ಶ್ರೀರಾಮ ಜಯರಾಮ ಜಯ ಜಯರಾಮ
ಪ್ರಾತ: ಸ್ಮರಾಮಿ ರಘುನಾಥಮುಖಾರವಿಂದಂ
ಮಂದಸ್ಮಿತಂ ಮೃದುಲಭಾಷಿ ವಿಶಾಲಭಾಲಂ/
ಕರ್ಣಾವಲಂಬಿಚಲಕುಂಡಲಶೋಭಿಗಂಡಂ
ಕರ್ಣಾಂತದೀರ್ಘನಯನಂ ನಯಾನಾಭಿರಾಮಂ//
ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾ ಸ್ಮರನ್/
ನರೋ ನ ಲಿಪ್ಯತೇ ಪಾಪೈರ್ಭುಕ್ತಿಂ ಚೈವ ಸ ವಿಂದತಿ//
ಶ್ರೀ ರಾಘವಂ ದಶರಥಾತ್ಮ ಜಮಪ್ರಮೇಯಂ
ಸೀತಾಪತಿಂ ರಘುಕುಲಾನ್ವಯರತ್ನದೀಪಂ/
ಅಜಾನುಬಾಹುಮರವಿಂದದಳಾಯತಾಕ್ಷಂ
ರಾಮಂ ನಿಶಾಚರವಿನಾಶಕರಂ ನಮಾಮಿ//
ಮಾತಾ ರಾಮೋ ಮತ್ಪಿತಾ ರಾಮಚಂದ್ರ:
ಭ್ರಾತಾ ರಾಮೋ ಮತ್ಸಖಾ ರಾಮಚಂದ್ರ/
ಸರ್ವಸ್ವಂ ಮೇ ರಾಮಚಂದ್ರೋ ದಯಾಲು
ರ್ನ್ಯಾನ್ಯಂ ದೈವಂ ನೈವ ಜಾನೇ ನ ಜಾನೇ//
ಸಣ್ಣ ವಯಸ್ಸಿನ ಮಕ್ಕಳಿಗೆ ‘ರ’ ಹೇಳಲು ಬಾರದಿದ್ದಾಗ ‘ಮರ ಮರ’ ಹೇಳಿಸುವುದಿದೆ. ಆ ಮರ, ಈ ಮರ ಹೇಳಿಸುವುದೂ ಇದೆ. ಕಡೆಗೆ ಮರ ಮರ ಹೇಳಿಸಿ, ‘ರಾಮ ರಾಮ’ ಹೇಳಿಸ್ತೇವೆ. ರಾಮ ಎಂಬ ಎರಡಕ್ಷರದಿ ಮನಸ್ಸಿನ ಶಾಂತಿ, ನೆಮ್ಮದಿ ಅಡಗಿದೆ ಎಂದರೂ ತಪ್ಪಾಗಲಾರದು. ನಮಗೆ ಹೆದರಿಕೆಯಾದರೆ, ಭಯವಾದರೆ, ಮನಕೆ ಆಘಾತವಾದರೆ, ಸಹಿಸಲಸಾಧ್ಯವಾದ ನೋವಾದರೆ ಶ್ರೀರಾಮ ಜಯರಾಮ ಜಯ ಜಯರಾಮ ಹೇಳ್ತೇವೆ, ಪುಟ್ಟ ಮಕ್ಕಳಿಗೂ ಹೇಳಿಸುತ್ತೇವೆ. ರಾಮನಾಮ ತಾರಕ ಮಂತ್ರ ಸದಾಕಾಲ ಜಪಿಸಬಹುದು.
ಅಯೋಧ್ಯೆಯ ಚಕ್ರವರ್ತಿ ದಶರಥ ಮಹಾರಾಜ ಕೌಸಲ್ಯಾ ಮಾತೆಯರಿಗೆ ಪುತ್ರರತ್ನವಾಗಿ ಜನಿಸಿದವನು ರಾಮ. ಮಹಾವಿಷ್ಣುವಿನ ಏಳನೆಯ ಅವತಾರ. ನರರೂಪದ ದೇವಮಾನವ. ತಾನು ಭಗವಂತನೆಂದು ಎಲ್ಲೂ ಹೇಳಿಕೊಳ್ಳದ ಮಹಿಮಾನ್ವಿತ. ಸೂರ್ಯವಂಶದ, ಸಾಕೇತದ ಕಣ್ಮಣಿ.
‘ರಾ’ ಎಂದರೆ ‘ಬೆಳಕು’. ‘ಮ’ ಎಂದರೆ ನಮ್ಮೊಳಗೆ ಎಂದರೆ ‘ಆತ್ಮ’. ಸೀತೆ ಎಂದರೆ ‘ಮನಸ್ಸು’. ಹನುಮಂತ ನಮ್ಮ ‘ಪ್ರಾಣಶಕ್ತಿ’. ‘ರಾವಣ’ ಅಹಂನ ಪರಮಾವಧಿ. ನಮ್ಮೊಳಗಿನ ಅಹಮನ್ನು ಹೋಗಲಾಡಿಸಿ, ಮನಸ್ಸನ್ನು ಶುದ್ಧವಾಗಿಡಲು ಬೇಕು. ರಾಮಸೀತೆ ಒಂದಾದಲ್ಲಿ ಅಹಂಕಾರದ ಸರ್ವನಾಶ. ‘ರಾಮನಾಮ’. ಸತ್ಯನಡೆ-ನುಡಿ, ಹಿರಿಯರ ಮಾತನ್ನು ಶಿರಸಾ ಪಾಲಿಸಿದ, ಧರ್ಮದ ಪರವಾಗಿ ನಿಂತವ, ವಿಜಯ ಸಾಧಿಸಿದ ಧೀಮಂತ, ಭಜನೆ, ರಾಮನೇ ತಂದೆ, ರಾಮನೇ ತಾಯಿ, ರಾಮನೇ ಬಂಧುವು, ರಾಮನೇ ಗುರುವು, ರಾಮನೇ ಸಕಲವು. ‘ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಿರುವ ಈ ದಿನದಿ, ಕ್ಷಾಮವ ತೊಲಗಿಸಿ ಕ್ಷೇಮವ ಕರುಣಿಸೆಂದು ಪ್ರಾರ್ಥಿಸುತ್ತಾ ರಾಮನಾಮವನ್ನು ಜಪಿಸಿ ಕೃತಾರ್ಥರಾಗೋಣ. ಜೈ ಶ್ರೀರಾಮ
ಶ್ಲೋಕ:(ಸಂಗ್ರಹ)
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ