ಶ್ರೀ ಶಂಕರಾಚಾರ್ಯ
ಕವನ
ಶಂಕರಾಚಾರ್ಯ ನೀ ಮನುಕುಲದ ಆರ್ಯ
ಧಾರ್ಮಿಕತೆಗೆ ತುಂಬಿದೆ ಮಾಧುರ್ಯ
ಕೇರಳದ ಕಾಲಡಿಯಲಿ ಅವತರಿಸಿದವನೇ
ವೇದಗಳಿಗೆ ಭಾಷ್ಯ ಬರೆದವನೇ!
ಮೊಸಳೆಯಿಂ ಸನ್ಯಾಸವ ಸ್ವೀಕರಿಸಿದವನೇ
ಗೋವಿಂದ ಭಗವತ್ಪಾದರ ಶಿಷ್ಯನೇ
ಬರಿಗಾಲಲಿ ಇಡೀ ಭಾರತವ ಸುತ್ತಿದವನೇ
ಆಧ್ಯಾತ್ಮಿಕ ಜಗತ್ತಿನ ಶಿಖರವೇ!
ಶೃಂಗೇರಿ ದ್ವಾರಕಾ ಬದರೀ ಜಗನ್ನಾಥ ಪುರಿ
ನಾಲ್ಕು ಪೀಠಗಳ ಸಂಸ್ಥಾಪಕನೇ
ಬ್ರಹ್ಮವೇ ಸತ್ಯ ಜಗತ್ತೇ ಮಿಥ್ಯಾ ಎಂದವನೇ
ಅಹಂ ಬ್ರಹ್ಮಾಸ್ಮಿ ಎಂದ ಬ್ರಹ್ಮನೇ!
ಅದ್ವೈತ ಸಿದ್ಧಾಂತದ ಮಹತ್ವ ಪ್ರತಿಪಾದಕನೇ
ಜಗತ್ತಿನ ಅದ್ಭುತ ತತ್ವಜ್ಞಾನಿಯೇ
ಶಿವನ ಆರಾಧನೆಯಿಂದ ಜನಿಸಿದ ಶಂಕರನೇ
ಮುವ್ವತ್ತೆರಡರಲಿ ಬ್ರಹ್ಮೈಕ್ಯನಾದವನೇ!
- ಕೆ ನಟರಾಜ್, ಬೆಂಗಳೂರು
ಚಿತ್ರ್
