ಶೋಕೇಸು
ಕವನ
ಎಲ್ಲಿಂದಲೋ ಅಚ್ಚರಿ ಎನಿಸುವುದನು
ತಂದು ಪೇರಿಸುವರು
ಚೆಲುವು ಇದೆಂದು ಕೂಡಿಸಿಡುವರು
ಎಲ್ಲವನು ಚೊಕ್ಕವಾಗಿಡುವರು
ಎಷ್ಟು ಸೊಗಸೆಂದು ಬೀಗುವರು
ಥೂಳು ಕೊಡವಿ
ಉಜ್ಜಿ ಮೆರುಗುಗೊಳಿಸುವರು
ಅರಿವಿಲ್ಲದೆ
ತಮ್ಮೊಳಗನು ನವಿರು ಭಾವಗಳನು
ಉಜ್ಜಿ ಮಿಂಚಿಸಲು
ಪದಗಳಿಗೆ ಭಾವತುಂಬಿ
ಕಂಪಸೂಸಲು
ದನಿಗೂಡಿಸಿ ಇಂಪನೀಡಲು
ಒಲವ ನೀರೆರೆದು ಬೇರಗಟ್ಟಿಗೊಳಿಸಲು