ಶ್ರೀರಾಮ
ಕವನ
ಹೂಮಾಲೆ ಹಾಕುವೆನಯ್ಯ
ಶ್ರೀಗಂಧ ಹಚ್ಚುವೆನಯ್ಯ
ತುಪ್ಪದ ದೀಪವನು ಹಚ್ಚಿ
ಆರತಿ ಯನು ಬೆಳಗುವೆ ನಯ್ಯ
"ರಾಮ ಶ್ರೀ ರಾಮ ರಾಮ ರಘು ರಾಮ "
ನಿನ್ನ ಕಂಡ ಒಡನೆ ತಂದೆ
ಸ್ವರ್ಗವಾಯ್ತು ಭೂಮಿಯು ಇಂದೇ
ಕಣ್ಣ ನೀರ ಹನಿಯೂ ಕೂಡ
ಪುಷ್ಪವಾಗಿ ತಾನು ಜಾರಿತಯ್ಯ
"ರಾಮ ಶ್ರೀ ರಾಮ ರಾಮ ರಘುರಾಮ"
ಕಂಡೆ ನಿನ್ನ ಕಂಗಳಲ್ಲಿ
ಮುಕ್ತಿ ನೀಡೋ ಬೆಳಕಾ ನಾನು
ಭಕ್ತಿಯಿಂದ ಬೇಡಿ ಕೊಂಬೆ
ಬಾರೋ ಬೇಗನೆ ತಂದೆ
"ರಾಮ ಶ್ರೀ ರಾಮ ರಾಮ ರಘುರಾಮ "
ನನ್ನದೊಂದು ಕೂರಿಕೆ ದೇವ
ಕೇಳಲೊಮ್ಮೆ ಬಾರೋ ನೀನು
ಕಂದನಾಗಿ ಹುಟ್ಟು ಒಮ್ಮೆ
ಬಂದು ಮಡಿಲ ತುಂಬೊ ಒಮ್ಮೆ
"ರಾಮ ಶ್ರೀ ರಾಮ ರಾಮ ರಘುರಾಮ"
ಚಂದದಂತ ಮುದ್ದು ಮುಖಕವ
ಶೃಂಗಾರವ ಮಾಡುವೆ ನಯ್ಯ
ಅಂದ ಚಂದದ ಕಂದ ನೀ ನಿನಗೆ
ಮುತ್ತ ನೀಡಿ ಹಾಡುವೆನಯ್ಯ
"ರಾಮ ಶ್ರೀ ರಾಮ ರಾಮ ರಘುರಾಮ"
-ಕೆ. ವಾಣಿ ಚನ್ನರಾಯಪಟ್ಟಣ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
