ಶ್ರೀ ವಿಕೃತಿನಾಮ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು !
ಬರಹ
ನಮ್ಮೆಲ್ಲ ಸಂಪದೀಯ ಗೆಳೆಯರಿಗೂ ಮತ್ತು ಬೇರೆ ಎಲ್ಲ ವಲಯಗಳಲ್ಲಿ ನನ್ನೊಡನೆ ಸ್ಪಂದಿಸುತ್ತಿರುವ ಎಲ್ಲಾ ಗೆಳೆಯ, ಗೆಳತಿಯರಿಗೆಲ್ಲಾ ’ವಿಕೃತಿನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.” ನಮ್ಮೆಲ್ಲರ ಮನೋಕಾಮನೆಗಳನ್ನು ಪೂರ್ತಿಮಾಡಲು ನಮಗೆ ಹುರುಪು, ಮತ್ತು ಮಾನಸಿಕ ಸ್ತೈರ್ಯ, ನೆಮ್ಮದಿಗಳನ್ನು ಕೊಡೆಂದು ಆ ದಯಾಮಯನನ್ನು ಪ್ರಾರ್ಥಿಸಿ, ನಮ್ಮ ನಮ್ಮ ದೈನಂದಿನ ಕೆಲಸಗಳನ್ನು ನಿಷ್ಠೆ ಮತ್ತು ಆತ್ಮವಿಶ್ವಾಸ, ಮತ್ತು ಸಮಾಧಾನ ಹಾಗೂ ನಗುಮುಖದಿಂದ ಮಾಡೋಣ.
ಯಾರಿಗೂ ಕೆಡಕು ಬಯಸದೆ, ನಮ್ಮ ಕೆಲಸಗಳಲ್ಲಿ ಸಂಪೂರ್ಣವಾಗಿ ನಮ್ಮನ್ನು ತೊಡಗಿಸಿಕೊಂಡು, ಒಂದು ಹೊಸ ವಿಚಾರಧಾರೆಗೆ ಅವಕಾಶಮಾಡಿಕೊಡೋಣ. ಒಮ್ಮೆಯಾದರೂ ನಮ್ಮ ಕೊಡುಗೆಯೇನೆಂದು ಸ್ಮರಿಸಿಕೊಂಡು, ನಮ್ಮನ್ನೇ ಪ್ರಶ್ನಿಸಿಕೊಳ್ಳುತ್ತಾ, ಸಮಾಜಕ್ಕೆ ಏನಾದರೂ ಕೊಡುವ ದಿಕ್ಕಿನಲ್ಲಿ ಶ್ರಮಿಸೋಣ. ಇದೇ ನಮ್ಮ ಹೊಸವರ್ಷದ ನಮ್ಮ ಶಪಥವೆನ್ನೋಣವೇ ?