ಶ್ರೀ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ 'ಹಸಿರುಹಾದಿ'

ಶ್ರೀ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ 'ಹಸಿರುಹಾದಿ'

ಇತ್ತೀಚೆಗೆ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ  ಓದಿದೆ.
'ಹಸಿರು ಹಾದಿ'    ಎಷ್ಟು ಬಾರಿ ಓದಿದರು ಮನಸ್ಸಿಗೆ ಹಿತವೆನ್ನಿಸುತ್ತದೆ  ಅಷ್ಟು ಚೆನ್ನಾಗಿದೆ  ಸತೀಶ್ ಚಪ್ಪರಿಕೆಯವರ ನಿರೂಪಣೆ. 
ಯಲ್ಲಪ್ಪ ರೆಡ್ಡಿಯವರು
ಕನ್ನಡ ನಾಡು ಕಂಡ ಅತ್ಯಂತ ಶ್ರೇಷ್ಠ ಅರಣ್ಯ ಸಂರಕ್ಷಣಾ ಅಧಿಕಾರಿ.  ಅವರ ದಕ್ಷ ಅಧಿಕಾರ ಅವಧಿಯಲ್ಲಿ ಅರಣ್ಯದ ನಿಜವಾದ ಸಂರಕ್ಷಣೆ ಸಂವರ್ಧನೆ ನಡೆಯಿತು.  ಅವರ ವೃತ್ತಿ ಜೀವನದಲ್ಲಿ  ನಡೆದ ಅನೇಕ ಮಹತ್ತರ ಘಟನೆಗಳನ್ನು ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ.  ತಮ್ಮ ಕೆಲಸ ಕಾರ್ಯ ಗಳಲ್ಲಿ ತಡೆಯೊಡ್ಡಿದ ರಾಜಕೀಯ ವ್ಯಕ್ತಿಗಳನ್ನು  ಮತ್ತು ಪುಡಾರಿ ಗಳನ್ನು ಸಮರ್ಥವಾಗಿ ತಮ್ಮದೆ ಕಾರ್ಯಶೈಲಿಯಲ್ಲಿ ಹಿಮ್ಮೆಟ್ಟಿಸಿದ್ದಾರೆ.    ಈ ಆತ್ಮಕಥೆ ಓದುತ್ತಿದ್ದರೆ ಸಿನಿಮಾ ನೋಡಿದಂತೆ ಭಾಸವಾಗುತ್ತದೆ. ಏಕೆಂದರೆ ಅಷ್ಟು ರೋಚಕವಾದ ಘಟನೆಗಳು ಒಳಗೊಂಡಿದೆ.  ಕರ್ನಾಟಕದ ಉದ್ದಗಲಕ್ಕೂ ಕಾರ್ಯನಿರ್ವಹಿಸಿರುವ ಅವರ ಜೀವನ ಚರಿತ್ರೆ ಇಂದಿನ ಯುವ ಸರ್ಕಾರಿ ಅಧಿಕಾರಿಗಳಿಗೆ ಪ್ರೇರಕ ಶಕ್ತಿಯಾಗಿದೆ.

ಈ ಪುಸ್ತಕಕ್ಕೆ
ಸಾ ಕೃ ರಾಮಚಂದ್ರರಾವ್ ಅವರು ಮುನ್ನುಡಿ ಬರೆದಿದ್ದರೆ ಲಕ್ಷ್ಮಣ ಕೊಡಸೆಯವರು ಹಿನ್ನುಡಿ ಬರಿದ್ದಾರೆ. ಇದು ಹೆಗ್ಗೋಡಿನ ಅಕ್ಷರ ಪ್ರಕಾಶನ ಪ್ರಕಟಿಸಿದ ಪುಸ್ತಕವಾಗಿದೆ.

ಕೃಪೆ : ಅಕ್ಷರ ಪ್ರಕಾಶನ ಹೆಗ್ಗೋಡು.