ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

ಬರಹ

ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

ಶ್ರೀ ಶ್ರೀ ಆದಿಶಂಕರರ ಭಕ್ತರಲ್ಲಿ ಪ್ರಧಾನರಾದವರು, ಕೇವಲ ೪ ಜನ. ಅವರೆಲ್ಲಾ ತಮ್ಮ ತಮ್ಮ ಕ್ಷೇತ್ರದಲ್ಲಿ ಅಸಮಾನರು.

ದೃಢಭಕ್ತಿಯಲ್ಲಿ, ಶ್ರೀ ಪದ್ಮಪಾದಾಚಾರ್ಯರು, ಅನುಪಮಸೇವೆಯಲ್ಲಿ, ಶ್ರೀ ತೋಟಕಾಚಾರ್ಯರು, ಪರಮಾತ್ಮ ಸಾಕ್ಷಾತ್ಕಾರದಲ್ಲಿ ಶ್ರೀ ಹಸ್ತಾಮಲಕಾಚಾರ್ಯರು, ಕೊನೆಯದಾಗಿ ಅದ್ವಿತೀಯ ಪಾಂಡಿತ್ಯದಲ್ಲಿ ಶ್ರೀ ಸುರೇಶ್ವರಾಚಾರ್ಯರು.

ಶಂಕರರ ಪ್ರಥಮ ಶಿಷ್ಯನಾಗಿ ಶ್ರೀ ಪದ್ಮಪಾದಾಚಾರ್ಯರು ಪ್ರಥಮರು. ಇನ್ನೂ ಅನೇಕಸ್ಥಾನದಲ್ಲೂ ಇವರು ಪ್ರಥಮರು. ಶ್ರೀ ತೋಟಕಾಚಾರ್ಯರಿಗೆ, ಪದ್ಮಪಾದ ಸುರೇಶ್ವರಾಚಾರ್ಯರಷ್ಟು ವಿದ್ಯೆಯಾಗಲೀ, ಹಸ್ತಾಮಲಕರಷ್ಟು ಬ್ರಹ್ಮಸಾಕ್ಷಾತ್ಕಾರವಾಗಲೀ ಇರಲಿಲ್ಲ. ನಿಷ್ಟಾವಂತ ಸೇವಕನಂತೆ ಗುರುಗಳನ್ನು ವ್ಯಕ್ತಿಗತ ಶುಶ್ರೂಷೆಯಲ್ಲಿ ಆನಂದವನ್ನು ಕಾಣುತ್ತಿದ್ದರು.

ಶ್ರೀ ಹಸ್ತಾಮಲಕಾಚಾರ್ಯರು, ಯಾವುದೊಂದು ಶಾಸ್ತ್ರವನ್ನೂ ಅಧ್ಯಯನ ಮಾಡದಿದ್ದರೂ ಶಂಕರರು ಅವರನ್ನು ಆತ್ಮಸಾಕ್ಷಾತ್ಕಾರ ಪಡೆದವರತರಹ ಉನ್ನತಮಟ್ಟದಲ್ಲಿ ಇರಿಸಿದ್ದರು.

ಶ್ರೀ ಸುರೇಶ್ವರಾಚಾರ್ಯರು ದಕ್ಷಿಣ ಭಾರತದ ಶೃಂಗೇರಿ ಪೀಠದ ಅಧಿಪತಿಗಳಾಗಲು ಕಾರಣ ; ಅವರ ಅದ್ವಿತೀಯ ಪ್ರತಿಭಾಶಕ್ತಿ. ಶಿಷ್ಯರಾಗಿದ್ದಾಗ್ಯೂ ಗುರುಶಿಷ್ಯರ ಮಧ್ಯೆ ವಯಸ್ಸಿನ ಅಂತರ ವಿಪರೀತವಾಗಿತ್ತು. ಪೂರ್ವಾಶ್ರಮದಲ್ಲಿ ಮಂಡನಮಿಶ್ರರೆಂದು ಹೆಸರುವಾಸಿಯಾಗಿದ್ದ ಅವರು, ಪ್ರಖರವಾದ ಶಾಸ್ತ್ರಾರ್ಥದಲ್ಲಿ ಪರಾಜಿತರಾದಮೇಲೆ ಶಂಕರಭಗವತ್ಪಾದರ ಪಟ್ಟಶಿಷ್ಯರಾದರು. ಸರಳ, ಮತ್ತು ವಿದ್ವತ್ಪೂರ್ಣ ವ್ಯಕ್ತಿತ್ವವಿದ್ದರೂ ಆವರ ವಿನಯತೆಗೆ ಶಂಕರರು ಮಾರುಹೋಗಿದ್ದರು.

ಸುರೇಶ್ವರಾಚಾರ್ಯರ ಉತ್ತರಾಧಿಕಾರಿಗಳಾಗಿ ಬಂದವರು, ನಿತ್ಯಬೋಧಘನರು, ತದನಂತರ, ಜ್ಞಾನಘನರು, ಜ್ಞಾನೋತ್ತಮರು, ಜ್ಞಾನಗಿರಿಗಳು, ಸಿಂಹಗಿರಿಗಳು, ಈಶ್ವರತೀರ್ಥರು, ನರಸಿಂಹತೀರ್ಥರು.

ಶ್ರೀ ಸಚ್ಚಿದಾನಂದ ಭಾರತಿಗಳು ೨೭ ನೇ ಆಚಾರ್ಯರು.

ಶ್ರೀ ಅಭಿನವ ಸಚ್ಚಿದಾನಂದ ಭಾರತಿಗಳು ೨೮ ನೆಯವರು.

ಶ್ರೀ ನೃಸಿಂಹಭಾರತಿಗಳು ೨೯ನೆಯವರು.

೩೦ ನೆಯವರಾಗಿ, ಸಚ್ಚಿದಾನಂದಭಾರತಿಗಳು.

ಶ್ರೀ ಅಭಿನವವ ಸಚ್ಚಿದಾನಂದ ಭಾರತೀ ಸ್ವಾಮಿಗಳು ೩೧ ನೆಯವರಾಗಿ ನೇಮಿಸಲ್ಪಟ್ಟರು.

೩೨ ನೆಯಾರಾಗಿ ಶ್ರೀ ನೃಸಿಂಹಭಾರತಿಗಳು ಸುಮಾರು ೧೯ ನೆಯ ಶತಮಾನದ ಬಹುಭಾಗ ಪೀಠಾಧಿಪತಿಗಳಾಗಿದ್ದರು.

ಶ್ರೀ ಸಚ್ಚಿದನಂದ ಶಿವಾಭಿನವ ನೃಸಿಂಹಭಾರತಿಗಳು ೩೩ ನೆಯ ಪೀಠಾಧಿಪತಿಗಳಾಗಿ ನೇಮಿಸಲ್ಪಟ್ಟರು.

ಶ್ರೀ ಚಂದ್ರಶೇಖರಭಾರತಿ ಮಹಾಸ್ವಾಮಿಗಳು [೧೯೧೨-೧೯೫೪] ಜೀವನ್ಮುಕ್ತರ ಪರಂಪರೆಗೆ ಸೇರಿದವರು. ಇವರು ೩೪ ನೇ ಜಗದ್ಗುರುಗಳು.

೧೯೩೧ ರಲ್ಲಿ ಮೇ ತಿಂಗಳ ೨೨ ರಂದು ಶ್ರೀ ಅಭಿನವ ವಿದ್ಯಾತೀರ್ಥರಿಗೆ ೩೫ ನೆಯ ಜಗದ್ಗುರುಪದವಿಯನ್ನು ದಯಪಾಲಿಸಿ, ಯೋಗಪಟ್ಟವನ್ನಿತ್ತರು.

೩೬ ನೆಯ ವರೇ, ಈಗಿನ, ಶ್ರೀ ಶ್ರೀ ಭಾರತಿ ತೀರ್ಥರು. ಇವರು ಶ್ರೇಷ್ಟಮಟ್ಟದ ಪರಮಹಂಸಪದವಿಯ ಸಂನ್ಯಾಸಿಗಳು. ವೇದಾಂತ ಮತ್ತು ಇತರ ಶಾಸ್ತ್ರಗಳಲ್ಲಿ ಪ್ರಕಾಂಡ ಪಂಡಿತರು. ಮೇಲಾಗಿ ಅತ್ಯಂತ ಉದಾರಿಗಳು. ಇಂತಹ ಶೃಂಗೇರಿ ತೀರ್ಥಸ್ಥಳವು, ದಕ್ಷಿಣಮ್ನಾಯ ಶ್ರೀ ಶಾರದಾಪೀಠದಂತೆ ಹನ್ನೆರಡು ಶತಮಾನಗಳಷ್ಟು ದೀರ್ಘಾವಧಿಯವರೆಗೆ ಅವಿಚ್ಛಿನ್ನವೂ, ಹಾಗೂ ನಿತ್ಯವರ್ಧಿಷ್ಣುವೂ ಆದ ಹಿರಿಮೆಯ ಭಾವಗಳನ್ನು ಪಡೆದ ಸಂಸ್ಥೆ ಮತ್ತೊಂದಿಲ್ಲ. ಇಲ್ಲಿಯೇ ಆದಿಶಂಕರರು ಶ್ರೀ ಚಕ್ರದಮೇಲೆ ಶ್ರೀ ಶಾರದಾಂಬೆಯನ್ನು ಪ್ರತಿಷ್ಠಾಪಿಸಿದರು. ಶಿಷ್ಯರಿಗೆ ಭಾಷ್ಯಪಾಠಗಳನ್ನು ಹೇಳುತ್ತಾ, ತಮ್ಮ ಜೀವಿತದ ಹನ್ನೆರಡು ಅವಿಸ್ಮರಣೀಯ ವರ್ಷಗಳನ್ನು ಕಳೆದರು. ಶ್ರೀ ಸುರೇಶ್ವರಾಚಾರ್ಯರು, ಶ್ರೀ ಆದಿಶಂಕರರ ಉತ್ತರಾಧಿಕಾರಿಗಳಾಗಿ ಅವರ ಕಾರ್ಯವನ್ನು ಮುಂದುವರೆಸಿಕೊಂಡುಹೋಗುವ ಜವಾಬ್ದಾರಿಯನ್ನು ಹೊತ್ತು, ಪೀಠವನ್ನು ಅಲಂಕರಿಸಿದರು. ಉತ್ತರೋತ್ತರ ಉತ್ತರ ಅಧಿಕಾರಿಗಳಾದ, ಶ್ರೀ ವಿದ್ಯಾತೀರ್ಥರು, ಮತ್ತು ಶ್ರೀ ವಿದ್ಯಾರಣ್ಯರೇ ಮೊದಲಾದ ವರ್ಚಸ್ವೀ ಪೀಠಾಧಿಪತಿಗಳು ಸಂಸ್ಥೆಗೆ ಕೀರ್ತಿ ಗೌರವಗಳನ್ನು ತಂದುಕೊಟ್ಟರು. ಮುಂದಿನ ಜಗದ್ಗುರುಗಳಾದ ಶ್ರೀ ಸಚ್ಚಿದಾನಂದಭಾರತಿ, ಶ್ರೀ ಸಚ್ಚಿದಾನಂದಶಿವಾಭಿನವ ನರಸಿಂಹಭಾರತೀ, ಶ್ರೀ ಚಂದ್ರಶೇಖರಭಾರತೀ, ಮತ್ತು ಶ್ರೀ ಅಭಿನವವಿದ್ಯಾತೀರ್ಥರೇ ಮೊದಲಾದ ಯತಿವರ್ಯರು ತಮ್ಮ ಛಾಪನ್ನು ಮೂಡಿಸಿ ಶ್ರೀಪರಂಪರೆಯನ್ನು ಬೆಳಗಿದರು.

ಈ ಅವಿಚ್ಛಿನ್ನ ಪರಂಪರೆಯ ಜಾಡಿನಲ್ಲಿ ೩೬ ನೇ ಪೀಠಾಧಿಪತಿಗಳಾಗಿ ಶ್ರೀ ಶ್ರೀ ಭಾರತೀ ಸ್ವಾಮಿಗಳು ಸಜೀವಪ್ರತೀಕವಾಗಿ ಆಧ್ಯಾತ್ಮಿಕ ಜಿಜ್ಞಾಸುಗಳಿಗೆ ಮಾರ್ಗದರ್ಶನಮಾಡುತ್ತಿದ್ದಾರೆ. ಶ್ರೀ ಶೃಂಗೇರಿ ಜಗದ್ಗುರುಗಳ ಪರಂಪರೆ :

೧. ಶ್ರೀ ಶಂಕರ ಭಗವತ್ಪಾದರು- ಇಸವಿ ೮೨೦ [ವಿದೇಹ ಮುಕ್ತಿ]

೨. ಶ್ರೀ ಸುರೇಶ್ವರಾಚಾರ್ಯರು- ೮೨೦-೮೩೪

೩. ಶ್ರೀ ನಿತ್ಯಬೋಧಘನರು- ೮೩೪-೮೪೮

೪. ಶ್ರೀ ಜ್ಞಾನಘನರು- ೮೪೮-೯೧೦

೫. ಶ್ರೀ ಜ್ಞಾನೋತ್ತಮರು - ೯೧೦-೯೫೪

೬. ಶ್ರೀ ಜ್ಞಾನಗಿರಿಗಳು - ೯೫೪-೧೦೩೮

೭. ಶ್ರೀ ಸಿಂಹಗಿರಿಗಳು - ೧೦೩೮-೧೦೯೮

೮. ಶ್ರೀ ಈಶ್ವರ ತೀರ್ಥರು - ೧೦೯೮-೧೧೪೬

೯. ಶ್ರೀ ನೃಸಿಂಹತೀರ್ಥರು - ೧೧೪೬-೧೨೨೯

೧೦. ಶ್ರೀ ವಿದ್ಯಾತೀರ್ಥರು - ೧೨೨೯-೧೩೩೩

೧೧. ಶ್ರೀ ಭಾರತಿ ತೀರ್ಥರು- ೧೩೩೩-೧೩೮೦

೧೨. ಶ್ರೀ ವಿದ್ಯಾರಣ್ಯರು - ೧೩೮೦-೧೩೮೬

೧೩. ಶ್ರೀ ಚಂದ್ರಶೇಖರಭಾರತಿಗಳು -೧, ೧೩೮೬-೧೩೮೯

೧೪. ಶ್ರೀ ನೃಸಿಂಹ ಭಾರತಿಗಳು -೧ - ೧೩೮೯-೧೪೦೮

೧೫. ಶ್ರೀ ಪುರುಷೋತ್ತಮಭಾರತಿಗಳು-೧ ೧೪೦೮-೧೪೪೮

೧೬. ಶ್ರೀ ಶಂಕರಭಾರತಿಗಳು ೧೪೪೮-೧೪೫೫

೧೭. ಶ್ರೀ ಚಂದ್ರಶೇಖರ ಭಾರತಿಗಳು-೨ ೧೪೫೫-೧೪೬೪

೧೮. ಶ್ರೀ ನೃಸಿಂಹಭಾರತಿಗಳು-೨ ೧೪೬೪-೧೪೭೯

೧೯. ಶ್ರೀ ಪುರುಶೋತ್ತಮಭಾರತಿಗಳು-೨ ೧೪೭೯-೧೫೧೭

೨೦. ಶ್ರೀ ರಾಮಚಂದ್ರ ಭಾರತಿಗಳು ೧೫೧೭-೧೫೬೦

೨೧. ಶ್ರೀ ನೃಸಿಂಹ ಭಾರತಿಗಳು -೩ ೧೫೬೦-೧೫೭೩

೨೨. ಶ್ರೀ ನೃಸಿಂಹ ಭಾರತಿಗಳು ೪ ೧೫೭೩-೧೫೭೬

೨೩. ಶ್ರೀ ನೃಸಿಂಹ ಭಾರತಿಗಳು -೫ ೧೫೭೬-೧೬೦೦

೨೪. ಶ್ರೀ ಅಭಿನವ ನೃಸಿಂಹ ಭಾರತಿಗಳು ೧೬೦೦-೧೬೨೩

೨೫. ಶ್ರೀ ಸಚ್ಚಿದಾನಂದಭಾರತಿಗಳು ೧ ೧೬೨೩-೧೬೬೩

೨೬. ಶ್ರೀ ನೃಸಿಂಹ ಭಾರತಿಗಳು -೬ ೧೬೬೩-೧೭೦೬

೨೭. ಶ್ರೀ ಸಚ್ಚಿದಾನಂದಭಾರತಿಗಳು -೨ ೧೭೦೬-೧೭೪೧

೨೮. ಶ್ರೀ ಅಭಿನವ ಸಚ್ಚಿದಾನಂದ ಭಾರತಿಗಳು-೧ ೧೭೪೧-೧೭೬೭

೨೯. ಶ್ರೀ ನೃಸಿಂಹ ಭಾರತಿಗಳು-೭ ೧೭೬೭-೧೭೭೦

೩೦. ಶ್ರೀ ಸಚ್ಚಿದಾನಂದಭಾರತಿಗಳು-೩ ೧೭೭೦-೧೮೧೪

೩೧. ಶ್ರೀ ಅಭಿನವಸಚ್ಚಿದನಂದ ಭಾರತಿಗಳು -೨ ೧೮೧೪-೧೮೧೭

೩೨. ಶ್ರೀ ನೃಸಿಂಹಭಾರತಿಗಳು ೮ ೧೮೧೭-೧೮೭೯

೩೩. ಶ್ರೀ ಸಚ್ಚಿದಾನಂದ ಶಿವಾಭಿನವನೃಸಿಂಹಭಾರತಿಗಳು -೧೮೭೯-೧೯೧೨

೩೪. ಶ್ರೀ ಚಂದ್ರಶೇಖರಭಾರತಿಗಳು-೩ ೧೯೧೨-೧೯೫೪

೩೫. ಶ್ರೀ ಅಭಿನವ ವಿದ್ಯಾತೀರ್ಥರು ೧೯೫೪-೧೯೮೯

೩೬. ಶ್ರೀ ಭಾರತಿ ತೀರ್ಥರು - - -೧೯೮೯