ಶ್ರೀ ರಾಘವೇಂದ್ರ ಮಹಿಮೆ
ವೀಕ್ಷಕರ ರೇಟಿಂಗ್ ಬಗ್ಗೆ ಗೊತ್ತಿಲ್ಲ, ಈ-ಟಿವಿ ಕನ್ನಡ ವಾಹಿನಿ, “ಶ್ರೀರಾಘವೇಂದ್ರ ಮಹಿಮೆ” ಎಂಬ ಧಾರಾವಾಹಿಯೊಂದನ್ನು, ಪ್ರಶಸ್ತ ಸಮಯದಲ್ಲಿ ಬಿತ್ತರಿಸುತ್ತಿದೆ. ಹೆಸರೇ ಸೂಚಿಸುವಂತೆ, ಇದರ ಹೂರಣ, ಜಿಗಟು-ಜಿಗಟಾದ ಕಂದಾಚಾರ ಎಂದೆನಿಸಿಬಿಡುವುದು ಸಹಜ. ತಕ್ಕಂತೆ ಇದರಲ್ಲಿನ ಉಡು-ತೊಡಿಗೆಗಳು, ಶ್ರೀಮಂತ ಭಾಷಾ ಸಂಭಾಷಣೆ, ಮಡಿ-ಮೈಲಿಗೆಯ ಜೀವನ ಶೈಲಿ – ಇವೆಲ್ಲಾ ಅಪ್ಪಟ “ಮಾಧ್ವ”ವೇ ಆಗಿದೆ. ಆದರೂ ಏಕೋ-ಏನೋ, ಕ್ರಾಪುತಲೆಯ ಆಚಾರ್ಯಗಣ ಮತ್ತು ಶ್ರೀಪಾತ್ರಧಾರಿಗಳ, ಜತನದಿಮದ ಬೆಳೆಸಿದ ಲಕ್ಷಣವಾದ ಗಡ್ಡ ಮತ್ತು, ಟೋಫನ್ನಿನ ನೀಟಾಗಿ ಬಾಚಿದ ಶಿಖಾಗುಚ್ಚದ ಕೃತಕತೆ ಎದ್ದು ಕಂಡುಬಿಡುತ್ತದೆ. ಹೊಗಲಿ. ಚಿತ್ರ ನಿರ್ಮಾಪಕನ ಕ್ರಾಂತಿಕಾರೀ ಪರಿಕಲ್ಪನೆಯ ಸುಧಾರಕ ದೃಷ್ಟಿಪಾತ, ಬಹುಶಃ ಶ್ರೀರಾಘವೇಂದ್ರ ಯತಿಗಳಿಗೆ ಚೆನ್ನಾಗಿ ಹೊಂದುವಂಥದೇ ಹೌದು. ಆದರೆ ಒಂದು ವಿಷಯ ನಮ್ಮ ನೆನಪಿನಲ್ಲಿರಬೇಕು, ಶ್ರೀ ರಾಘವೇಂದ್ರ ಸ್ವಾಮಿಗಳು, ಮಡಿ-ಮಡಿಯ ಧರ್ಮ ಪ್ರರಕ್ಷಕ ಪೀಠವೊಂದರ ಅಧಿಪಾತಿಗಳಾಗಿದ್ದರು, ಎನ್ನುವುದು.
ಇಷ್ಟಕ್ಕೂ ಆ ಕಾಲಘಟ್ಟದ ಸಾಮಾಜದಲ್ಲಿ ಪ್ರತಿರೋಧವೆನ್ನುವುದು ಕಲ್ಪನೆಗೂ ಮೀರಿದ ವಸ್ತುವಾಗಿತ್ತು. ವೈಯಕ್ತಿಕತೆ ಮತ್ತು ವ್ಯಕ್ತಿ ಸ್ವಾತಂತ್ರ್ಯದ, ಸವಾನುಭವ, ಆಲೋಚನೆಗಳ ಕಿಂಚಿತ್ ಪರವೆಯನ್ನು, ಆ ಹಿಂದಣ ನೂರೈತ್ತು ವರ್ಷಗಳ ಕೆಳಗೆ, ಕನಕ-ಪುರಂದರ-ವೈಕುಂಠದಾಸಾದಿಗಳು ಉಮಟುಮಾಡಲು ಯತ್ನಿಸಿದ್ದಿರಬಹುದಾದರೂ, ಪಟ್ಟಭದ್ರರು ಅದನ್ನು ಬೆಳೆಯಗೊಟ್ಟಿರಲಿಲ್ಲ. ವಿಜಯದಾಸಾದಿಗಳಿಂದ ದಾಸಸಹಿತ್ಯದ ಪುನರುತ್ಥಾನದ ಹೆಸರಿನಲ್ಲಿ. ಆಚಾರಶೀಲತೆಯೇ ಅದನ್ನು ಕಪಿಮುಷ್ಠಿಗೆ ತೆಗೆದುಕೊಂಡಾಗಿತ್ತು; ಹರಿದಾಸ ಸಾಹಿತ್ಯವೆಂದರೆ, ಶ್ರೀಸುಧಾದಿ ಮಧ್ವಶಾಸ್ತ್ರ, ಆಚಾರಸಂಹಿತೆಯ ಅನುವಾದವಷ್ಟೇ ಹೊರತು, ಸ್ವತಂತ್ರ ಆಲೋಚನೆಯಲ್ಲ; ಸುಧಾಪಾಠ ಓದಿ ಹೇಳಬಹುದಾದವನಷ್ಟೇ ‘ಅಪರೋಕ್ಷ ಜ್ಞಾನಿ; ಬಡತನದಿಂದ ಬಂದ ದಾಸರಿಗೆ, ಅದನ್ನೋದುವ ಶ್ರೀಮಂತಿಕೆಯಿಲ್ಲಿದಿರುವುದರಿಂದ ಅವರು ಅಪರೋಕ್ಷಜ್ಞಾನಿಗಳಲ್ಲ; ಆದ್ದರಿಂದ ಅವರ ಮಾತು-ಕೃತಿಗಳು ‘ವೇದವಾಕ್ಯ’ವಾಗುವುದು ಸಾಧ್ಯವೇ ಇಲ್ಲವೆಂಬ ವಿಧಿಯನ್ನು ‘ಆಚರಶೀಲರು’ ಪಟ್ಟಭದ್ರಗೊಳಿಸಿದ್ದರು.ಅಂತಹ ‘ಧರ್ಮ’ದಲ್ಲಿ ವೇದವಾದದ ಅರ್ಥಾನರ್ಥಕಾರೀ ಬಾಯಿಬಡುಕತನಕ್ಕಲ್ಲದೆ, ಹೃದಯವಮತಿಕೆಗೆ ಜಾಗವಾದರು ಎಲ್ಲಿತ್ತು? ಇಂತಹ ಒಂದು ಆಢ್ಯತೆಯ ಆಚಾರ್ಯಪೀಠದಲ್ಲಿದ್ದಾಗಿಯೂ ರಾಘವೇಂದ್ರ ಸ್ವಾಮಿಗಳು, ಕರುಣಾರ್ದ್ರ ಹೃದಯಿಗಲಾಗಿದ್ದಿದೇ ದೊಡ್ಡ ‘ಪವಾಡ’. ಅವರ ಹೆಸರಿನ ಸುತ್ತಲೂ ಭದ್ರವಗಿ ಕಟ್ಟಿಹಾಕಿರುವ ಪವಾಡದ ಈ ‘ಕಾಕ-ಗುಬ್ಬಿ’ಯನ್ನೇ ಕ್ಷ-ಕಿರಣದಲ್ಲಿ ವೀಕ್ಷಿಸುವುದಾದರೆ ಅವರ ಮಾನವತಾ ಪ್ರೇಮ ಅರ್ಥವಾದೀತು.
ಪ್ರಸಕ್ತ ಟಿವಿ ನಾಟಕ ಉತ್ಪಾದಕರಿಗೆ ಇದು ಅರ್ಥವಾದಂತಿದೆ. ಆದರೆ ಅದನ್ನು ಹಾಗೆ ವಾಚ್ಯವಾಗಿ ಹೇಳುವುದು ಕಲಾವಂತಿಕೆಯಾದು ಎಂಬ ಸೌಂದರ್ಯ ಪ್ರಜ್ಞೆಯಿಂದಲೋ ಅಥವಾ ಪಟ್ಟಭದ್ರತೆಯ ಕ್ಟಿಗೊಳಪಟ್ಟೋ ಅಂತಹ ಪ್ರಯತ್ನ ಇಲ್ಲಿ ಆದಂತಿಲ್ಲ.
ಅಲ್ಲದೆ ಯುಗಯುಗಾಂತರದ ಘಟನೆಗಳನ್ನು ಬೆಸಯುವ ಅಪ್ಪಣಾಚಾರ್ಯರ ಸೂತ್ರಗಾರಿಕೆ ಅಥವಾ ಭಾಗವಂತಿಕೆ ತಂತ್ರ, ಇಲ್ಲಿ ಅಷ್ಟಾಗಿ ಯಶಸ್ವಿಯಾದಮತೆನಿಸುವುದಿಲ್ಲ. ಆದ್ದರಿಂದ ಅವು ಕಲಸುಮೇಲೋಗರವಾಗಿದೆ. ಹಾಗೆಯೇ ಸೀರಿಯಲ್, ರಾಯರ ಪವಾಡಗಳನ್ನು ಒಪ್ಪಿಕೊಳ್ಳುತ್ತದೆ; ಅದಕ್ಕೆ ತಾರ್ಕಿಕ ವ್ಯಾಖ್ಯಾನಕೊಡುವ ಪ್ರಯತ್ನವನ್ನೂ ಮಾಡುತ್ತದೆ. ಆದರೆ ಅದು ಪೇಲವವೆನಿಸುತ್ತದೆ.
ನೋಡೋಣ, ಶ್ರೀರಯರು, ಒಂದು ಕರುಣಾಮಯ ಸ್ವತಂತ್ರವ್ಯಕ್ತಿತ್ವವಾಗಿಯೇ ‘ಅಪರೋಕ್ಷ ಪಟ್ಟ’ (ನಿಜವಾದ ಅರ್ಥದಲ್ಲಿ ಬಸವಾದಿ ಪ್ರಮಥರಂತೆ!) ಪಡೆಯುತ್ತಾರೋ, ಆದರೆ ಕಂದಾಚಾರದ ಮೂಲಬಿಂದುವಾಗಿ ನೂರಾರು (ಮುನ್ನೂರು, ನಂತರ ಏಳುನೂರು, ಇನ್ನೂ ಮುಂದೆ ಸಾವಿರಾರು) ವರ್ಷದ ಜೀವಂತಿಕೆ ಪಡೆಯುತ್ತಾರೆಯೋ? ಕರ್ರರ್ದ್ರ ಬೆಳವಣಿಗೆಯ