ಶುಭಕರಿ ಕರುಣಾ ಪೂರಿತೆ ಕಾತ್ಯಾಯನೀ ಮಾತೆ

ಶುಭಕರಿ ಕರುಣಾ ಪೂರಿತೆ ಕಾತ್ಯಾಯನೀ ಮಾತೆ

ಕವನ

ನವರೂಪ ಧಾರಿಣಿ ಶ್ರೀ ದುರ್ಗಾ ಮಾತೆ

ಆರನೆಯ ಅವತಾರ ಕಾತ್ಯಾಯನೀ |

ಕಾತ್ಯ ಗೋತ್ರ ವಂಶದಲಿ ಉದ್ಭವಿಸಿದೆ

ಕಾತ್ಯಾಯನ ಋಷಿಯ ಸಂಕಲ್ಪ ಪುತ್ರಿಯಾದೆ||

 

ಸೂಕ್ಷ್ಮ ಲಹರಿಗಳಲಿ ನಿನ್ನದೊಂದು ಅಂಶ 

ನೀನಾದೆ ಜಗ ಬೆಳಗುವ  ಕಲ್ಯಾಣಿ|

ದುರುಳ ಮಹಿಷಾಸುರನೆಂಬ ಧಾಷ್ಟ್ಯ

ದುರ್ಗಣಂಗಳ ಮೈಗೂಡಿಸಿ ಮಾಡಿದ ಅಟ್ಟಹಾಸ||

 

ಸುರವೃಂದವು ನೀಡಲು ಆಯುಧ ವಿಶೇಷ

ಮಹಾಮುನಿಗಳ ತೇಜ ಸಂಪನ್ನ ವಾಗಲು|

ತರಿದಿಕ್ಕಿದೆ ಚಾಮುಂಡಿ   ದುರುಳನ ಶಿರವ

ಎದೆಯೊಡಲ ಬಗೆದು ಉಸಿರು ನಿಲ್ಲಿಸಿದೆ||

 

ಭಕುತರ ಪೂಜೆಯ ಸೇವಿಸಿ ಫಲಗಳ ಕೊಟ್ಟೆ

ಸಾಧಕರ ಮನವ ಆಜ್ಞಾಚಕ್ರದಲಿ ನೆಟ್ಟೆ||

ಸಂತಾನ ಫಲ ನೀಡುತ ಹರಸಿದೆ

ಭವ್ಯದಿವ್ಯ ರೂಪದಲಿ ಇಷ್ಟಾರ್ಥ ನೀಡಿದೆ||

 

ಚತುರ್ವಿದ ಪುರುಷಾರ್ಥ ಇಷ್ಟ ಸಿದ್ದಿ ಮಂದಸ್ಮಿತೆ 

ಮಹಾಯೋಗಿನಿ ಶುಭಕರಿ ಕರುಣಾಪೂರಿತೆ |

ಶಾರ್ದೂಲವಾಹನೆ ಇಷ್ಟಸಿದ್ದಿ ದಾತೆ

ನಮೋ ಕಾತ್ಯಾಯನೀ ದೇವಿ ಮಾತೆ||

 

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್