ಶೈಲಜ ಸಂತೋಶ್ -ಉದಯ ಟಿ.ವಿ ಯ 'ಪರಿಚಯ' ಕಾರ್ಯಕ್ರಮದ ರುವಾರಿ, -ಅಪರೂಪದ ವ್ಯಕ್ತಿಯಾಗಿದ್ದರು !

ಶೈಲಜ ಸಂತೋಶ್ -ಉದಯ ಟಿ.ವಿ ಯ 'ಪರಿಚಯ' ಕಾರ್ಯಕ್ರಮದ ರುವಾರಿ, -ಅಪರೂಪದ ವ್ಯಕ್ತಿಯಾಗಿದ್ದರು !

ಬರಹ

ಶೈಲಜ ಸಂತೋಶ್ -ಉದಯ ಟಿ.ವಿ ಯ 'ಪರಿಚಯ' ಕಾರ್ಯಕ್ರಮದ ರುವಾರಿ, -ಅಪರೂಪದ ವ್ಯಕ್ತಿಯಾಗಿದ್ದರು ! ಉದಯ ಟಿ.ವಿ. 6 ತಿಂಗಳ ಕೆಳಗೆ 'ಪರಿಚಯ'ವೆಂಬ ಕಾರ್ಯಕ್ರಮವನ್ನು ಬೆಳಿಗ್ಯೆ ಬಿತ್ತರಿಸುತ್ತಿತ್ತು. ಸುಮಾರು 4 ವರ್ಷಕ್ಕೂ ಮೇಲ್ಪಟ್ಟು ಒಂದೇ ಸಮನೆ ನಡೆದ "ಸಂವಾದ" ದಲ್ಲಿ ಪಾಲುಗೊಂಡವರ ಸಂಖ್ಯೆ 1,000 ಕ್ಕೂ ಹೆಚ್ಚು. ನಾನೇ 900 ಎಪಿಸೋಡ್ ಗಳನ್ನು ನೋಡಿರಬಹುದು ! ಪ್ರೊಫ್.ಜಿ.ವೆಂಕಟಸುಬ್ಬಯ್ಯ ನವರಿಂದ ಹಿಡಿದು ವಿ.ಕೆ.ಮೂರ್ತಿಗಳವರೆವಿಗೂ ಅದರ ವ್ಯಾಪ್ತಿ ! ಡಾಕ್ಟರುಗಳು. ಇಂಜಿನಿಯರ್ ಗಳು, ಕವಿಗಳು, ಸ್ವಾಮಿಗಳು, ಕಲಾವಿದರು, ಸಂಗೀತಜ್ಞರು, ನ್ರುತ್ಯ ಪಟುಗಳು, ರಾಜಕಾರಣಿಗಳು, ಉದ್ಯಮಿಗಳು, ಪ್ರಸಿದ್ದರು, ಇನ್ನೂ ಬೆಳಕಿಗೆ ಬಾರದವರು. ಇತ್ಯಾದಿ. ಶೈಲಮ್ಮನವರ ಸಂದರ್ಶನದ ಶೈಲಿ ಅನನ್ಯ ! ಅವರ ಪೂರ್ವಸಿದ್ದತೆ,ಆಳವಾದ ಅದ್ಯಯನ, ಪ್ರತಿ ದಿನವೂ ನಿತ್ಯನೂತನ ವೆನ್ನುಸುವ ಆಸಕ್ತಿ, ಮಗುವಿನ ಮುಗ್ದತೆ, ಇತ್ಯಾದಿ. ಕನ್ನಡದ ತೀರ ಸರಳ ಉಡುಪಿನಲ್ಲೂ ಸಹಜ ಸೌಂದರ್ಯ ಅವರಲ್ಲಿ ಎದ್ದು ಕಾಣುತ್ತಿತ್ತು.ಇದರ ಜೊತೆಗೆ ನಾಚಿಕೆ ಅವರ ವ್ಯಕ್ತಿತ್ವಕ್ಕೆ ಮೆರುಗು ಕೊಡುತ್ತಿತು.ಈಗ ನಾಚುವ ಹೆಣ್ಣುಮಕ್ಕಳನ್ನು ನೋಡುವುದು ವಿರಳ ! ಶ್ರೀಮತಿ.ಡಾ.ಗಂಗೂಬಾಯಿ ಹಾನಗಲ್ ರಂಥವರನ್ನು ಭೇಟಿಮಾಡಿಸಿದ ಹೆಗ್ಗಳಿಕೆ ಅವರದು. ಅವರ ಸಂದರ್ಶನದನಂತರ ಬೆಳಕಿಗೆ ಬಂದವರಲ್ಲಿ ಶ್ರೀ. ಕಣ್ಣನ್ ಒಬ್ಬರು ! ದಿನವೂ ಬೆಳಿಗ್ಯೆ "ಸರ್ವಜ್ಞ ವಚನದ" ಬಗ್ಗೆ ಅವರ ವ್ಯಾಖ್ಯಾನ ಇರುತ್ತೆ. ಕೊನೆಯಲ್ಲಿ, ಪ್ರೊ. ಶ್ರೀ. ಸಿ. ಡಿ. ನರಸಿಂಹಯ್ಯ ನವರ ಮಾತಿನಲ್ಲೇ ಹೇಳುವುದದರೆ "ಯು ಹ್ಯಾವ್ ಬ್ರಾಟ್ ಔಟ್ ಫ್ರಮ್ ಮಿ ಆಲ್ ತಟ್ ಹ್ಯಾವ್, ಲೈಕ್ ದ ಮೂವ್ಮೆಂಟ್ ಇನ್ ಕನ್ಸೆಂಟ್ರಿಕ್ ಸರ್ಕಲ್ಸ್." ನಿಜವಾಗಿಯೂ, ಶೈಲಜಾ ರವರು ಒಬ್ಬ ಪ್ರತಿಭಾನ್ವಿತ ವ್ಯಕ್ತಿ. ನಾನು, (ಅಲ್ಪಜ್ಞ), ಅವರ ಪರಿಚಯ ಮಾಡಿಸುವಂತಾಯಿತೆ ??