ಶುಭಾಷಯ
ಕವನ
ಜೀವಕ್ಕೂ ಮಿಗಿಲಾದ ಭಾವವೊಂದು ಅರಳಿದ್ದು ನಿಮ್ಮಿಂದ
ನಿಮ್ಮನ್ನು ಅಗಲಿರುವುದು ,ಬಿಟ್ಟು ಬದುಕುವುದು ಆಗದ ಕೆಲಸ ನನ್ನಿಂದ
ಸಂಪ್ರದಾಯ ನೀಡಿರುವುದು ನಮ್ಮ ಮದ್ಯೆ ಭೂಮಿ -ಆಕಾಶದಷ್ಟು ಅಂತರ
ಆದರೆ ನಿಮಗೆ ದೈವ ಸ್ಥಾನ ಕೊಟ್ಟು ಹೃದಯದಲ್ಲಿ ಕಟ್ಟಿರುವೆ ಮಂದಿರ
ದೂರ ಮಾಡಿದಷ್ಟು ,ನಿಮ್ಮ ಸೇರಲು ಮನಸು ಆಸೆ ಕನಸುಗಳ ಗೋಪುರ
ಹುಣ್ಣಿಮೆಯ ಬೆಳಕನ್ನು ಸವಿಯಲು ಅವಕಾಶ ಕೊಟ್ಟ ನನ್ನ ಬಾಳ ಚಂದಿರ
ಎಷ್ಟೇ ಮೋಡಗಳು ಬಂದು ಮರೆಮಾಡಿದರು,ನಿಮ್ಮ ಜೊತೆಯ ಬಾಳು ಸುಂದರ
ಜಾತಿ -ಬೇಧದಿಂದ ದೂರ ಮಾಡಿದರು ,ದೂರವಾಗುತ್ತಿಲ್ಲ ಈ ಮನಸುಗಳು
ದೇವರಿದ್ದಾನೆ,ಎಲ್ಲರ ಮನಒಪ್ಪಲಿ ಎಂದು ಕಾಣುತ್ತಿರುವೆವು ಕನಸುಗಳು
ಇವೆಲ್ಲ ಮರೆತುಬಿಡಿ ನಲ್ಲ ,ನೆನಪಿರಲಿ ಆಗೋದೆಲ್ಲ ಒಳ್ಳೆಯದಕ್ಕೆ ಎಂಬ ಮಾತುಗಳು
ಇದರೊಂದಿಗೆ ನನ್ನ ಭಾವನೆಯ ಮೂರ್ತಿಗೆ ,ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು
ಚಿತ್ರ್