ಶ್ರೀರಾಮಸ್ಮರಣೆ

ಶ್ರೀರಾಮಸ್ಮರಣೆ

ಕವನ

ಶ್ರೀರಾಮ ಜಯರಾಮ ಜಯಜಯ ರಾಮ

ನರರೂಪಿನವತಾರ ಶ್ರೀರಾಮ ರಾಮ

ದಶರಥ ನಂದನ ಕೋದಂಡರಾಮ

ಕೌಸಲ್ಯಾ ಸುಕುಮಾರ ಸೀತಾರಾಮ

ರಘುಕುಲ ತಿಲಕ ಶ್ರೀರಾಮ ರಾಮ

ಬುವಿಯೊಳು ಪ್ರಖ್ಯಾತ ಜಯರಾಮ ರಾಮ

ಆನಂದ ಕಂದ ಅಯೋಧ್ಯೆಯ ರಾಮ

ರವಿಕಿರಣ ತೇಜದ ನಯಾನಾಭಿರಾಮ

ಶೋಕವಿನಾಶಕ ಪುರುಷೋತ್ತಮ ರಾಮ

ಲೋಕಮಾತಾ ಪತಿ ರಘುನಾಥ ರಾಮ

ಅಹಲ್ಯಾ ಶಾಪವಿಮೋಚನಾ ರಾಮ

ತಾಟಕಿ ಸಂಹಾರ ದುಷ್ಟನಿಗ್ರಹ ರಾಮ

ಮುನಿಜನ ವಂದಿತನೇ ಜಯಶ್ರೀರಾಮ

ಹನುಮಂತ ಪ್ರೀತ ಕರುಣಾಳು ರಾಮ

ರಕ್ಕಸ ಗುಣನಾಶ ಮಂದಸ್ಮಿತಾಯ ಶ್ರೀರಾಮ

ಭಕ್ತಜನ ಸೇವಿತ ಅಭಯಧಾಮ

ಪಾಪವಿನಾಶಕ ಭವಭಯ ಹರಣ ರಾಮ

ಗುಣಕರ ಕೃಪಾಕರ ಪರಬ್ರಹ್ಮ ರಾಮ

ರಾಜೀವಲೋಚನ ಕರುಣಿಸೋ ಜನಾರ್ದನ

ವಾಲಿಗೆ ಮೋಕ್ಷವ ನೀಡಿದ ಶ್ರೀರಾಮ

ಸಚ್ಚಿದಾನಂದ ಪರಂಜ್ಯೋತಿ ಶ್ರೀರಾಮ

ಸಾಕೇತದರಸ ಹರಸೋ ಪುನೀತ ಜೈಶ್ರೀರಾಮ

-ರತ್ನಾ ಕೆ ಭಟ್, ತಲಂಜೇರಿ

 ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್