ಶ್ಯಾವಿಗೆ ಕಾಯಿ ಹಾಲು

ಶ್ಯಾವಿಗೆ ಕಾಯಿ ಹಾಲು

ಬೇಕಿರುವ ಸಾಮಗ್ರಿ

ಕುಚುಲಕ್ಕಿ (ಕೆಂಪು ಅಕ್ಕಿ) ೪ ಪಾವು, ತೆಂಗಿನ ಕಾಯಿ ತುರಿ ೪ ಕಪ್, ಬೆಲ್ಲದ ಹುಡಿ ೨ ಕಪ್, ಸ್ವಲ್ಪ ಏಲಕ್ಕಿ, ರುಚಿಗೆ ಉಪ್ಪು.

ತಯಾರಿಸುವ ವಿಧಾನ

ರಾತ್ರಿ ನೆನೆಹಾಕಿದ ಕುಚುಲಕ್ಕಿಯನ್ನು ಮರುದಿನ ಬೆಳಿಗ್ಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನಯವಾಗಿ ರುಬ್ಬಿ, ಹಿಟ್ಟನ್ನು ಕಾಯಿಸಿ, ಉಂಡೆಗಳನ್ನಾಗಿ ಮಾಡಿ, ಹಬೆಯಲ್ಲಿ ೪೦ ನಿಮಿಷ ಬೇಯಿಸಬೇಕು. ನಂತರ ಶ್ಯಾವಿಗೆ ಮಣೆಯಲ್ಲಿ ಒಂದೊಂದೇ ಉಂಡೆಗಳನ್ನು ಹಾಕಿ ಒತ್ತಬೇಕು. ಶ್ಯಾವಿಗೆ ರೆಡಿ. ತೆಂಗಿನಕಾಯಿ ತುರಿಯನ್ನು ರುಬ್ಬಿ ಹಾಲು ಸೋಸಿ ತೆಗೆದು, ಬೆಲ್ಲದ ಹುಡಿ, ಏಲಕ್ಕಿ, ಚಿಟಿಕೆ ಉಪ್ಪು ಹಾಕಿ ತೆಂಗಿನಕಾಯಿ ಹಾಲು ತಯಾರಿಸಬೇಕು. ಬೀನ್ಸ್ ಸಾಂಬಾರ್ ಜೊತೆಗೆ ತಿನ್ನಲು ಹಿತಕಾರಿ. ನಮ್ಮ ದಕ್ಷಿಣ ಕನ್ನಡದಲ್ಲಿ ಈ ‘ಶ್ಯಾವಿಗೆ ಕಾಯಿ ಹಾಲು’ ಬಹಳ ಪ್ರಸಿದ್ಧಿಯಾದ ತಿಂಡಿ.

-ರತ್ನಾ ಕೆ.ಭಟ್,ತಲಂಜೇರಿ