ಶ್ರದ್ಧೆ- ಎಂಬ ಮೌಲ್ಯ
ಶ್ರದ್ಧೆ- ಎಂಬ ಮೌಲ್ಯ
ನಮ್ಮ ನಾಡಿನ ಹಿರಿಯರಾದ ಪಾಟೀಲ್ ಪುಟ್ಟಪ್ಪನವರು ಏನು ಹೇಳುತ್ತಾರೆ ಗೋತ್ತೇನು- ಜೀವನದಲ್ಲಿ ಏನನ್ನಾದರು ಸಾಧಿಸಬೇಕೆನ್ನುವ ಮನುಷ್ಯನಲ್ಲಿ ಶ್ರದ್ಧೆಯು ಇರಬೇಕು. ಶ್ರದ್ಧೆ ಎಲ್ಲಿದೆಯೋ ಅಲ್ಲಿ ದೈರ್ಯ ಇರುವುದು. ಒಬ್ಬ ಮನುಷ್ಯನ ಜೀವನದಲ್ಲಿ ಎನೇನು ಒಳ್ಳೆಯದು ಆಗಿದೆಯೋ ಅದರ ಹಿಂದೆ ಶ್ರದ್ಧೆಯಿದೆ.
ಯಶಸ್ಸನ್ನು ಗಳಿಸಲು ವಿದ್ಯಾರ್ಥಿಗಳಿಗೆ ಇರಬೇಕಾದದ್ದು ಓದಿನ ಬಗ್ಗೆ ಶ್ರದ್ಧ್ದೆ. ಶ್ರದ್ಧ್ದೆ ಎಂದರೆ ನೆನಪಾಗುವುದು ಶಿವರಾಮ ಕಾರಂತರು. ಅವರು ತರುಣ ಪೀಳಿಗೆ ಯನ್ನು ಕಲೆ, ಪರಿಸರ, ಸಂಸ್ಕೃತಿ, ಪುರಾತನ ವಿಷಯದ ಕಡೆಗೆ ಪ್ರೀತಿಸಲು ಪ್ರೇರಣೆ ಯಾದರು. ನಡೆದಾಡುವ ವಿಶ್ವಕೋಶ ಎಂದೆ ಪ್ರಸಿದ್ದರಾಗಿದ್ದ ಅವರನ್ನು 20 ನೇ ಶತಮಾನದ ಓರ್ವ ಪ್ರತಿಭಾಶಾಲಿ. ಸುಮಾರು 45 ಕಾದಂಬರಿಗಳು , 30 ನಾಟಕಗಳು, 6 ಹರಟೆಗಳು, 10 ಪ್ರ್ರವಾಸಿ ಕೃತಿಗಳು, ವಿಜ್ಞಾನ ಸಂಪುಟಗಳು, 200 ಮಕ್ಕಳ ಕೃತಿ ಗಳು. ಯಕ್ಷಗಾನದಲ್ಲು ಕೃಷಿ. ಹೀಗೆ ಒಂದು ಸಂಸ್ಥೆ ಮಾಡದ ಕೆಲಸವನ್ನು ಒಬ್ಬರೆ ಮಾಡಿದ್ದಾರೆ. ವಿಜ್ಞಾನ ಸಂಪುಟವನ್ನು ಮೂರೇ ತಿಂಗಳಲ್ಲಿ ಬರೆದರು. ಒಬ್ಬ ಮನುಷ್ಯ ಇಷ್ಟೆಲ್ಲಾ ಮಾಡಲು ಸಾದ್ಯವೆ ಎಂದು ಆಶ್ಚರ್ಯವಾಗುತ್ತದೆ. ಅವರ ಅದ್ಭುತ ಕಾರ್ಯಶಕ್ತಿಯ ರಹಸ್ಯ ವೇನು ಗೊತ್ತೆ?
'ರಹಸ್ಯವೆಂತದು ಮಾರಾಯರ್ೆ? ಕೆಲಸ ಮಾಡುತ್ತಾ ಹೋಗುತ್ತೇನೆ ಅಷ್ಟೇ!' ಎಂದು ನಯವಾಗಿ ಕೇಳಿದವರಿಗೆ ಉತ್ತರಿಸಿದ್ದಾರೆ.
ಉ.ಕ. ಮತ್ತು ದ.ಕ. ಜಿಲ್ಲೆಗಳ ಎಲ್ಲಾ ಹಳ್ಳಿಗಳನ್ನು ಸಂದಶರ್ಿಸಿದ್ದರು. ದೇಶ ತಿರುಗಬೇಕು, ಕೋಶ ಓದಬೇಕು ಎಂಬ ಮಾತು ಅವರಿಗೆ ಸರಿಯಾಗಿ ಅನ್ವಯವಾಗುತ್ತದೆ. ನಾವೆಲ್ಲರು ಅನುಸರಿಸಬೇಕಾದ ಅಪೂರ್ವ ವ್ಯಕ್ತಿತ್ವ. ಅವರ ನೆನಪು ನಮಗೆ ಅದಮ್ಯ ಉತ್ಸಾಹವನ್ನು ನೀಡಬಲ್ಲದು.
(ಅವರ ಜನ್ಮ ದಿನಾಂಕ 10-10-2006 ರಂದು ಬರೆದಿದ್ದು)