ಶ್ರೀ ಶ್ರೀ ಶ್ರೀ ಶಿವಕುಮಾರ ಸೂರ್ಯನೇ...
ಕವನ
ಕನ್ನಡ ನಾಡಿನ ಮಹಾ ಸಂತ ಶಿವನ ಕುಮಾರ
ಶರಣ ಪಂಥವನು ಸಾರಿದ ನೀ ಪರಮ ಶ್ರೇಷ್ಠ
ಕರ್ನಾಟಕ ದೇಶದ ಸಿದ್ಧಗಂಗಾ ಮಠಾಧೀಶನೆ
ಶಿಕ್ಷಣ ಕ್ಷೇತ್ರದ ಮಹಾ ಕ್ರಾಂತಿಯ ಹರಿಕಾರನೇ
ನೀ ಸಿದ್ದಗಂಗಾ ಮಠದ ನಡೆದಾಡುವ ದೇವರೇ
ವಿದ್ಯೆಯನರಸಿ ಬಂದ ಮಕ್ಕಳ ಪೋಷಕ ಪಿತನೇ
ಮಾಗಡಿಯ ವೀರಾಪುರದಲಿ ಜನಿಸಿದ ವಿಭುವೇ
ಕಾಯಕವೇ ಕೈಲಾಸ ಎಂದಾ ಅಭಿನವ ಬಸವನೇ
ಉದ್ದಾನ ಪರಮ ಶಿವಯೋಗಿಗಳ ಪರಮ ಶಿಷ್ಯ
ಮಠಾಧಿಪತಿಯೆನಿಸಿ ಇಡೀ ಜಗಕೇ ನೀ ಮಾನ್ಯನೇ
ಸಹಸ್ರ ಸಹಸ್ರ ವಿದ್ಯಾರ್ಥಿಗಳ ಪ್ರೀತಿಯ ಗುರುವೇ
ಶಿಕ್ಷಣ ಕ್ಷೇತ್ರವನು ಉದ್ಧರಿಸಿದ ಪರಮ ಸಾಧಕನೇ
ತ್ರಿಪುಂಡ ಭಸ್ಮವ ಧರಿಸಿ ಈ ಜಗಕಿಳಿದಾ ಶಿವನೇ
ಸರಳ ಆಹಾರದಿಂದಲೇ ಶತಮಾನ ಕಂಡ ಶ್ರೇಷ್ಠ
ಭಕ್ತರ ದಾಸೋಹಕೆ ಜೋಳಿಗೆ ಹಿಡಿದ ಮಹಾಭಿಕ್ಷು
ಅನಾಥರನು ಸಾಕಿ ವಿದ್ಯೆಯ ನೀಡಿದ ಮುಮುಕ್ಷು
ನೀ ಕಾಯಕ ಯೋಗಿ ತ್ರಿವಿಧ ಜಂಗಮ ದಾಸೋಹಿ
ನಮ್ಮ ಭಾರತವು ಕಂಡ ಮಹಾ ಪದ್ಮ ಭೂಷಣನೇ
ಕನ್ನಡ ನಾಡು ಕಂಡ ಮಹಾ ಕರ್ನಾಟಕದ ರತ್ನವೇ
ಎಲ್ಲರೂ ಶಿರ ಬಾಗಿ ನಮಿಸುವೆವು ನಿನ್ನ ಸಾಧನೆಗೆ
- ಕೆ ನಟರಾಜ್, ಬೆಂಗಳೂರು
ಚಿತ್ರ್
