ಶ್ರೀ ತುಳಸಿ ಬಾರಮ್ಮ
ಕವನ
ಅಮ್ಮಾ ಬಾರಮ್ಮ ಶ್ರೀ ತುಳಸಿ ಬಾರಮ್ಮ
ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ/
ಧಾರಿಣೀ ದೇವಿ ಒಲಿದು ಬಾರಮ್ಮ
ಪದುಮನಾಭನ ಹೃದಯವೇಣಿಯೇ ಬಾರಮ್ಮ//
ದುರುಳ ರಕ್ಕಸ ಜಲಂಧರನ ಮಡದಿ
ವೃಂದಾ ದೇವಿ ನೀನಾಗಿದ್ದೆಯಮ್ಮ/
ಪರಮ ಪಾತಿವ್ರತ್ಯಕೆ ಹೆಸರಾದೆ ನೀನಮ್ಮ
ಪುರುಷೋತ್ತಮನ ವರಿಸಿ ಧನ್ಯಳಾದೆಯಮ್ಮ//
ಕ್ಷೀರ ಸಾಗರ ಮಥನದಿ ಉದ್ಭವಿಸಿದೆ
ಅಮೃತ ಕಲಶದೊಳಗೆ ದೇವ ಬಿಂದುವಾದೆ/
ತುಳಸಿ ನಾಮಾಂಕಿತಳು ಧನ್ಯಳೋ ನೀನು
ಲಕ್ಷ್ಮೀ ನಾರಾಯಣನಿಂದ ಮಾನ್ಯಳೋ ನೀನು//
ಉತ್ಥಾನ ದ್ವಾದಶಿಗೆ ಪೂಜೆಯು ನಿನಗಮ್ಮ
ಧಾತ್ರೀ ಸಹಿತ ಸಕಲ ವಂದನೆಗಳು ನಿನಗಮ್ಮ/
ಶ್ರೀ ಕೃಷ್ಣ ತುಲಾಭಾರದಿ ಎಸಳು ನೀನಾದೆ
ಭಾಮಾದೇವಿಯ ಗರ್ವವ ಮುರಿದೆಯಮ್ಮ//
ಆರೋಗ್ಯದಾಯಕಿ ಪರಮ ಪವಿತ್ರ ತಾಯಿಯೇ
ದಿವ್ಯಾಭರಣ ಭೂಷಿತಳು ರತ್ನ ರೂಪಿಣಿಯೇ/
ಸರ್ವ ಪಾಪಗಳ ಪರಿಹರಿಸಿ ಪೊರೆಯಮ್ಮ
ಮಣಿಕರ್ಣಿಕಾಯೇ ಪಾಹಿಮಾಂ ಪಾಹಿಮಾಂ//
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
