ಶ್ರಿಮಂತ ಬಡವರು..

ಶ್ರಿಮಂತ ಬಡವರು..

ಬರಹ

ಅದೊಂದು ಶ್ರೀಮಂತ ಕುಟುಂಬ.ಗಂಡ ಹೆಂದತಿ ಮತ್ತು ಅವರ ಒಂದು ಮುದ್ದಾದ ಮಗು. ಗಂಡ ಹೆಂಡತಿಗೆ ಮಗನೆಂದರೆ ತುಂಬಾ ಪ್ರೀತಿ. ಅವರಲ್ಲಿದ್ದ ಶ್ರಿಮಂತಿಕೆಯಿಂದ ಮಗನನ್ನು ತುಂಬಾ ಮುದ್ದಿನಿಂದ ಬೆಳೆಸುತ್ತಿದ್ದರು. ಮಗ ಬಯಸಿದ ಪ್ರತಿಯೊಂದು ಬಯಕೆ ಯನ್ನು ಇಡೇರಿಸುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ತಂದೆಗೆ ತನ್ನ ಶ್ರಿಮಂತಿಕೆಯ ಬಗ್ಗೆ ತುಂಬಾ ಅಹಂಕಾರವಿತ್ತು.

ಒಂದು ದಿನ ತಂದೆಯು ಮಗನನ್ನು ಕುರಿತು ಹೀಗೆ ಹೆಳುತ್ತನೆ "ಮಗನೆ ನೋಡು ನಾವು ನಮ್ಮೂರಿನಲ್ಲೆ ದೊಡ್ಡ ಶ್ರಿಮಂತರು ನಮಗೆ ಸರಿಸಮರ್ಯಾರು ಇಲ್ಲ"  ಎಂದು ಗರ್ವ ದಿಂದ ಹೇಳಿದಾಗ ಅ ಚಿಕ್ಕ ಮಗು "ಅಪ್ಪಾ ಅದು ಹೇಗೆ ಹೇಳುವೆ?" ಎಂದು ಪ್ರಶ್ನಿಸಿತು.
ತಂದೆಯು ಮಗನಿಗೆ ತಾವೆಷ್ಟು ಶ್ರಿಮಂತರು ಎಂದು ನಿರೂಪಿಸಲು ಮಗನನ್ನು ಕರೆದೊಕೊಂದು ಊರಿನಾಲ್ಲಿರುವ ಬಡವರನ್ನೆಲ್ಲಾ ತೋರಿಸಿಕೊಡು ಬರಲು ಹೊರಟ.
ತಂದೆ ಮಗರಿಬ್ಬರು ಊರೆಲ್ಲಾ ಸುತ್ತಿಕೊಂಡು ಮನೆಗೆ ಬಂದರು. ಮಗನನ್ನು ಕುರಿತು ತಂದೆ ಕೇಳುತ್ತಾನೆ "ಮಗನೆ ನಾವು ಎಲ್ಲಾ ಬಡವರನ್ನು ನೋಡಿದೆವಲ್ಲಾ ಈಗ ಹೇಳು ನಮಗು ಅವರಿಗು ಇರುವ ವ್ಯೆತ್ಯಾಸ ಏನು?

ಆಗ ಮುಗ್ಧತೆಯ ನಗುವನ್ನು ಬೀರಿ ಹೀಗೆ ಹೇಳುತ್ತಾನೆ.

ಅಪ್ಪಾ...

ಅವರಿಗೆ ಸಾಕಷ್ಟು ನಾಯಿಗಳಿವೆ....ನಮ್ಗೆ ಎರಡೇ ನಾಯಿಗಳಿವೆ

ಅವರಿಗೆ ವಿಶಾಲವದ ಮೈದಾನವಿದೆ...ಆದರೆ ನಮಗಿಲ್ಲಾ?

ಅವರಿಗೆ  ವಿಶಾಲವಾದ ಕೆರೆ ಇದೆ..ಆದರೆ ನಮ್ಗೆ ಚಿಕ್ಕದಾದ ಸ್ವಿಮಿಂಗ್ ಪೂಲ್ ಇದೆ.

ಅವರು ಇನ್ನೊಬ್ಬರಿಗಾಗಿ ಬೆಳೆ ಬೆಳೆಯುತ್ತಾರೆ... ಆದರೆ ನಾವು.....?

ಅಪ್ಪ ಈಗ ಹೇಳಿ.. ಬಡವರು ಅವರಾ? ಅಥವಾ ನಾವಾ?

ಮಗನ ಮಾತನ್ನು ಕೇಳಿದ ತಂದೆ ಮೂಕವಿಸ್ಮಿತನಾದ.....