ಸಂಕ್ರಾಂತಿ-ಭ್ರಾಂತಿ(ಹಾಸ್ಯ)
ಸಂಕ್ರಾಂತಿ-ಭ್ರಾಂತಿ(ಹಾಸ್ಯ)
ಯಥಾಪ್ರಾಕಾರ ನಮ್ಮ ಮಾಯು, ಮರೆತಿರಾ, ಮಾಯಮ್ಮ ನಮ್ಮನೆ ಕೆಲಸದವಳು, ಆವತ್ತು ಹಬ್ಬ ಆದ್ದರಿಂದ ಬೆಳಿಗ್ಗೆ ಬರುವ ಬದಲು ಮಧ್ಯಾಹ್ನ ಕೆಲಸಕ್ಕೆ ಬಂದಳು.
ಹಬ್ಬದೊಟವು ಆಗುತ್ತದೆ, ಕೆಲಸವು ಆಗುತ್ತದೆ ಅಂತ ಅವಳ ಯೋಚನೆ, ನನ್ನಾಕೆಯದು, ಒಂದಿಷ್ಟು ಮಿಕ್ಕಿದ್ದು ಹಾಕಿದರಾಯಿತು, ಪಾತ್ರೆಯೆಲ್ಲ ತೊಳೆಸಿಕೊಳ್ಳಬಹುದು ಎಂಬುದು ಯೋಜನೆ.
ಇರಲಿ, ಈಗ ಅದರಿಂದ ನಿಮಗೇನಾಯಿತು ಅಂದಿರ.
ನಾನು ಸುಮ್ಮನೆ ಇರಲಾರದೆ ನಮ್ಮ ಮಾಯುಗೆ ಎಳ್ಳು ಬೆಲ್ಲ ಕೊಟ್ಟು , ತೊಗೊ ಪ್ರಸಾದ, ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು ಅಂದೆ.
"ಅಣ್ಣಾ, ಆ ಸೊಪ್ಪೆ ಹಾಕಿಲ್ಲ , ಆ ಸಾರಿ ಕೊಟ್ಟಿದ್ರಲ್ಲ ಅಂಗೆ" ಅನ್ನೋದೆ
"ಅದು ಬೇವಿನ ಸೊಪ್ಪು, ಬೇವು ಬೆಲ್ಲ ಇರೋದು ಯುಗಾದಿಗೆ" ಅಂತ ನನ್ನ ಪ್ರವಚನ ಶುರುಹಚ್ಚಿದೆ.
ಬೇವು ಬೆಲ್ಲ ತಿಂದು ಒಳ್ಳೇ ಮಾತಾಡಿ ಅಂತ ಯುಗಾದಿಗೆ, ಎಳ್ಳುಬೆಲ್ಲ ತಿಂದು ಒಳ್ಳೇ ಮಾತಾಡಿ ಅಂತ ಸಂಕ್ರಾಂತಿಗೆ.
ಆರ್ಥ ಆಯಿತ ಮಾಯು ಆಂದೆ
ಅಷ್ಟರಲ್ಲಿ ನನ್ನಾಕಿ, ಪಾತ್ರೆಯೆಲ್ಲ ತಂದು ಕುಕ್ಕಿ " ಜಿಡ್ಡು ಜಾಸ್ತಿ ಇದೆ. ಸರಿಯಾಗಿ ತೊಳೆದಿಡು" ಆಂದಳು.
ಸುಮ್ಮನೆ ಕೆಲಸ ಮಾಡಲಾರದೆ, ನಮ್ಮ ಮಾಯು, "ಅಣ್ಣಾ ಅಂಗಾದ್ರೆ, ವರ್ಷಕ್ಕೆ ಎರಡು ಸಲ ಒಳ್ಳೆ ಮಾತಡ್ಭೇಕು ಆಂತಾನ? " ಅನ್ನೋದೆ.
ಅವಳದೇನು ತಪ್ಪಿಲ್ಲ ಬಿಡಿ, ಯಾಕೆಂದ್ರೆ, ನಮ್ಮ ಜನ, ರಾಜಕಾರಣೆಗಳು, ಯಾವಗಲೊ ಕೆಟ್ಟ ಆಲೋಚನೆ, ಕೆಟ್ಟ ನಡತೆ, ವಿಧಾನ ಸಭೆಯಲ್ಲೂ ಕೆಟ್ಟ ಮಾತು ಇದೆಲ್ಲ ಟಿವಿಯಲ್ಲಿ ನೋಡಿರ್ತಾರೆ, ಅದಕ್ಕೆ ಹೀಗಿದೆ ಈ ದೇಶ.
ನಮ್ಮ ಮಾಯುಗೆ ಒಳ್ಳೆ ಮಾತು ಅಂದ್ರೆ, ಪಾತ್ರೆ ಬೆಳ್ಳಾಗಾಗದೆ ಇದ್ರು, ಚೆನ್ನಾಗಿ ತೊಳಿತಿಯಾ ಅನ್ನೋದು, ಬಟ್ಟೆ ಸರಿಯಾಗಿ ಒಗೆಯದೆ ಇದ್ರು, ಕೊಳೆ ಎಲ್ಲಾ ಚೆನ್ನಾಗಿ ಹೋಗಿದೆ ಅನ್ನೋದು. ಮೊನ್ನೆ ಚೆನ್ನಾಗಿ ಹಿಂಡಿ, ಒಣಗಿ ಹಾಕು ಅಂದೆ,
"ಆಣ್ಣಾ ಈಗ ನೀವು ತರೋ ಸರ್ಟ್ ಸಂದಾಕಿರಲ್ಲ, ಜೋರಾಗಿ ಇಂಡಿದರೆ ಬಿಟ್ಕಬಿಡ್ತದೆ, ಅದು ತೇವದಾಗೆ ಒಣಕ್ಕೊಬೇಕು" ಆಂದಳು
ಇವಳು ಯಾವಾಗ ಪ್ರಯೋಗ ಮಾಡಿದಳು , ಬಟ್ಟೆ ತೇವದಾಗೆ ಒಣಕ್ಕೊಬೇಕು ಆಂತ? ಗೊತ್ತಾಗಲಿಲ್ಲ!
ಅಷ್ಟರಲ್ಲಿ ನನ್ನ SMS ರಿಂಗಿಸಿತು. ನನ್ನ ಆಪ್ತಮಿತ್ರ ಶ್ಯಾಮ ಹಬ್ಬಕ್ಕೆ ಶುಭಾಶಯ ಕಳಿಸಿದ್ದ.
"ನಿಮ್ಮ ಮನಸ್ಸಿನಲ್ಲಿ ಬೇವಿನ ಕಹಿ ಇರಲಿ, ನಿಮ್ಮ ಬಾಯಲ್ಲಿ ಬೆಲ್ಲದ ಸವಿ ಇರಲಿ, ತಾವುಗಳು ಎಂದೆದೊ ನಗುತಿರಲಿ"
ಅಲ್ಲಾ ಬೇವಿನ ಕಹಿ ಮನಸ್ಸಿನಲ್ಲಿ ಇಟ್ಟುಕೊಂಡು ಸದಾ ನಗುತಿರಿ ಅಂದರೆ, ಹೇಗ್ರಿ!? ಇವತ್ತಿನ ವಾಸ್ತವ ಜೀವನ ಹೀಗೆ ಇರಬೇಕು ಅಲ್ವಾ?
ಅವನಿಗೊ ಬೇವು ಬೆಲ್ಲ ಅಲ್ಲಾ , ಎಳ್ಳು ಬೆಲ್ಲ ಅಂತಾ ಸ್ಪಷ್ಟನೆ ನೀಡಿದ್ದಾಯ್ತು.
ನನ್ನ ಧರ್ಮ ಪತ್ನಿಯೂ ಮೂನ್ನೆ ಅಡುಗೆ ಮನೆಯಲ್ಲಿ ಹಾಗಲ ಕಾಯಿ ಗೊಜ್ಜಿಗೆ ಒಗ್ಗರಣೆ ಹಾಕುವಾಗ,
"ಈ ಬಾಳ ಬುಟ್ಟಿಯಲಿ, ಸಿಹಿ ಪಾಲು ನನಗರಲಿ, ಕಹಿಯೆಲ್ಲಾ ನಿಮಗಿರಲಿ" ಆಂತ ಗುನುಗುತ್ತಿದ್ದಳು, ಒಳ್ಳೆ ಗ್ರಹಚಾರ?!
ಈ ಸಂಕ್ರಾಂತಿ ಹಬ್ಬ ಬರೀ ಭ್ರಾಂತಿಯಲ್ಲೆ ಕಳೆಯಿತು. ಏರಿದ ಬೆಲೆಗಳು ಇಳಿಯಲಿಲ್ಲ,
ಯಾತ್ರೆಗೆ ಹೋದವರು, ಸುರಕ್ಷಿತವಾಗಿ ಮನೆಗೆ ಬರಲ್ಲಿಲ್ಲ, ನಮ್ಮನ್ನು, ನಮ್ಮ ಪರಿಸರವನ್ನು ಅಭಿವ್ರದ್ದಿಗೊಳಿಸಲಿ ಎಂದು ಚುನಾಯಿಸಿದ ಪ್ರತಿನಿಧಿ ಕರಾಳ ಚರಿತ್ರೆ ಹೊಂದಿದ್ದ, ಅದೇ ಚರಿತ್ರೆಗೆ ಬಲಿಯಾಗಿಹೋದ,
ಎಲ್ಲ ಹೋದರೆ ಹೋಗಲಿ, ನೆಮ್ಮದಿಯಾಗಿ ಹಬ್ಬ ಮುಗಿಸಿ ಮಲಗೋಣ ಎಂದರೆ, ಪೆಟ್ರೋಲ್ ಬೆಲೆ ಮತ್ತೆ ಏರಿಕೆ. ಸಾಕಪ್ಪ ಸಾಕು.
ನಾವೆಲ್ಲಾ ಸೇರಿ, ಹೋರಾಟ ಮಾಡಬೇಕು. ಸಂಘಟಿತವಾಗಿ ಕ್ರಾಂತಿ ಮಾಡಬೇಕು, ಇನ್ನುಮುಂದೆ ನಾವು ಮಲಗಿರಬಾರದು.
ಒಂದಾಗ ಬೇಕು, ಹೋರಾಡಬೇಕು
"ಏಳಿ , ಎದ್ಡೇಳಿ, ಎದ್ದೇಳಿ, ಏಳಿ"
ಓ ಇದೇನಪ್ಪಾ, ಹೋರಾಟ ಶುರು ಹಚ್ಚಕ್ಕೊಂಡ ಥೇಟ್, ವಿವೇಕಾನಂದರ ಹಾಗೆ ಕರೆಕೊಡ್ತಾ ಇದ್ದಾನೆ, ಅಂದ್ಕೊಂಡ್ರ?
ನಾನು ಘಂಟೆ ಒಂಭತ್ತಾದರೂ ಭಾನುವಾರ ಅಂತ ಇನ್ನು ಮಲಗಿ ಹಗಲು ಕನಸು ಕಾಣುತ್ತಿದ್ದೆ.
ನನ್ನಾಕಿ ಅರಚ್ಚಿದ್ದು, ನನ್ನ ಎಬ್ಬಿಸಲು, "ಎದ್ದೇಳಿ, ಎದ್ದೇಳಿ" ಅಂತ
ಅಲ್ಲೂ ಭ್ರಾಂತಿ!?
-ಮಧ್ವೇಶ್
Comments
ಉ: ಸಂಕ್ರಾಂತಿ-ಭ್ರಾಂತಿ(ಹಾಸ್ಯ)
In reply to ಉ: ಸಂಕ್ರಾಂತಿ-ಭ್ರಾಂತಿ(ಹಾಸ್ಯ) by vani shetty
ಉ: ಸಂಕ್ರಾಂತಿ-ಭ್ರಾಂತಿ(ಹಾಸ್ಯ)
ಉ: ಸಂಕ್ರಾಂತಿ-ಭ್ರಾಂತಿ(ಹಾಸ್ಯ)
In reply to ಉ: ಸಂಕ್ರಾಂತಿ-ಭ್ರಾಂತಿ(ಹಾಸ್ಯ) by gopaljsr
ಉ: ಸಂಕ್ರಾಂತಿ-ಭ್ರಾಂತಿ(ಹಾಸ್ಯ)
ಉ: ಸಂಕ್ರಾಂತಿ-ಭ್ರಾಂತಿ(ಹಾಸ್ಯ)
In reply to ಉ: ಸಂಕ್ರಾಂತಿ-ಭ್ರಾಂತಿ(ಹಾಸ್ಯ) by bhalle
ಉ: ಸಂಕ್ರಾಂತಿ-ಭ್ರಾಂತಿ(ಹಾಸ್ಯ)