ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೧೧

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೧೧

ಒಂಬತ್ತು ಗುರುಗಳು
 
ಶ್ರೀಶಂಕರರಿಗೆ ತಮ್ಮ ಪೂರ್ವಸಂಕಲ್ಪದ ಈಡೇರಿಕೆಗೆ ಸಮಯ ಬಂದಿತೆಂದು ಅನ್ನಿಸಿತು. ಪರಶಿವನ ಪ್ರಸಾದ, ಶ್ರೀರಾಮನ ದಿವ್ಯವಿಗ್ರಹದ ಆಗಮನ ಇವೆರಡೂ ಸಂಕಲ್ಪಸಿದ್ಧಿಯ ಲಕ್ಷಣವಾಗಿ ತೋರಿತು. ಪ್ರಾಚೀನ ಗುರುಪರಂಪರೆಯ ಮುಂದುವರಿಕೆಯ ಇನ್ನೊಂದು ಮಂಗಲಕ್ಕೆ ಮನಸ್ಸು ಸಜ್ಜಾಯಿತು.
 
ಗುರುಪರಂಪರೆ ಸೃಷ್ಟಿಯ ಆದಿಯಿಂದ ಇದೆ ಎನ್ನುವುದಕ್ಕಿಂತ ಅದು ಅನಾದಿ ಎನ್ನುವುದೇ ಸರಿ. ಸೃಷ್ಟಿಯ ಮೊದಲ ಹಜ್ಜೆಯೇ ಗುರುವಾಗಿ ಆವಿರ್ಭವಿಸಿತು. ಅದು ತನ್ನನ್ನು ವಿಸ್ತರಿಸಿಕೊಳ್ಳಲು ಹೊರಟಾಗ, ಮತ್ತಲ್ಲಿ ಗುರುತ್ವವನ್ನು ಮೂಡಿಸಿತು. ಅದು ತನ್ನ ಮನದಿಂದ ಸಂತತಿಯನ್ನು ಸೃಷ್ಟಿಸಿದಾಗ ಅಲ್ಲಿಯೂ ಗುರುತ್ವವನ್ನು ಪಸರಿಸಿತು. ಮತ್ತಲ್ಲಿ ಸಂತತಿ ಮುಂದುವರಿದಾಗ ಗುರುತ್ವ ಹರಿಯಿತು. ಸಂತತಿಯಿಂದದು ಶಿಷ್ಯ ಪ್ರಶಿಷ್ಯರಿಗೆ ಪ್ರವಹಿಸಿತು.
 
ಇದು ಸೃಷ್ಟಿಯ ಗುರುಪರಂಪರೆ ಬೆಳೆದ ಪರಿ. ಈ ಹರಿವಿನಲ್ಲಿ ಬಂದವರು ಒಂಬತ್ತು ಗುರುಗಳು. ಇವರೆಲ್ಲರೂ ಗುರುತ್ವದ ಪರಾಕಾಷ್ಠೆಯನ್ನು ತಲುಪಿದವರು. ತಮ್ಮ ಶಿಷ್ಯರಿಗೆ ಮಾತ್ರ ಬೋಧಿಸಿ ನಿವೃತ್ತರಾದವರಲ್ಲ. ಬದಲಿಗೆ ತಮ್ಮ ಪ್ರತಿ ಹೆಜ್ಜೆಯಲ್ಲೂ ಜೀವಸಂಕುಲಕ್ಕೆ ಮಾರ್ಗದರ್ಶನವಿತ್ತವರು. ಅಂದಿಗಷ್ಟೇ ಅಲ್ಲ, ಮುಂದೆಂದಿಗೂ ಆ ಮಾರ್ಗವನ್ನು ಹಿಡಿದವರಿಗೆ ಗುರಿ ಸಿಗುವಂತೆ ಮಾಡಿದವರು.
 
ಯಾರವರು? ಅವರೇ ಇವರು: ನಾರಾಯಣ – ಬ್ರಹ್ಮ –  ವಸಿಷ್ಠ – ಶಕ್ತಿ – ಪರಾಶರ – ವ್ಯಾಸ – ಶುಕ – ಗೌಡಪಾದಾಚಾರ್ಯ – ಗೋವಿಂದಭಗವತ್ಪಾದರು.
 
 
ವಿದ್ವಾನ್ ಜಗದೀಶಶರ್ಮಾ ಸಂಪ
 
ಹಿಂದಿನ ಹೆಜ್ಜೆಗಳಿಗಾಗಿ:
www.srisamsthana.org