ಶ್ರೀ ಹರಿಯೇ ಕೇಳು

ಶ್ರೀ ಹರಿಯೇ ಕೇಳು

ಕವನ

ಮೌನ ತುಂಬಿದೆ ಮನದಿ

ಬಳಲಿ ಬೆಂಡಾಗಿಹೆನು 

ದಯೆ ತೋರಿ ಎನ್ನನು 

ಉದ್ಧರಿಸು ಹರಿಯೇ 

ಜಪತಪದ ಸುಳಿವಿಲ್ಲ 

ಮಂತ್ರ ತಂತ್ರಗಳಿಲ್ಲ

ಏನಿದ್ದರೇನಿನ್ನು 

ನಾಲಿಗೆಲಿ ನೀನೇ

 

ಹತ್ತೂರ ಸುತ್ತಿದೆನು

ಎಲ್ಲೂ ನೆಲೆಯನು ಕಾಣೆ

ಬಾಳಿನೊಳು ಬೆಂದಿಹೆನು

ಕೇಳು ಶ್ರೀ ಹರಿಯೇ 

ಕಾಲು ನೋಯುತಲಿದೆ 

ಹೃದಯ ಬಾಡುತಲಿದೆ 

ಬದುಕು ಬೇಡುತಲಿದೆ 

ನೀ ಹರಸು ಇಂದೇ

 

ನೆಮ್ಮದಿಯ ಅರಸುತಲಿ

ಕ್ಷೇತ್ರ ತಿರುಗುತಲಿಹೆನು

ತನುವಿನೊಳಗೇ ನೆಲೆಸು

ಎನ್ನ ಒಡೆಯನೇ

ಸಾಕಾಗಿ ಹೋಗಿಹುದು

ಭಾವ ಬಂಧ ಎನಗಿಂದು 

ನಿನ್ನೊಡಲ ಜೊತೆಗಿಂದು 

ಎನ್ನ ಸೇರಿಸು ತಂದೇ

-ಹಾ.ಮ.ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್