ಶ್ರಾವಣದ ಸಂಭ್ರಮ

ಶ್ರಾವಣದ ಸಂಭ್ರಮ

ಕವನ

ಆಷಾಡ  ಮುಗಿದಿದೆ ಶ್ರಾವಣ ಬಂದಿದೆ

ಜನ  ಮನದಿ  ಸಂತಸ ಸಂಭ್ರಮ   ತಂದಿದೆ 

ರೈತನ  ಮೊಗದಲ್ಲಿ  ನಲಿವು  ತುಂಬಿದೆ 

ಪ್ರಕೃತಿಯ ಸೊಬಗಿನಲ್ಲಿ  ನಲಿದಾಡಿದೆ  ಶ್ರಾವಣ 

 

ಸಾಲು  ಸಾಲು  ಹಬ್ಬಗಳ ಆಚರಣೆ

ದೇವಾಲಯದಲ್ಲಿ ವಿಶೇಷ ಪೂಜೆ  ಅರ್ಚನೆ

ಬಾರಿಸುತ್ತ   ಢಣಢಣ  ಗಂಟೆ

ಆ  ಗಂಟೆಯ ನಾದದೊಳಡಿಗಿದೆ  ಶ್ರಾವಣ

 

ಮೂಡಣದಿಂದ ಪಡುವಣ ತೆಂಕಣ

ಭೂದೇವಿಗೆ  ಹಸಿರಿನ  ಸಿರಿ ತೋರಣ

ಹಸಿರು   ಪೈರು  ಪಚ್ಚೆಗಳ  ನಡುವಣ

ಕುಣಿ  ಕುಣಿದಾಡಿದೆ ಶ್ರಾವಣ

 

ಹೊರಟಿದೆ  ಮದುವೆ  ಮುಂಜಿಗಳ ದಿಬ್ಬಣ

ಶುಭದಿನಕೆ  ಕೂಡಿ ಬಂದಿದೆ ಕಂಕಣ

ಅಂಗಳದ  ರಂಗೋಲಿಗೆ  ಬಗೆಬಗೆ ಬಣ್ಣ

ಆ  ಬಣ್ಣದಲ್ಲಿ ಓಕುಳಿಯಾಡಿದೆ ಶ್ರಾವಣ

 

ವನದೇವಿ  ನಳನಳಿಸಿ  ದಿನದಿನ

ಬಗೆಬಗೆ  ಸುಮಗಳಿಂದರಳಿದೆ ಹೂ ಬನ

ಸಾವಿರಾಗವೊಂದಾಡಿದೆ  ಕಾಜಾಣ

ಆ  ರಾಗಕ್ಕೆ  ತಾಳವಾಗಿದೆ ಶ್ರಾವಣ 

 

-ಎಸ್. ನಾಗರತ್ನ, ಚಿತ್ರದುರ್ಗ

 

ಚಿತ್ರ್