ಶ್ರೀ " ವಿರೋಧಿ ಸಂವತ್ಸರದ ಯುಗಾದಿ " ಯ ಹಾರ್ದಿಕ ಶುಭಾಶಯಗಳು !

ಶ್ರೀ " ವಿರೋಧಿ ಸಂವತ್ಸರದ ಯುಗಾದಿ " ಯ ಹಾರ್ದಿಕ ಶುಭಾಶಯಗಳು !

ಬರಹ

ಯುಗಾದಿ ಹಬ್ಬವನ್ನು ’ಚಾಂದ್ರಮಾನ ’ ಮತ್ತು ’ಸೌರಮಾನ ’ ರೀತಿಯಾಗಿ ಆಚರಿಸುವ ಎರಡು ಪದ್ಧತಿಗಳು ನಮ್ಮಲ್ಲಿವೆ. ಈ ವರ್ಷ ಚಾಂದ್ರಮಾನ ರೀತಿ ಚೈತ್ರ ಶುಕ್ಲ ಪ್ರತಿಪತ್ ತಾ. ೨೭-೦೩-೨೦೦೯ ನೇ ಶುಕ್ರವಾರವೂ, (ಇಂದು) ಸೌರಮಾನರೀತಿ ಸೂರ್ಯನು ನಿರಯಣ ಮೇಷರಾಶಿ ಪ್ರವೇಶಿಸುವ ಪುಣ್ಯಕಾಲದ ದಿನ, ತಾ. ೧೪-೦೪-೨೦೦೯ ನೇ ಮಂಗಳವಾರವೂ ಯುಗಾದಿ ಹಬ್ಬವನ್ನು ಆಚರಿಸಬೇಕು.

ಈ ಯುಗಾದಿಯ ಶುಭದಿನವು, ಸಂಪದೀಯರ, ಹಾಗೂ ನಮ್ಮೆಲ್ಲಾ ಭಾರತೀಯರ ಆಶೋತ್ತರಗಳ ಸಂಕೇತವಾಗಿರಲಿ. ದೇಶದಲ್ಲಿ ಸುಭಿಕ್ಷಬರಲಿ. ಜನರೆಲ್ಲಾ ಸಮಾಧಾನ, ಶಾಂತಿ, ಹಾಗೂ ಶುದ್ಧಮನಸ್ಕರಾಗಿ, ದೇಶದ ಹಿತಕ್ಕಾಗಿಯೇ ದುಡಿಯುವ ಮನೋಭಾವವನ್ನು ಹೊಂದಲಿ. ದೇಶದ ಯುವಜನ ಹೆಚ್ಚು ಹೆಚ್ಚು ಜವಾಬ್ದಾರಿಯನ್ನು ಹೊತ್ತು, ಪ್ರಗತಿಯ ದಾರಿಯಲ್ಲಿ ನಡೆಯಲಿ.

ಹಿರಿಯರು, ಹೆಣ್ಣುಮಕ್ಕಳು, ಮಕ್ಕಳು, ಹಾಗೂ ದೇಶದ ಸರ್ವಬಾಂಧವರಜೊತೆಗೂಡಿ ನೀತಿಯುತ ಜೀವನವನ್ನು ನಡೆಸಿ ಮುಂದುವರೆಯುವ ಸದ್ಬುದ್ಧಿಯನ್ನು ಆ ದಯಾಮಯನಾದ ಭಗವಂತನು ನಮ್ಮೆಲ್ಲರಿಗೂ ದಯಪಾಲಿಸಲಿ.

ಇಂದು ದೇವರ ಮುಂದೆ, ಪೂಜೆಯನಂತರ ಸೇವಿಸುವ ಬೇವು-ಬೆಲ್ಲದ ನೈಜಾರ್ಥವನ್ನು ನಾವು ಕಂಡುಕೊಂಡು, ನಮ್ಮ ಮಕ್ಕಳಿಗೂ ಅದನ್ನು ಅನುಕರಣೆಗೆ ತರಲು ಪ್ರೇರೇಪಿಸೋಣ.

ಜೈ.. ಜೈ.. ಕರ್ನಾಟಕ ಮಾತೆ-ಭುವನೆಶ್ವರಿ !

ಜೈ.. ಜೈ ...ಜೈ.....ಭಾರತಮಾತೆ !

-ಭುವನೇಶ್ವರಿ ಅಮ್ಮನವರ ಈ ರಥವನ್ನು, ಶಿಕಾಗೋನಗರದಲ್ಲಿ, ’ಅಕ್ಕ ಕನ್ನಡ ವಿಶ್ವಸಮ್ಮೇಳ ’ ನ ಸಮಯದಲ್ಲಿ ಸಭಾಂಗಣದ ಮುಂದೆ ಪ್ರದರ್ಶಿಸಿದ್ದರು.