದ್ಧ ಕನ್ನಡ?
ಕನ್ನಡದ ಆಡು ಮಾತು ಬೇರೆ ಭಾಷೆಯ ಅನೇಕ ಪದಗಳನ್ನು ಸಹಜವಾಗಿ ಒಳಗೊಳ್ಳುತ್ತದೆ. ಮಾತನಾಡುವಾಗ, ಕೇಳಿಸಿಕೊಳ್ಳುವಾಗ ಇದು ವಿಚಿತ್ರ ಅನ್ನಿಸುವುದಿಲ್ಲ. ಆದರೆ ಬರೆಯುವ ಕನ್ನಡ ಮಾತ್ರ ಅತ್ಯಂತ ಪ್ಯೂರ್ ಆಗಿರಬೇಕು ಅನ್ನುವ ಭ್ರಮೆ ನಮಗಿದೆ. ಹೌದೆ?
ಕನ್ನಡ ಬರವಣಿಗೆಯಲ್ಲಿ ಸಂಸ್ಕೃತಪದಗಳನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಇಂಗ್ಲಿಷ್ ಪದಗಳ ಬಗ್ಗೆ ಮಡಿವಂತಿಕೆ ತೋರುತ್ತೇವೆ. ಹೀಗೇಕೆ?
ಬರವಣಿಗೆಯ ಕನ್ನಡದಲ್ಲಿ ಇಂಗ್ಲಿಷ್ ಪದಗಳು ಬಂದರೆ ಅದು ಹಾಸ್ಯಕ್ಕಾಗಿ, ಅಥವ ತಾಂತ್ರಿಕ ವಿಷಯಗಳಲ್ಲಿ ಮಾತ್ರ ಎಂಬ ಮಡಿವಂತಿಕೆ ಏಕೆ?
ದಿನಬಳಕೆಯಲ್ಲಿ ಬಳಸುವ ವರ್ಡ್ಸ್ ಗಳನ್ನೆಲ್ಲ ನಮ್ಮ ರೈಟಿಂಗ್ ನಲ್ಲೂ ಯೂಸ್ಮಾಡಲು ಹೆಸಿಟೇಟ್ ಮಾಡುವುದೇಕೆ? ಆಡುಮಾತಿಗೆ ಇಲ್ಲದ ಮಡಿವಂತಿಕೆ ಬರವಣಿಗೆಗಷ್ಟೇ ಏಕೆ?
ಇಲ್ಲಿಟರೇಟ್ಸ್ ಎಂದು ಕರೆಯುತ್ತೇವಲ್ಲ ಅವರು ಕೂಡ ಇಂಗ್ಲಿಷ್ ಮಿಕ್ಸ್ ಮಾಡೇ ಮಾತಾಡುತ್ತಾರೆ. ಕನ್ನಡ ಬರವಣಿಗೆಗೆ ಯಾಕೆ ಈ ಅನ್ನೆಸೆಸರಿ ಕಟ್ಟುಪಾಡು?
ನಿಮಗೆ ಏನನ್ನಿಸುತ್ತದೆ? ಕಾರಣ ಏನಿರಬಹುದು? ಬರವಣಿಗೆ ಕೂಡ ಫ್ರೀಯಾಗಿ ಇರಬೇಕಲ್ಲವಾ?
ಓ.ಎಲ್.ಎನ್
Comments
In reply to ಉ: ಶುದ್ಧ ಕನ್ನಡ? by ksmanjunatha
ಉ: ಶುದ್ಧ ಕನ್ನಡ?