ಶ್ರೀ. ಆರ್. ವಿ. ಮೂರ್ತಿ !

ಶ್ರೀ. ಆರ್. ವಿ. ಮೂರ್ತಿ !

ಶ್ರೀ. ಆರ್. ವಿ. ಮೂರ್ತಿ, "ಪತ್ರಿಕೋದ್ಯಮದ ಮೇರು ಪ್ರತಿಭೆ"-ಕೃತಿ ಕಿರು  ಪರಿಚಯ : 

40 ರ ದಶಕದಲ್ಲಿ ಮೈಸೂರು ರಾಜ್ಯದಿಂದ ಅಂದಿನ ವಿದ್ಯಾವಂತರು ಮುಂಬೈಗೆ ವಲಸೆ ಬರುತ್ತಿದ್ದದ್ದು  ಒಳ್ಳೆಯ ನೌಕರಿ ಪಡೆಯಲು; ಹಾಗೆಯೇ ಸ್ವಭಾವತಃ  ಕಷ್ಟಸಹಿಷ್ಣುಗಳಾದ ಅವರಿಗೆ ಒಳ್ಳೆಯ ಅವಕಾಶಗಳು ದೊರೆಯುತ್ತಿದ್ದವು. ಮುಂಬೈನಲ್ಲಿ ಪ್ರೀಮಿಯರ್ ಅಟೋಮೊಬೈಲ್, BARC, Petrolium refineries, Shiping, ಮೊದಲಾದ  ಹಲವಾರು ಔದ್ಯೋಗಿಕ, ಮತ್ತು ಸಾಮಾಜಿಕ   ಕ್ಷೇತ್ರಗಳಿದ್ದವು.  ಮುಖ್ಯವಾಗಿ ಆಗ  ಮುಂಬೈ ಭಾರತದ  Manchester ಎಂಬ ಖ್ಯಾತಿಗಳಿಸಿತ್ತು. ಸುಮಾರು ೭೦ ಹತ್ತಿ ಗಿರಣಿಗಳಿದ್ದವು. ಈ ಮಹಾನಗರದಲ್ಲಿ ಯಾರಿಗಾದರೂ ಉದ್ಯೋಗ ಸಿಗುವುದು ಅತಿ ಸುಲಭವಾಗಿತ್ತು. ಹಾಗೆ ಬಂದವರಲ್ಲಿ ಇಂಜಿನಿಯರ್ಗಳು, ಲಾಯರ್ ಗಳು, ಪತ್ರಿಕೋದ್ಯಮಿಗಳು ಮತ್ತಿತರು. ಇವರೆಲ್ಲ ಮುಂಬೈ ಮಹಾನಗರಕ್ಕೆ ತಮ್ಮ ಅನುಪಮ ಕೊಡುಗೆಯನ್ನು ಕೊಟ್ಟಿದ್ದಾರೆ. 

ರಾಮನಾಥಪುರ ವೆಂಕಟೇಶ ಮೂರ್ತಿಯವರು ಬೆಂಗಳೂರಿನಲ್ಲಿ ಮೊದಲು ಶಿಕ್ಷಕರಾಗಿದ್ದರು. ಮುಂಬೈಗೆ ಬಂದ ನಂತರ ಪತ್ರಿಕೋದ್ಯಮಿಯಾಗಿ, ೧೯೩೬ ರಲ್ಲಿ ಅರ್ಥಶಾಸ್ತ್ರ, ವಾಣಿಜ್ಯಕ್ಕೆ ಸಂಬಂಧಿಸಿದ ರಾಷ್ಟ್ರದ ಪ್ರಥಮ ಇಂಗ್ಲಿಷ್ ಸಾಪ್ತಾಹಿಕ 'ಕಾಮರ್ಸ್' ಪತ್ರಿಕೆಯ ಸಹ-ಸಂಪಾದಕರಾಗಿ ಮುಂದೆ ಅದೇ ಪತ್ರಿಕೆಯ ಪ್ರಪ್ರಥಮ ಭಾರತೀಯ ಸಂಪಾದಕರಾದವರು. ನಗರದ ಸಾರ್ವಜನಿಕ ಜೀವನದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಹುಲಿ ಗೋಪಾಲಚಾರ್ಯರ ಆಶಯಗಳಿಗೆ ಸ್ಪಂದಿಸಿ ಕೆಲಸಮಾಡಿದರು. ಮೂರ್ತಿಗಳ ಸಮಕಾಲೀನರು, ನ್ಯಾಯವಾದಿ ಬಿ. ನಾರಾಯಣಸ್ವಾಮಿ, ಪತ್ರಿಕೋದ್ಯಮಿ ದತ್ತಾತ್ರೇಯ ಮೆಂಡನ್, ಮೊದಲಾದವರು. 

ಆರ್. ವಿ. ಮೂರ್ತಿಯವರು, ಸರಳ ಸಜ್ಜನಿಕೆಯ ಪ್ರತಿರೂಪವೆಂಬಂತಿದ್ದರು. ತಮ್ಮ ಸಂಪಾದಕೀಯ ಬರವಣಿಗೆಯಲ್ಲಿ ಭಾರತ ಮತ್ತು ಇಂಗ್ಲೆಂಡ್ ದೇಶಗಳ ಸೌಹಾರ್ದ ಸಂಬಂಧಗಳನ್ನು ಎತ್ತಿಹಿಡಿದರು.  'Commerce'  ಪತ್ರಿಕೆಯ ಧೋರಣೆಯಲ್ಲಿ ಭಾರತದ ವಾಣಿಜ್ಯ, ಆರ್ಥಿಕ ವಿದ್ಯಮಾನಗಳು ಮತ್ತು ಮತ್ತು ರಾಜಕೀಯದ ಬಗ್ಗೆ ಬೆಳಕು ಚೆಲ್ಲಿದರು. Commerce  ಪತ್ರಿಕೆ ಹತ್ತಾರು ವಿಶೇಶಾಂಕಗಳನ್ನು ತರುವಲ್ಲಿ ಯಶಸ್ವಿಯಾಯಿತು. ೬೪ ಪುಟಗಳ ಕಾಮರ್ಸ್ ಪತ್ರಿಕೆ ಭಾರತ ಇಂಗ್ಲೆಂಡ್ ನಡುವೆ ಬಾಂಧವ್ಯ ಬೆಳಸುವ ನಿಟ್ಟಿನಲ್ಲಿ ಪ್ರಮುಖಪಾತ್ರ ವಹಿಸಿತ್ತು. ಒಟ್ಟಾರೆ ೧೫ ವರ್ಷ ಕಾಮರ್ಸ್ ಪತ್ರಿಕೆಯ ಉಪಸಂಪಾದಕರಾಗಿ, ನಂತರ ಸಂಪಾದಕರಾಗಿ ದುಡಿದ ಮೂರ್ತಿಯವರು ಮಾಡಿದ ಸೇವೆ ಶ್ಲಾಘನೀಯವಾದದ್ದು. ೧೯೫೧ ರಲ್ಲಿ 'ಭಾರತಿ' ಎಂಬ ವಾಣಿಜ್ಯ ದೈನಿಕದಲ್ಲಿ ಕೆಲಸಮಾಡಿ,  ೧೯೭೩ ರಲ್ಲಿ"Eastern Economist"  ಎಂಬಪತ್ರಿಕೆಯಲ್ಲಿ  ಎರಡು ದಶಕಗಳಕಾಲ ಸೇವೆಸಲ್ಲಿಸಿ ಬಿರ್ಲಾ ರವರ 'ಹಿಂದುಸ್ತಾನ್ ಟೈಮ್ಸ್' ಎಂಬ ಪತ್ರಿಯಲ್ಲಿ   "Records & Statistics"  ಎಂಬ ಅಂಕಣವನ್ನು ಬರೆಯುತ್ತಿದ್ದರು. ಇದಾದಮೇಲೆ  ಮುಂದೆ  "Press Guild of India"  ಎಂಬ ಸಂಸ್ಥೆಯ ಸ್ಥಾಪನೆಗೆ ಕಾರಣರಾಗಿ ಅಲ್ಲಿ  ಬಹಳ ವರ್ಷ ಕೆಲಸಮಾಡಿದರು.   ಅವರ ಪ್ರಮುಖ ಸಾಧನೆಯೇನೆಂದರೆ ಸಾವಿರಾರು ಜನ ಪತ್ರಕರ್ತರನ್ನು ಒಂದೇ ವೇದಿಕೆಯಲ್ಲಿ ತಂದು ವಿಚಾರ ವಿನಿಮಯ ಮಾಡಿಕೊಳ್ಳಲು, ಹಾಗೂ  ಪತ್ರಿಕಾ ಪ್ರಪಂಚದಲ್ಲಿ ಸಾಮರಸ್ಯ ತರಲು ಆರ್. ವಿ. ಮೂರ್ತಿಯವರ ಶ್ರಮ ಶ್ಲಾಘನೀಯ. ಅವರ ಸಮಯದಲ್ಲಿ ನಾಡಿನ ಪ್ರಮುಖ ಅರ್ಥಶಾಸ್ತ್ರಜ್ಞರಾಗಿದ್ದ, ನಾನೀ ಪಾಲ್ಕಿವಾಲ ಡಾ. ಬ್ರಹ್ಮಾನಂದ, ಡಾ. ರಂಗನಾಥ ಭಾರದ್ವಾಜ,  ಮೊದಲಾದವರು ಮೂರ್ತಿಯವರ ವಿದ್ವತ್ ಹಾಗು ಸಮಾಜಮುಖಿ ಪ್ರಜ್ಞೆಯನ್ನು ಮನಸಾರೆ ಹೊಗಳಿ  ಕೊಂಡಾಡಿದರು. ಆರ್.ವಿ. ಮೂರ್ತಿಯವರು ಖ್ಯಾತ ಉದ್ಯಮಿಯಾಗಿದ್ದ  ಜಿ. ಡಿ ಬಿರ್ಲಾ ರವರಿಗೆ ಅತ್ಯಂತ ಹತ್ತಿರವಾಗಿದ್ದರು. ಅವರು ತಮ್ಮ ಕಂಪೆನಿಗೆ ಸಂಬಂಧಿಸಿದ ವಾಣಿಜ್ಯ ಸಮಸ್ಯೆಗಳನ್ನು ಮೂರ್ತಿಯವರ ಜೊತೆ ಸಮಾಲೋಚಿಸುತ್ತಿದ್ದರು. 

ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ. ಏನ್. ಉಪಾಧ್ಯರವರು, ಡಾ. ಲೀಲಾ ರವರು ಬರೆಯುತ್ತಿದ್ದ "ಪತ್ರಿಕೋದ್ಯಮದ ಮೇರು ಪ್ರತಿಭೆ" ಪುಸ್ತಕದ  ಬಗ್ಗೆ ಬಹಳ ಕಾಳಜಿವಹಿಸಿ, ಅವರಿಗೆ ಎಲ್ಲ ವಿಷಯಗಳಲ್ಲೂ ನೆರವಾದರು.  "ಪತ್ರಿಕೋದ್ಯಮದ ಮೇರು ಪ್ರತಿಭೆ"  ಪುಸ್ತಕದಲ್ಲಿ  ಮೂರ್ತಿಯವರ  ಜೀವನ ವೃತ್ತಾಂತಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು  ದಾಖಲಿಸಿರುವ ಸಹೋದ್ಯೋಗಿಗಳು, ಗುರುಗಳು,  ಗೆಳೆಯರು, ಸಹೃದಯರು ಮತ್ತು ಎಲ್ಲಾ ವರ್ಗದವರ  ಬರವಣಿಗೆಗಳು  ನಮಗೆ ಆರ್ ವಿ. ಮೂರ್ತಿಯವರ  ವ್ಯಕ್ತಿತ್ವವನ್ನು ಅರಿಯಲು ಸಹಾಯಕಾರಿಯಾಗಿದೆ. 

ಮುಂಬೈ ಮಹಾನಗರಕ್ಕೆ ಇಷ್ಟೊಂದು ಸೇವೆ ಸಲ್ಲಿಸಿರುವ ಆರ್. ವೆಂಕಟೇಶ ಮೂರ್ತಿಯವರ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಬರವಣಿಗೆಗಳಿಲ್ಲ. (ವಿಕಿಪಿಡಿಯಾದಲ್ಲೂ , ಈಗ  ಲೀಲಾರವರ ಲೇಖನದಿಂದ ಮಾಹಿತಿ ಪಡೆದು ವಿಕಿಪೀಡಿಯದಲ್ಲಿ ಲೇಖನ ಬಂದಿದೆ) ಹಾಗಾಗಿ ಇದು ಅತ್ಯಂತ ಮಹತ್ವದ ಪುಸ್ತಕವಾಗಿದೆ. ಪುಸ್ತಕದಲ್ಲಿ ಹಲವಾರು ಗೆಳೆಯರ ಹಿತೈಷಿಗಳ ಅನಿಸಿಕೆಗಳನ್ನು ದಾಖಲು ಮಾಡಿದ್ದಾರೆ. ಅವರಲ್ಲಿ ಖ್ಯಾತ ಸಂಶೋಧಕ, ಸಾಹಿತಿ, ಮತ್ತು ಮೂರ್ತಿಯವರ ನಿಕಟವರ್ತಿಗಳಲ್ಲೊಬ್ಬರಾಗಿದ್ದ ಡಾ. ಶ್ರೀನಿವಾಸ ಹಾವನೂರ್ ರವರ ಮನದಾಳದ ಮಾತುಗಳನ್ನು ಕೆಳಗೆ ದಾಖಲಿಸಿದ್ದೇನೆ. ಡಾ. ಶ್ರೀನಿವಾಸ ಹಾವನೂರ್ ರವರ ಅನಿಸಿಕೆಗಳೇ ಹೆಚ್ಚುಕಡಿಮೆ ಅವರ ಎಲ್ಲಾ ಗೆಳೆಯರ  ಸ್ಪಂದನೆಗಳ ಸಾರಾಂಶಗಳಾಗಿವೆ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಷಯವಾಗಿದೆ.  

'ಬದುಕಿನುದ್ದಕ್ಕೂ ಬದಲಾಗದವರು'- ಡಾ. ಶ್ರೀನಿವಾಸ ಹಾವನೂರ  :

ಮನುಷ್ಯನ ಹುಟ್ಟುಗುಣ ಹಾಗೆಯೇ ಕೊನೆಯವರೆಗೂ ಉಳಿಯುವುದೆಂಬುದು ಸಾರ್ವಕಾಲಿಕ ಸತ್ಯ. ಆದರೆ ಅವನ , ಆಕೃತಿ, ಆರೋಗ್ಯ, ವಿಚಾರಸರಣಿ, ಆಚರಣೆ ಇವು ಮಾರ್ಪಾಡು ಹೊಂದುವುದು  ಅಷ್ಟೇ ನಿಜವಾದುದು ಅನೇಕರ ವಿಷಯದಲ್ಲಿ.  ಅದೇ ನಮ್ಮ ವೆಂಕಟೇಶಮೂರ್ತಿಯವರಲ್ಲಿ ಮಾತ್ರ ನಾನಂತೂ ಯಾವ ಬದಲಾವಣೆಯನ್ನೂ ಕಂಡಿಲ್ಲ. ಸುಮಾರು  ೩೫ ವರ್ಷಗಳಿಂದ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯ ಶಾಲೆಯನ್ನು ನಾನು ಸೇರಿದಾಗಿನಿಂದ ಮುನ್ನಿನ ವಾಣೀವಿಹಾರ ವಿದ್ಯಾಲಯಕ್ಕೆ ಹೋಗಿ ಬರುತ್ತಿರುವಾಗಿನಿಂದ ಅವರನ್ನು ನೋಡುತ್ತಾ ಇದ್ದೇನೆ. ಅದೇ. ಮಿದು ಮಾತು, ಅದೇ ಮೆಲುನಗೆ, ಅದೇ. ಆಕೃತಿ ಮತ್ತು ನಿಲುವು.  ಅವರಿಗಿಂತ ೨೦ ವರ್ಷದಷ್ಟು  ಕಿರಿಯ. ಆದರೆ ಪತ್ರಬರೆಯುವಾಗ, " I shall be very much obliged " "I'm anxious to know your opinion" ಎಂದೆಲ್ಲ ಬರೆಯುತ್ತಾರೆ. ಸಂದರ್ಭ ತೀರಾ ಇತ್ತೀಚಿನದು ; ಭಾರತೀಯ ಪ್ರಸಿದ್ಧ ಪತ್ರಿಕೋದ್ಯೋಗಿಗಳ ಪರಿಚಯ, ಚರಿತ್ರೆಯನ್ನು ಪ್ರಕಟಿಸುವ ಅವರ ಒಂದು ಯೋಜನೆ. (ಅಂದ ಹಾಗೆ ಈ ಅಪರ ವಯಸ್ಸಿನಲ್ಲೂ ಇಂಥ ಕ್ರಿಯಾಪೂರ್ಣ ಚಟುವಟಿಕೆ) ಆದರೆ ೩೫ ವರ್ಷಗಳ ಹಿಂದೆ, ನಾನು ಹುಡುಗ/ತರುಣನಾಗಿದ್ದಾಗಲೂ ಈ ಬಗೆಯ ಅದರ ತೋರಿಸುತ್ತಿದ್ದುದು ಈಗಲೂ ನನಗೆ ಮುಜುಗರದ ವಿಷಯ. ಇಂದಿಗೂ ಅವರು ಆ ಶಾಲೆಯೊಡನೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದುದು, ಅವರು ಬದಲಾಗದವರು ಎನ್ನುವುದಕ್ಕೆ ಗಾಢವಾದ ನಿದರ್ಶನಗಳಾಗಿವೆ. 

ಆರ್.  ವಿ ಮೂರ್ತಿಯವರು  ಸಾಮಾಜಿಕ ವಲಯದಲ್ಲಿ ಮಹತ್ವದ ಕೊಡುಗೆಗಳನ್ನು ಕೊಟ್ಟಿದ್ದಾರೆ :

೧. ಮುಂಬೈನ ಸುಪ್ರಸಿದ್ಧ ಷಣ್ಮುಗಾನಂದ ಸಭಾವನ್ನು ಕಟ್ಟಿಬೆಳೆಸುವಲ್ಲಿ ಅವರ ಸೇವೆಯೂ ಬಹಳವಿದೆ. 

೨. ಮುಂಬೈ ಕನ್ನಡ ಸಂಘ, 

೩. ಮೈಸೂರ್ ಅಸೋಸಿಯೇಷನ್,

೪. NKES ಶಿಕ್ಷಣ ಸಂಸ್ಥೆ,

೫. ಸತ್ಯಧ್ಯಾನ ವಿದ್ಯಾಪೀಠ,

೬. ವಾಣಿ ವಿದ್ಯಾಲಯ, 

೭. ಶಂಕರ ಮಠ, 

೮. ಚೆಂಬೂರಿನ ಮೈಸೂರ್ ಹೌಸಿಂಗ್ ಕಾಲೋನಿ  ಇತ್ಯಾದಿ. 

ವೆಂಕಟೇಶ ಮೂರ್ತಿಯವರ ಇಂಗ್ಲಿಷ್ ಭಾಷೆಯ ಹಿಡಿತ,  ಹಾಗೂ ಬರವಣಿಗೆಯ ಶೈಲಿ, ಪತ್ರಿಕಾ ಪ್ರಪಂಚದಲ್ಲಿ ಹೆಸರುಮಾಡಿತ್ತು. ಇದನ್ನು ಗುರುತಿಸಿ ಮೆಚ್ಚಿದ ಹಿಂದಿ ಚಲನಚಿತ್ರ ನಿರ್ದೇಶಕ ನಟ ದೇವಾನಂದ್ ತನ್ನ Guide ಚಲನ ಚಿತ್ರದ  ಆವೃತ್ತಿಗೆ  English subtitles ಕೊಡಲು ವಿನಂತಿಸಿಕೊಂಡಾಗ,  ಮೂರ್ತಿಯವರು ಸಮರ್ಪಕವಾಗಿ ಮಾಡಿ ಕೊಟ್ಟರು. (Guide  ಪುಸ್ತಕದ ರಚೇತ , ಆರ್. ಕೆ. ನಾರಾಯಣ್ ಅವರ ಪ್ರಿಯ ಕಾದಂಬರಿಗಾರ)

"ಪತ್ರಿಕೋದ್ಯಮದ ಮೇರು ಪ್ರತಿಭೆ" ಪುಸ್ತಕ ಬರೆದ ಲೀಲಾ ಬಿ. ಬಗ್ಗೆ  : 

ಶ್ರೀ ಆರ್ ವಿ. ಮೂರ್ತಿಯವರ ಬಗ್ಗೆ "ಪತ್ರಿಕೋದ್ಯಮದ ಮೇರು ಪ್ರತಿಭೆ" ಎಂಬ ಕೃತಿಯನ್ನು ಅಚ್ಚುಕಟ್ಟಾಗಿ ಸಂಪಾದಿಸಿಕೊಟ್ಟವರು ಡಾ,. ಲೀಲಾ ಬಿ.  ವೃತ್ತಿಯಲ್ಲಿ (SIES) ಮಹಾವಿದ್ಯಾಲಯದಲ್ಲಿ ಗ್ರಂಥಪಾಲೆಯಾಗಿ  ನಿವೃತ್ತರಾಗಿರುವ  ಡಾ. ಲೀಲಾ. ಬಿ ಅವರು ಒಬ್ಬ ಸಂಶೋಧಕಿ, ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿದ್ದು ವಿದ್ವಾಂಸರ ಗಮನ ಸೆಳೆದಿವೆ. ಕರ್ನಾಟಕ ಇತಿಹಾಸ ಅಕೆಡೆಮಿಯ ಸಮ್ಮೇಳನಗಳು  ಹಾಗೂ ಇತರ ರಾಷ್ಟ್ರೀಯ ಇತಿಹಾಸ ಸಮ್ಮೇಳನಗಳಲ್ಲಿ ಅವರು ನಿಯಮಿತವಾಗಿ ಭಾಗವಹಿಸುತ್ತಾ ಬಂದಿದ್ದಾರೆ. ಡಾ ಲೀಲಾ ಅವರ ಸಂಶೋಧನಾ ಮಹಾಪ್ರಬಂಧ : "Socio Cultural Aspects of Mysore" ಭಾರತದ ಇತಿಹಾಸಕ್ಕೆ ಸಂಬಂಧಿಸಿದಂತೆ ೩೦ ಕ್ಕೂ ಹೆಚ್ಚು ಶೋಧಲೇಖನಗಳನ್ನು ಬರೆದಿರುವ ಡಾ. ಲೀಲಾ ಅವರು, ಪ್ರವಾಸ ಪ್ರಿಯರು. ಕನ್ನಡ ಸಾಹಿತ್ಯ ಸಂಸ್ಕೃತಿಯ ಶೋಧಕಾರ್ಯದಲ್ಲಿ ಅವರು ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡು ಕಾರ್ಯರಥರಾಗಿದ್ದಾರೆ. 'ಇತಿಹಾಸವೆಂದರೆ ಒಂದು ಅಖಂಡ ಪ್ರಜ್ಞೆ,  ಎಂದು ನಂಬಿರುವ ಲೀಲಾರವರು  ಸದಾ ಅಧ್ಯಯನ ಪ್ರಿಯರು. ಇವರ ಮೈಸೂರು ಸಾಂಸ್ಕೃತಿಕ ಸಂಕಥನ -ಶೋಧಲೇಖನಗಳ ಸಂಕಲನವನ್ನು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದಿಂದ ಪ್ರಕಟಿಸಲ್ಪಟ್ಟಿದೆ.  ಡಾ ಲೀಲಾ.ಬಿ ರವರ ಇತರ ಶೋಧ ಲೇಖನಗಳು :

* ಕರ್ನಾಟಕದಲ್ಲಿ ಪ್ಲೇಗ್ ಹಾವಳಿ, 

* ಕರ್ನಾಟಕದಲ್ಲಿ ಬರಗಾಲ,

* ಆಕರ ಗ್ರಂಥಗಳ ಜೋಡಣೆ, ಎಂತು ಹೇಗೆ ? ಗ್ರಂಥ ಸೂಚಿಯ ಬಳಕೆಯ ಕ್ರಮ,

* "Founders and Guardians of the Asiatic Society of Mumbai "-John faithfull Fleet" ಎಂಬ ಪುಸ್ತಕವನ್ನು ಡಾ. ಲೀಲಾ ಮತ್ತು ಡಾ.ಪೂರ್ಣಿಮಾ ಶೆಟ್ಟಿಯವರು ಕೂಡಿ ಬರೆದಿದ್ದಾರೆ.  ಈ ಲೇಖನ  ಲೈಬ್ರೆರಿಯಲ್ಲಿ ಬಂದು ಪುಸ್ತಕಗಳಿಗೆ ಹುಡುಕಾಡಿ ಶ್ರಮಪಡುವ  'ಹೊಸ ಶಿಕ್ಷಣಾರ್ಥಿಗಳಿಗೆ ಕೈಪಿಡಿ'ಯಂತಿವೆ.

-ಎಚ್. ಆರ್. ಎಲ್. (ರಾಧಾತನಯ)

ವಿಕಿಪೀಡಿಯ ಸಂಪಾದಕ.

ಘಾಟ್ಕೋಪರ್ ( ಪ) ಮುಂಬೈ  

 

 

Comments

Submitted by venkatesh Mon, 10/12/2020 - 17:24

ನನಗೆ ಏಕೆ ಮೂರ್ತಿಗಳ ಬಗ್ಗೆ ಆಸಕ್ತಿ ?

ನಮ್ಮ ಇನ್ಸ್ಟಿಟ್ಯುಟ್ ನ ನಿರ್ದೇಶಕ ಡಾ. ಆರ್. ಎಲ್ ಏನ್ .ಐಯ್ಯಂಗಾರ್. ಮತ್ತೊಬ್ಬರು ಡಾ. ಸಿ. ನಂಜುಂಡಯ್ಯನವರು ಇವರು ನನಗೆ ಪರಿಚಯವಿಲ್ಲ ಡಾ. ಆರ್. ಎಲ್ ಏನ್ಐಯ್ಯಂಗಾರ್  ನನ್ನನ್ನು ಶ್ರೀ. ಆರ್ ವಿ. ಮೂರ್ತಿಯವರಿಗೆ ಪರಿಚಯಿಸಿದರು. ಹಾಗಾಗಿ ನಾನು ಅವರ ಮನೆಗೆ(ಇಬ್ಬರ ಮನೆಗೂ) ಆಗಾಗ ಹೋಗುತ್ತಿದ್ದೆ. ಮುಂಬೈ ನ ಹತ್ತಿ ಉದ್ಯಮ, ಸಮಸ್ಯೆಗಳು, ಭಾರತದಲ್ಲಿ ನಡೆಯುತ್ತಿರುವ ಹತ್ತಿ ಬೆಳೆಯ ಸಂಶೋಧನೆಗಳನ್ನು ಚರ್ಚಿಸುತ್ತಿದ್ದೆ. (ನಾನು ಮುಂದೆ ವಿಕಿಪೀಡಿಯದಲ್ಲಿ ನನ್ನನ್ನು ತೊಡಗಿಸಿಕೊಂಡೆ. ಈಗ ಮುಂಬೈ ಕನ್ನಡಿಗರು ಎನ್ನುವ ಶೀರ್ಷಿಕೆಯಲ್ಲಿ ನೂರಕ್ಕೂ ಮೇಲ್ಪಟ್ಟು ಲೇಖನ ಬರೆದಿದ್ದೇನೆ)

ನಮ್ಮ ಇನ್ಸ್ಟಿಟ್ಯುಟ್ ನ ನಿರ್ದೇಶಕ ಡಾ. ಆರ್. ಎಲ್ ಏನ್ .ಐಯ್ಯಂಗಾರ್. ಮತ್ತೊಬ್ಬರು ಡಾ. ಸಿ. ನಂಜುಂಡಯ್ಯನವರು ಇವರು ನನಗೆ ಪರಿಚಯವಿಲ್ಲ ಡಾ. ಆರ್. ಎಲ್ ಏನ್ಐಯ್ಯಂಗಾರ್  ನನ್ನನ್ನು ಶ್ರೀ. ಆರ್ ವಿ. ಮೂರ್ತಿಯವರಿಗೆ ಪರಿಚಯಿಸಿದರು. ಹಾಗಾಗಿ ನಾನು ಅವರ ಮನೆಗೆ(ಇಬ್ಬರ ಮನೆಗೂ) ಆಗಾಗ ಹೋಗುತ್ತಿದ್ದೆ. ಮುಂಬೈ ನ ಹತ್ತಿ ಉದ್ಯಮ, ಸಮಸ್ಯೆಗಳು, ಭಾರತದಲ್ಲಿ ನಡೆಯುತ್ತಿರುವ ಹತ್ತಿ ಬೆಳೆಯ ಸಂಶೋಧನೆಗಳನ್ನು ಚರ್ಚಿಸುತ್ತಿದ್ದೆ. (ನಾನು ಮುಂದೆ ವಿಕಿಪೀಡಿಯದಲ್ಲಿ ನನ್ನನ್ನು ತೊಡಗಿಸಿಕೊಂಡೆ. ಈಗ ಮುಂಬೈ ಕನ್ನಡಿಗರು ಎನ್ನುವ ಶೀರ್ಷಿಕೆಯಲ್ಲಿ ನೂರಕ್ಕೂ ಮೇಲ್ಪಟ್ಟು ಲೇಖನ ಬರೆದಿದ್ದೇನೆ)

ಆರ್. ವಿ. ಮೂರ್ತಿಯವರು ತಮ್ಮ ಇಂಗ್ಲೆಂಡ್ ಪ್ರವಾಸದ ಒಂದು ಸುಸಂದರ್ಭವನ್ನು ನಮ್ಮೊಂದಿಗೆ ಹಂಚಿಕೊಂಡರು :

ಆರ್. ವಿ. ಮೂರ್ತಿಯವರು ಇಂಗ್ಲೆಂಡ್ ಗೆ ಹೋಗಿದ್ದಾಗಿನ ಮಾತು. ಅವರಿಗೆ  ಆಗಿನ ಬ್ರಿಟನ್ ಪ್ರಧಾನಿ ಮಿ ಆಟ್ಲಿಯವರನ್ನು ಭೇಟಿಮಾಡುವ ಅಪೇಕ್ಷೆಯಾಯಿತಂತೆ. ಅಲ್ಲಿ Prior Appointment ಇಲ್ಲದೆ ಯಾರಿಗೂ Meet ಮಾಡಲು  ಸಾಧ್ಯವಿಲ್ಲದ ಮಾತು. ಆದರೆ ಮೂರ್ತಿಯವರು ತಮ್ಮ Visiting card  ಕೊಡುತ್ತಾ, 'ಕೇವಲ ೫ ನಿಮಿಷ ಸಮಯ ಕೊಡಲು ಕೇಳು ನೋಡೋಣ' ಎಂದು ಕಾವಲು ಕಾಯುತ್ತಿದ್ದ  ಪೇದೆಗೆ. ಹೇಳಿದರಂತೆ. ಅವನು ಮನಸ್ಸಿಲ್ಲದ ಮನಸ್ಸಿನಿಂದ ಒಳಗೆ ಹೋಗಿ,  ಹೊರಗೆ ಬಂದವನೇ, ಸರ್ ಎಂದು ಹೇಳಿ ಕಣ್ಣು ಮಿಟಿಕಿಸಿ,  Sir you are called inside by the hon. Prime minister ಎಂದು ಹೇಳಿದಾಗ ತಮ್ಮ ತಂತ್ರ ಫಲಿಸಿತೆಂದು  ಮೂರ್ತಿಯವರಿಗೆ ಸಂತೋಷವಾಯಿತು.  ಭಾರತದಂತಹ ದೊಡ್ಡ ಸರಕುಗಳ ರಫ್ತುಮಾಡುವ ರಾಷ್ಟ್ರದ ನೀತಿ, ನಿಯಮಗಳು, ಮತ್ತು ತೊಂದರೆಗಳನ್ನು Commerce ಪತ್ರಿಕೆಯ ಸಮರ್ಥ Editor  ಬಂದಿರುವಾಗ ಅವರನ್ನೇ ವಿಚಾರಿಸಿ ಮಾತಾಡಿಸುವುದು ಜಾಣತನವೆಂದು ಚಾಣಾಕ್ಷರಾದ ಅಟ್ಲಿಯವರ ಮನಸ್ಥಿತಿ. ಇದನ್ನು ನಿರೀಕ್ಷಿಸಿದ್ದ ನಮ್ಮ ಮೂರ್ತಿಯವರು ತಮ್ಮ ಅತ್ಯುತ್ತಮ ಇಂಗ್ಲಿಷ್ ನಲ್ಲಿ ಪ್ರಧಾನಿಯವರ ಪ್ರಶ್ನೆಗಳಿಗೆ ಸೊಗಸಾಗಿ ಉತ್ತರಕೊಟ್ಟರು. ಕೊನೆಗೆ ಅವರ ಮಾತುಕತೆ ಮುಗಿಯುವಾಗ ೪೫ ನಿಮಿಷವಾಗಿತ್ತು. ಅದೂ ಅಲ್ಲದೆ,  ಆಟ್ಲಿ ಯವರು ಮೂರ್ತಿಯವರನ್ನು ಕಳಿ ಕೊಡಲು ಮುಖ್ಯ ದ್ವಾರದವರೆಗೂ ಬಂದು ಹಸ್ತಲಾಘವಿತ್ತು ಕಳಿಸಿಕೊಟ್ಟರಂತೆ. (10 Downing street, London),  ಈ ವಿಷಯವನ್ನು ಮೂರ್ತಿಯವರ ಬಾಯಿನಲ್ಲಿ ಕೇಳಿ ನಾನು ಪುಳಕಿತಗೊಡಿದ್ದೆ. 

-HRL