ಶ್ರೀ ಕೃಷ್ಣ

ಶ್ರೀ ಕೃಷ್ಣ

ಕವನ

ಶ್ರೀಕೃಷ್ಣ

ಕರೆದವರಿಗೆ ಒಲಿದನು ಶ್ರೀಕೃಷ್ಣ
ಕರ್ಮಫಲದಾಯಕನು ಶ್ರೀಕೃಷ್ಣ

ಕಳ್ಳನೆಂದರು ಸುಳ್ಳನೆಂದರು
ಮಳ್ಳನೆಂದರು ಮನೆಹಾಳನೆಂದರು
ಕಪಟಿ ಎಂದರು ಕುತಂತ್ರಿ ಎಂದರು
ನಯವಂಚಕನೆಂದರು ನಂಬಿಕೆದ್ರೋಹಿ ಎಂದರು
!!ಕರೆದವರಿಗೆ ಒಲಿದನು ಶ್ರೀಕೃಷ್ಣ!!

ಬಂಧು ಎಂದರು ಭಾಂಧವನೆಂದರು
ಬಲವಂತನೆಂದರು ಭಗವಂತನೆಂದರು
ಬುದ್ಧಿವಂತನೆಂದರು ಸದ್ಬುದ್ಧಿದಾತನೆಂದರು
ಭೂಪಾಲಕನೆಂದರು ಭೂನಾಯಕನೆಂದರು
!!ಕರೆದವರಿಗೆ ಒಲಿದನು ಶ್ರೀಕೃಷ್ಣ!!

ಶಿಷ್ಟನೆಂದರು ದುಷ್ಟನೆಂದರು
ನೀಚನೆಂದರು ನಿಕೃಷ್ಟನೆಂದರು
ದಯಾಳುವೆಂದರು ದಯಾಹೀನನೆಂದರು
ಧರ್ಮ ಸ್ವರೂಪನೆಂದರು ಅಧರ್ಮಿಯೆಂದರು
!!ಕರೆದವರಿಗೆ ಒಲಿದನು ಶ್ರೀಕೃಷ್ಣ!!

ಸ್ತ್ರೀ ಚೋರನೆಂದರು ಸ್ತ್ರೀ ರಕ್ಷಕನೆಂದರು
ವಸ್ತ್ರ ಅಪಹಾರಿ ಎಂದರು ವಸ್ತ್ರದಾನಿ ಎಂದರು
ವಸುದೇವಸುತನೆಂದರು ದೇವಕಿ ಕಂದನೆಂದರು
ನಂದನ ಕಂದನೆಂದರು ಯಶೋದೆಯ ಸುತನೆಂದರು
!!ಕರೆದವರಿಗೆ ಒಲಿದನು ಶ್ರೀಕೃಷ್ಣ!!

ಎಲ್ಲರನ್ನೂ ಮೆಚ್ಚಿಸಲು ಆಗಲಿಲ್ಲ ಶ್ರೀಕೃಷ್ಣನಿಂದ
ಹೋಗಳಿದರು ತೇಗಳಿದರು ಶ್ರೀಕೃಷ್ಣನಿಗೆ ಆನಂದ
ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಿದ ಗೋವಿಂದ
ನೀಡಿದ ಪ್ರತಿಯುಗದಲ್ಲಿಯೂ ಜನಿಸುವ ಭರವಸೆಯೊಂದ
!!ಕರೆದವರಿಗೆ ಒಲಿದನು ಶ್ರೀಕೃಷ್ಣ!!

ರಚನೆ:-ತುಂಬೇನಹಳ್ಳಿ ಕಿರಣ್ ರಾಜು ಎನ್