ಸಂಕ್ರಾಂತಿ ಶುಭಾಶಯಗಳು
ಕವನ
ಧನುವಿನಿಂದ ಮಕರದೊಳಗೆ
ನಡೆದ ಸೂರ್ಯನು
ಧರೆಯ ಛಳಿಯ ನೀಗಿಸಲು
ಯಾತ್ರೆ ಹೊರಟನು
ಉತ್ತರಾಯಣದ ಪ್ರಖರ
ಬೆಳಕ ಉಡುಗೊರೆ
ಹೆಚ್ಚು ಹಗಲು ಹೆಚ್ಚು ಬೆಳಕು
ಹೊಳೆವುದೀಧರೆ
ಗದ್ದೆಯಲ್ಲಿ ರಾಶಿ ಹಾಕಿ
ಕುಣಿದು ನಲಿಯುವ
ಎಳ್ಳು ಬೆಲ್ಲ ಮೆದ್ದು ಮನದ
ಪಿತ್ತ ಕಳೆಯುವ
ನದಿಯ ದಡದಿ ನೆಂಟರೊಡನೆ
ಊಟ ಅಧ್ಭುತ
ವಸಂತನನ್ನು ಕರೆವ
ಒಳ್ಳೆ ಮಾತನಾಡುತ
ಬೆಳೆವ ರೈತ ಒಳ್ಳೆ ಬೆಲೆಯ
ಪಡೆದು ನಲಿಯಲಿ
ಪ್ರವಾಹ ಕಂಡ ಜನತೆ
ಹೊಸತು ಬದುಕು ಕಾಣಲಿ
ಸಂಕ್ರಾಂತಿ ಎಲ್ಲರಲ್ಲಿ
ಶಾಂತಿ ಹಂಚಲಿ
ಸಂಕ್ರಾಂತಿ ಶುಭಾಶಯಗಳು
ಶ್ರೀನಿವಾಸ ಮಹೇಂದ್ರಕರ್