ಶ್ರೀ ಶ್ರೀಧರ ರ ಜನ್ಮ ಶತಮಾನೋತ್ಸವಕ್ಕೊಂದು ವರದಳ್ಳಿಯ ಭೇಟಿ.

ಶ್ರೀ ಶ್ರೀಧರ ರ ಜನ್ಮ ಶತಮಾನೋತ್ಸವಕ್ಕೊಂದು ವರದಳ್ಳಿಯ ಭೇಟಿ.

ಬರಹ

                      ಶ್ರೀ ಶ್ರೀಧರ ರ ಜನ್ಮ ಶತಮಾನೋತ್ಸವಕ್ಕೊಂದು ವರದಳ್ಳಿಯ ಭೇಟಿ.

 

    ಮಲೆನಾಡಿನ ಮಡಿಲಲ್ಲಿ ಸಾಗರಸೀಮೆಯ ಹೆಸರು ಕೇಳದವರಿಲ್ಲ. ಹಾಗೆ ಸಾಗರದ ಶ್ರೀ ಶ್ರೀಧರ ಸ್ವಾಮಿಗಳ ಹುಟ್ಟೂರಾದ ವರದಳ್ಳಿ ಯ ಕುರಿತು ಅವರಿವರಿಂದ ಕೇಳಿದ್ದರೂ ನೋಡುವ ಭಾಗ್ಯ ಸಿಕ್ಕಿದ್ದು ಮೊನ್ನೆ ಎಂಟನೇ ತಾರೀಕಿಗೆ. ನಾವೆಲ್ಲ ಕುಮಟಾದಿಂದ ಒಂದು ಜೀಪ್ ನಲ್ಲಿ ಹೊರಟಾಗ ಮಧ್ಯಾಹ್ನ ಮೂರು ದಾಟಿತ್ತು.  ಆದರೂ ಕತ್ತಲೆಯಾಗುವ ಮುನ್ನವೇ ಅಂದರೆಸುಮಾರು ಮೂರುಗಂಟೆಗಳ ಪ್ರಯಾಣದಿಂದ ನಾವು ಸಿದ್ದಾಪುರ ಮಾರ್ಗವಾಗಿ ಸಾಗರ ತಲುಪಿದೆವು.ಡಿಸೆಂಬರ್ ಒಂದರಿಂದ ಹದಿಮೂರು ಅಂದರೆ ಇವತ್ತಿನವರೆಗೆ ಶ್ರೀಧರ ಸ್ವಾಮಿಗಳ ಜನ್ಮ ಶತಮಾನೋತ್ಸವವನ್ನು ಹಮ್ಮಿಕೊಂಡಿರುವ ಸಮಿತಿಯವರುತುಂಬಾ ಸುಂದರವಾಗಿ ಎಲ್ಲವನ್ನೂ ರೂಪಿಸಿದ್ದಾರೆ ಅಲ್ಲಿ. ನಾವು ಹೋಗಿರುವುದು ನಮ್ಮ ಮಕ್ಕಳ ಭರತ ನಾಟ್ಯ ಪ್ರೋಗ್ರಾಂ ಗಾಗಿದ್ದರಿಂದ ನಮಗೆ ತಿರುಗಾಡಲು ಹೆಚ್ಚು ಸಮಯವಿರಲಿಲ್ಲ.  ಆದರೆ ಆಶ್ರಮದ ಶಾಂತ ಸುಂದರ ವಾತಾವರಣ ನಮ್ಮ ಮನ ಸೂರೆಗೊಂಡಿತು. ಅದ್ಭುತವಾದ ವೇದಿಕೆ ನಿರ್ಮಿಸಿದ್ದರು. ಊಟ ಉಪಹಾರಗಳು, ತಂಗಲು ವ್ಯವಸ್ತೆ ಎಲ್ಲವೂ ಇವೆ ಇಲ್ಲಿ. ದಿನ ದಿನ ಸಾವಿರಾರು ಭಕ್ತಾದಿಗಳು ಇಲ್ಲಿ ಬಂದು ಹೋಗುತ್ತಾರೆ. ಸುಮಾರು 250 ಮೆಟ್ಟಲುಗಳನ್ನು ಏರಿ ಹೋದರೆಪ್ರಶಾಂತವಾದ ಪರಿಸರದಲ್ಲಿ ಸ್ವಾಮಿಗಳ ದೇವಾಲಯವಿದೆ. ಅದರ ಸುತ್ತ ಸ್ವಾಮಿಗಳ ಬಾಲ್ಯವನ್ನು ಬಿಂಬಿಸುವ ಕೆಲವು ಮೂರ್ತಿಗಳ ಮಂಟಪದಲ್ಲಿ  ಕೂಡಿಸಿದ್ದಾರೆ. ಪ್ರತಿದಿನ ಬೇರೆಬೇರೆ ಹೋಮ ಹವನ, ಸೇವೆಗಳು ನಡೆಯುತ್ತಿವೆ. ಯಾಗಶಾಲೆ, ಯ ಪಕ್ಕ ಅದ್ಭುತವೆನಿಸುವ ರಂಗೋಲಿಗಳನ್ನು ಬಿಡಿಸಲಾಗಿದೆ. ಹಾಗೆ ಅದಕ್ಕಿಂತ ಮುಂದೆ ಕಾಡಲ್ಲಿ ನಡೆದು ಶ್ರೀಧರರ ತಪಸ್ಸಿನ ಗುಹೆಗೆ ಹೋಗಬಹುದಂತೆ.ನಮಗದು ಸಮಯ ಕತ್ತಲು ಕವಿದದ್ದರಿಂದ ಸಾಧ್ಯವಾಗಲಿಲ್ಲ.

                  ಹಾಗೆ ಮೆಟ್ಟಲು ಇಳಿದು ವಾಪಸ್ಸು ಬಂದರೆ ನಮಗೆ ಶ್ರೀಧರ ತೀರ್ಥ ಸಿಗುತ್ತದೆ. ಅದಲ್ಲದೇ ಅಲ್ಲಿರುವ ಪುಟ್ಟಕೆರೆ, ಹಾಗೂ ಗೋವಿನ ಮುಖದಿಂದ ಬೀಳುವ ತೀರ್ಥಸ್ನಾನ ಸಹ ಭಕ್ತರ ಭಕ್ತಿಗೆ ಪ್ರಸಿದ್ಧಿಯಾಗಿದೆ.

               ನಮ್ಮದು ಪುಟ್ಟ ಪ್ರವಾಸವಾದರೂ ಅಲ್ಲಿಯ ಸ್ಥಳಮಹಿಮೆಗಳ ಕುರಿತು ಹೆಚ್ಚು ತಿಳಿಯಲು ಸಾಧ್ಯವಾದಿದ್ದರೂಶ್ರೀಧರ ಆಶ್ರಮ ತುಂಬಾ ಶಾಂತವಾದ, ಭಕ್ತಿಮಯವಾದ ಪ್ರವಾಸೀ ತಾಣ ಎಂಬುದರಲ್ಲಿ ಎರಡು ಮಾತಿಲ್ಲ. ಸಾಗರ ಅಥವಾ ಮಲೆನಾಡಿಗೆ ಭೇಟಿಕೊಡುವ ಎಲ್ಲರೂ ನೋಡಲೇಬೇಕಾದ ಅಪರೂಪದ ಸುಂದರ ತಾಣ ವರದಳ್ಳಿ.